ನಟನೆ ಹಾಗೂ ಕೃಷಿಗೆ ಸೀಮಿತವಾಗಿದ್ದ ಕಿಶೋರ್ ವಿಸ್ತಾರ ಹೆಸರಿನಲ್ಲಿ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ತಮ್ಮ ನಿರ್ದೇಶನದ ಚಿತ್ರದ ಕತೆಯ ಮೊದಲ ಡ್ರಾಫ್ಟ್‌ ಕೂಡ ರೆಡಿ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ‘ಅಹಾನಿ’ ಎನ್ನುವ ಹೆಸರಿಟ್ಟಿದ್ದಾರೆ.

‘ಹೊಸಬರನ್ನೇ ಹಾಕಿಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಕತೆ ತಯಾರಿ ಹಾಗೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಸಿನಿಮಾ. ಇದು ಚಿತ್ರರಂಗದಲ್ಲಿ ನನ್ನ ಮತ್ತೊಂದು ಹೊಸ ಹೆಜ್ಜೆ ಅಂದುಕೊಳ್ಳಬಹುದು. ಯಾಕೆಂದರೆ ಇಲ್ಲಿವರೆಗೂ ನಟನಾಗಿದ್ದೆ. ಈಗ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಮುಂದಾಗಿರುವೆ’ ಎಂಬುದು ದುನಿಯಾ ಕಿಶೋರ್ ಮಾತುಗಳು.

ದುನಿಯಾ v/s ಸಿಂಹ; ಹೊಸ ಚಿತ್ರಕ್ಕೆ ಜತೆಯಾದ ಇಬ್ಬರು ಖಡಕ್‌ ಕಲಾವಿದರು! 

ಇದೊಂದು ಥ್ರಿಲ್ಲರ್ ಜಾನರ್ ಸಿನಿಮಾ ಆಗಿದ್ದು, ಕನ್ನಡದ ಜತೆಗೆ ತಮಿಳಿನಲ್ಲೂ ಮೂಡಿ ಬರಲಿದೆ. ಚಿತ್ರದಲ್ಲಿ ತಾವು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಮುಂದಿನ ದಿನಗಳಲ್ಲಿ ಆ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ ಕಿಶೋರ್.