ಕಾಲಿವುಡ್‌ ಹಾಟ್ ನಟಿ ಪಟ್ಟಕ್ಕೆ ಸದಾ, ಮೊನಾಲಿಸಾ ಅದವಳು ಇದ್ದಕ್ಕಿದಂತೆ 'ಶ್ರೀಮತಿ 21 ಎಫ್‌'ನಲ್ಲಿ ವೇಶ್ಯೆಯಾಗಿ ಕಾಣಿಸಿಕೊಂಡಿದ್ದು ಏಕೆ? ಇಲ್ಲಿದೆ ನೋಡಿ..

ಕನ್ನಡ ಚಿತ್ರರಂಗದ ಲಾಫಿಂಗ್ ಸ್ಟಾರ್ ಶೈನಿಂಗ್ ಬಾಯ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಮೊನಾಲಿಸಾ' ಚಿತ್ರದಲ್ಲಿ ನಟಿಯಾಗಿ ಮಿಂಚಿದ ಸದಾ ಈಗ ಲೈಂಗಿಕ ಕಾರ್ಯಕರ್ತೆಯಾಗಿದ್ದಾರೆ. ಗಾಬರಿಯಾಗಬೇಡಿ. ನಿಜ ಜೀವನದಲ್ಲಿ ಅಲ್ಲ. ತೆಲುಗು ಚಿತ್ರದಲ್ಲಿ. ಈಗಾಗಲೇ ಈ ಚಿತ್ರದ ಕೆಲವು ಪೋಸ್ಟರ್‌ಗಳನ್ನು ಅಂತರ್ಜಾಲದಲ್ಲಿ ಕಾಣಿಸುತ್ತಿದ್ದು, ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

BB7: 'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!

ತಮಿಳಿನ 'ಟಾರ್ಚ್‌ಲೈಟ್‌' ಚಿತ್ರವನ್ನು ತೆಲುಗಿನಲ್ಲಿ 'ಶ್ರೀಮತಿ 21 ಎಎಫ್' ಎಂದು ರಿಮೇಕ್ ಮಾಡಲಾಗುತ್ತಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅದರಲ್ಲಿ ಸದಾ ವೇಶ್ಯೆ ಎಂದು ಮುಖಕ್ಕೆ ಚಾರ್ಚ್ ಬಿಟ್ಟುಕೊಂಡು, 300 ರು. ಎಂದು ಗ್ರಾಹಕರನ್ನು ಸೆಳೆದುಕೊಳ್ಳಲು ಯತ್ನಿಸುವುದು ಟ್ರೈಲರ್‌ನಲ್ಲಿದೆ. ಮೊದಲ ನೋಟದಲ್ಲಿಯೇ ಇದು ಲೈಂಗಿಕ ಕಾರ್ಯಕರ್ತೆಯರ ಕಥಾ ಹಂದರ ಇರೋ, ಸೂಕ್ಷ್ಮ ಕಥೆಯುಳ್ಳ ಚಿತ್ರವೆಂಬುವುದು ಅರ್ಥವಾಗುತ್ತದೆ. ಈ ಚಿತ್ರ ನವೆಂಬರ್ 1ರಂದು ತೆರೆ ಕಾಣುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.

BB7: ಜೈ ಜಗದೀಶ್‌ 'ನಾನ್‌ಸೆನ್ಸ್‌ ಅಲ್ಲ': ಅಪ್ಪನ ಬಗ್ಗೆ ಮಗಳ ಬ್ಯಾಟಿಂಗ್!

ತುಂಬಾ ಟ್ರೆಡಿಷನಲ್ ಲುಕ್‌ಗೆ ಸ್ಟಿಕ್ ಆನ್ ಆಗಿರೋ ಸದಾ, ವೇಶ್ಯೆ ಪಾತ್ರ ಒಪ್ಪಿಕೊಂಡಿದ್ದು, ಅದರಲ್ಲಿಯೂ ಅರೆ ಬರೆ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸಂಪ್ರಾದಾಯಿಕ ಇಮೇಜ್‌ ವುಳ್ಳ ಸದಾ ಕಳೆದ ಕೆಲವು ವರ್ಷಗಳಿಂದ ನಾಪತ್ತೆಯಾಗಿದ್ದರು. ಇದೀಗ ಇವರು ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ, ಇಂಥದ್ದೊಂದು ಪಾತ್ರದಲ್ಲಿ ಎಂಬುದನ್ನು ನೋಡಿ ಶಾಕ್ ಆಗಿದ್ದಾರೆ. 'ನೀವು ಬ್ರೇಕ್‌ ತೆಗದುಕೊಂಡಿದ್ದು ಇಂಥ ಪಾತ್ರಕ್ಕಾ?' ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

16 ವರ್ಷಕ್ಕೆ ಟಾಲಿವುಡ್‌ಗೆ ಕಾಲಿಟ್ಟ ಸದಾ ಮೋಸ್ಟ್‌ ಟ್ಯಾಲೆಂಟೆಡ್‌ ನಟಿ ಪಟ್ಟವನ್ನು ತಮ್ಮದಾಗಿಸಿಕೊಂಡವರು. ಕನ್ನಡದ 'ಮೊನಾಲಿಸಾ'ದಲ್ಲಿ ಧ್ಯಾನ್ ಅವರೊಂದಿಗೆ ಕಾಣಿಸಿಕೊಂಡಿದ್ದ ಅವರು, ಅನೇಕ ಸ್ಟಾರ್ ನಟರೊಂದಿಗೆ ಹಲವು ಚಿತ್ರಗಳನ್ನು ಮಾಡಿದ್ದಾರೆ.

ಬಿಗ್ ಬಾಸ್ ಪ್ರಿಯಾಂಕಾ ರಿಯಲ್ ಲೈಫ್‌ ಬ್ಯಾಕ್‌ಗ್ರೌಂಡ್ ಗೊತ್ತಾ? ಇಲ್ಲಿದೆ ನೋಡಿ

ಸೌಂದರ್ಯ ಹಾಗೂ ಅಭಿನಯದಿಂದ ಹಲವು ಅಭಿಮಾನಿಗಳನ್ನು ಗಳಿಸುವಲ್ಲಿಯೂ ಯಶಸ್ವಿಯಾದವರು. ಇದೀಗ ಇಂಥ ಲೈಂಗಿಕ ಅಲ್ಪಸಂಖ್ಯಾತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ.

 ಅಕ್ಟೋಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ