ಅವರ ಈ ಮಾತು ‘ಕಾಲಚಕ್ರ’ ಚಿತ್ರಕ್ಕೆ ಸಂಬಂಧಿಸಿದ್ದು. ತುಂಬಾ ವಿಶೇಷವಾದ ಎರಡು ಗೆಟಪ್‌ನಲ್ಲಿ ನಟಿಸಿರುವ ಸಿನಿಮಾ ಇದು. ಜತೆಗೆ ಇಂಥ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ನಟ ಸುದೀಪ್‌ ಅವರು ಬಂದಿದ್ದರು. ಈ ಕಾರಣಕ್ಕೆ ವಸಿಷ್ಠ ಸಿಂಹ ಅವರಿಗೆ ಈ ಸಿನಿಮಾ ವಿಶೇಷವಾಗಿ ಕಾಣುತ್ತಿದೆ. ಮೊನ್ನೆ ಚಿತ್ರದ ಟೀಸರ್‌ ಬಿಡುಗಡೆ ಸಂಭ್ರಮದಲ್ಲಿ ಕಿಚ್ಚನ ಪಕ್ಕ ನಿಂತು ಕಂಚಿನ ಕಂಠದಲ್ಲಿ ಮಾತಿಗೆ ನಿಂತರು ಸಿಂಹ.

ಕನ್ನಡ ಮೇಷ್ಟ್ರು ಕೈ ಹಿಡಿದ ದರ್ಶನ್!

‘ನಾನು ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಇದು ನನ್ನ ಹುಟ್ಟು ಹಬ್ಬ. ಈ ದಿನ ಸುದೀಪ್‌ ಅವರು ಟೀಸರ್‌ ಬಿಡುಗಡೆಗೆ ಬಂದಿರುವುದು ನನ್ನ ಉತ್ಸಾಹ ಹೆಚ್ಚಿಸಿದೆ. ಚಿತ್ರದ ಹೆಸರು, ಫಸ್ಟ್‌ ಲುಕ್‌ ನೋಡಿದಾಗಲೇ ಬಹುತೇಕರು ಫೋನ್‌ ಮಾಡಿ ಕಾಲಚಕ್ರ ನನ್ನ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲು ಆಗಲಿದೆ ಎಂದು ಹಾರೈಸಿದ್ದರು. ಟೀಸರ್‌ ಕೂಡ ಅದೇ ರೀತಿ ಎಲ್ಲ ತಲುಪುತ್ತದೆಂಬ ನಂಬಿಕೆ ಇದೆ’ ಎಂದು ವಸಿಷ್ಟಹೇಳಿಕೊಂಡರು.

ನಟ ಸುದೀಪ್‌ ಅವರ ಕೈಗೆ ಮೈಕ್‌ ಹೋಗುತ್ತಿದಂತೆಯೇ ಕಲಾವಿದರ ಸಂಭಾಗಣದಲ್ಲಿ ಶಿಳ್ಳೆ, ಕೇಕೆ, ಚಪ್ಪಾಳೆಗಳ ಸದ್ದು ಜೋರಾಯಿತು. ಆ ಸಂಭ್ರಮದಲ್ಲೇ ಸುದೀಪ್‌ ಮಾತನಾಡಿದರು. ‘ಒಂದೇ ಉದ್ಯಮದಲ್ಲಿ ಹಲವು

ಆ್ಯಂಗ್ರಿ ಯಂಗ್‌ಮ್ಯಾನ್‌ ಇರಲು ಹೇಗೆ ಸಾಧ್ಯ? ಹೀಗಾಗಿ ಬಿರುದುಗಳು ಸಹ ಪೈರಸಿ ಆಗುತ್ತಿದೆ. ಒಬ್ಬ ಕಲಾವಿದನನ್ನು ನೋಡಿದಾಗ ಸಿಗುವ ಹೆಮ್ಮೆ ಏನನ್ನು ನೋಡಿದರೂ ಸಿಗೋದಿಲ್ಲ. ವಸಿಷ್ಠ ಸಿಂಹ ಬುದ್ಧಿವಂತ ನಟ. ಸಿನಿಮಾ ಕಮರ್ಷಿಯಲ್ಲಾಗಿಯೂ ಗೆಲ್ಲಬೇಕು. ಇದರ ಮಧ್ಯೆ ತಾನೊಬ್ಬ ಕಲಾವಿದ ಎನ್ನುವ ಪಟ್ಟಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಕಾಲಚಕ್ರ ಎನ್ನುವುದು ಎಲ್ಲರ ಜೀವನದಲ್ಲೂ ಇದೆ. ಆಗ ವಸಿಷ್ಠ ಸಿಂಹ ಅವರ ಕಾಲಚಕ್ರ ಸಿನಿಮಾ ಆಗುತ್ತಿದೆ. ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಹಿಟ್‌ ಕೊಡಲಿ. ಈ ಸಿನಿಮಾ ನನಗೂ ತೋರಿಸಿ. ಖಂಡಿತ ನೋಡುತ್ತೇನೆ’ ಎನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

ವೇಶ್ಯೆಯಾಗಿ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡ ಕನ್ನಡದ ನಟಿ?

ನೈಜಘಟನೆ ಆಧಾರಿತ ಕತೆಯಾಗಿದ್ದು, ನೋಡುಗನಿಗೆ ಪ್ರತಿಯೊಂದು ಪಾತ್ರವೂ ತನಗೇ ಸಂಬಂಧಿದ್ದೇ ಎಂದುಕೊಳ್ಳುತ್ತಾನೆ. ಆ ಮಟ್ಟಿಗೆ ಪ್ರೇಕ್ಷಕನಿಗೆ ಕನೆಕ್ಟ್ ಆಗುವ ಅಂಶಗಳು ಈ ಚಿತ್ರದಲ್ಲಿವೆ ಎಂಬುದನ್ನು ಚಿತ್ರದ ನಿರ್ದೇಶಕ ಸುಮಂತ್‌ಕ್ರಾಂತಿ ವಿವರಿಸಿದರು. ರಕ್ಷಾ ಚಿತ್ರದ ನಾಯಕಿ. ಉಳಿದಂತೆ ಬೇಬಿ ಅವಿಕಾ, ಸಂಗೀತ ನಿರ್ದೇಶಕ ಗುರುಕಿರಣ್‌, ಸಾಹಿತಿ ಡಾ ವಿ.ನಾಗೇಂದ್ರಪ್ರಸಾದ್‌, ಸಂತೋಷ್‌ ನಾಯಕ್‌ ಅವರು ಹಾಜರಿದ್ದು, ಚಿತ್ರದ ಕುರಿತು ಮಾತನಾಡಿದರು.