ಖಾಸಗಿ ವಿಡಿಯೋ ಲೀಕ್ ಮಾಡ್ತೀವಿ; ರಾಜಕೀಯಕ್ಕೆ ಕಾಲಿಡುವ ಮುನ್ನ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ

ಬಿಜೆಪಿ ಸೇರ್ತಾರೆ ಕಿಚ್ಚ ಸುದೀಪ್? ಸುದ್ದಿ ಹರಡುವ ಮುನ್ನವೇ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಪತ್ರ.... 

Kannada actor Kichcha Sudeep gets threat letter before joining political party Jack manju files complaint vcs

ಕನ್ನಡ ಚಿತ್ರರಂಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಕಾಲಿಡುತ್ತಾರೆ ಎಂದು ಕೆಲವು ತಿಂಗಳುಗಳಿಂದ ಹರಿದಾಡುತ್ತಿದೆ. ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಮಾತನಾಡಲಿದ್ದಾರೆಂತೆ. ಅಷ್ಟರಲ್ಲಿ ಬೆದರಿಕೆ ಪತ್ರವೊಂದು ಕಿಚ್ಚನ ಮ್ಯಾನೇಜರ್ ಜಾಕ್ ಮಂಜು ಕೈ ಸೇರಿದೆ. ತಕ್ಷಣವೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಹೌದು!  ಅವಾಚ್ಯ ಶಬ್ದಗಳನ್ನು ಬಳಸಿ ಬರೆದಿರುವ ಪತ್ರ ಸುದೀಪ್ ಮ್ಯಾನೇಜರ್ ಜಾಕ್ ಮಂಜುಗೆ ಸಿಕ್ಕಿದೆ. ಪತ್ರದಲ್ಲಿ ಸುದೀಪ್ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಉಲ್ಲೇಖ ಮಾಡಲಾಗಿದೆ. ಪತ್ರ ಓಡಿದ ಕೆಲವೇ ಕ್ಷಣಗಳಲ್ಲಿ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೋಡಿದ್ದಾರೆ. ದೂರಿನನ್ವಯ ಐಪಿಸಿ 504, 506 ಹಾಗೂ  ಐಟಿ ಅಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. IPC 504 ಬೆದರಿಕೆ IPC 506 ಪ್ರಾಣ ಬೆಸರಿಕೆ ಅಡಿಯಲ್ಲಿ ಎಫ್‌ ಐ ಆರ್‌ ದಾಖಲಾಗಿದೆ. 

ರಾಜಕೀಯ ಎಂಟ್ರಿ? 

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನಡೆಸುತ್ತಿರುವ ಇಂದಿನ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಕೂಡ ಭಾಗವಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಧ್ಯಾಹ್ನ ಪ್ರೆಸ್‌ಮೀಟ್‌ ನಡೆಯಲಿದೆ. ಕಿಚ್ಚ ಪಕ್ಷ ಸೇರುತ್ತಾರೆ ಅನ್ನೋದು ಬಹುತೇಕ ಅನುಮಾನವೇ. ಆದರೂ ಮೂಲಗಳಿಂದ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆಗಳಿದೆ. 

ಅಭಿಮಾನಿಗಳಿಗೆ ಕಿಚ್ಚ ಗುಡ್‌ನ್ಯೂಸ್: ಒಟ್ಟೊಟ್ಟಿಗೆ 3 ಸಿನಿಮಾಗೆ ಸಹಿ

ಹೈದರಾದ್‌ನಲ್ಲಿ ಸುದೀಪ್ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಇಂದು ಬೆಂಗಳೂರಿಗೆ ವಾಪಸ್ ಅಗುತ್ತಿದ್ದಾರೆ. ಆನಂತರ ತಮ್ಮ ಬಿಜೆಪಿ ಮನೆಯಿಂದ ಸುದ್ದಿಗೋಷ್ಠಿ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೆ ವಿಡಿಯೋ ಕಾಲ್ ಮೂಲಕ ಯಡಿಯೂರಪ್ಪ, ಬೊಮ್ಮಾಯಿ, ಸುಧಾಕರ್‌ ಜೊತೆ ಮೀಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ಮೂರು ಸಿನಿಮಾ ಸಿಹ?

ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ವಿದೆ. ಅಭಿಮಾನಿಗಳು ಮುಂದಿನ ಸಿನಿಮಾಗಾಗಿ   ಸುದೀಪ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳ ಎಲ್ಲಾ ಪ್ರಶ್ನೆ ಮತ್ತು ಕುತೂಹಲಗಳಿಗೆ ಸುದೀಪ್ ಉತ್ತರ  ನೀಡಿದ್ದಾರೆ. 

'ಬಿಲ್ಲಾ ರಂಗ ಬಾಷಾ' ಆಗಿ ಬರ್ತಿದ್ದಾರೆ ಕಿಚ್ಚ; ಯಾವಾಗ ಚಿತ್ರೀಕರಣ?

ಮುಂದಿನ ಸಿನಿಮಾದ ಬಗ್ಗೆ ಕಿಚ್ಚ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಇಷ್ಟು ದೊಡ್ಡ ಬ್ರೇಕ್ ಯಾವುತ್ತು ಪಡೆದಿರಲಿಲ್ಲ. ಇದು ತನ್ನ ಮೊದಲ ಬ್ರೇಕ್ ಎಂದಿರುವ ಸುದೀಪ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.  ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬೆರೆದಿದ್ದಾರೆ. ಮೂರು ಸಿನಿಮಾಗಳನ್ನು ಫೈನಲ್ ಮಾಡಿರುವುದಾಗಿ ಸುದೀಪ್ ಹೇಳಿದ್ದಾರೆ. ಮೂರು ಸಿನಿಮಾಗಳ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹಗಲು ರಾತ್ರಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಮೂರು ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios