ಈ ಚಿತ್ರಕ್ಕೆ ಉದಯ್‌ ಕುಮಾರ್‌ ಬಂಡವಾಳ ಹೂಡಿದ್ದು, ಶಿವಪ್ರಸಾದ್‌ ಸಾಥ್‌ ನೀಡಿದ್ದಾರೆ. ಮೊದಲಿಗೆ ಒಂದು ರೋಚಕ ಮರ್ಡರ್‌ ಮಿಸ್ಟರಿ ಕಥೆಯನ್ನು ಜಗ್ಗೇಶ್‌ಗೆ ವಿವರಿಸಲಾಗಿತ್ತು. ಮುಂಗಡ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಆ ಕಥೆಯ ಬದಲಿಗೆ ಒಂದು ಸಮಾಜಮುಖಿ ಆಗಿರುವ ವಿಷಯ ಆಯ್ದುಕೊಳ್ಳುವಂತೆ ನಿರ್ಮಾಪಕರು ಸಲಹೆ ನೀಡಿದರಂತೆ. ಆಗ ಶಿಕ್ಷಣ ವ್ಯವಸ್ಥೆ ಕುರಿತ ಕಥೆಯನ್ನು ಕವಿರಾಜ್‌ ಆಯ್ಕೆ ಮಾಡಿಕೊಂಡರು.

ಕನ್ನಡ ಮೇಷ್ಟ್ರು ಕಾಳಿದಾಸ ಚಿತ್ರದಲ್ಲಿ ಜಗ್ಗೇಶ್ ಜತೆಗೆ 21 ನಟಿಯರು!

ಈ ಬದಲಾವಣೆ ಜಗ್ಗೇಶ್‌ಗೆ ತಕ್ಷಣಕ್ಕೆ ಇಷ್ಟಆಗಲಿಲ್ಲವಂತೆ. ಆದರೆ ಪೂರ್ತಿ ಕಥೆ ಕೇಳಿದ ಬಳಿಕ ಖುಷಿಯಿಂದಲೇ ಒಪ್ಪಿಕೊಂಡರು. ಒಟ್ಟಾರೆ ‘ಕಾಳಿದಾಸ’ನ ಕಥಾಹಂದರ ಏನು ಎಂಬುದಕ್ಕೆ ಈಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಸುಳಿವು ಸಿಕ್ಕಿದೆ. ಇದೊಂದು ಗಂಭೀರ ವಿಚಾರವೇ ಆಗಿದ್ದರೂ ಅದನ್ನು ಹಾಸ್ಯದ ಧಾಟಿಯಲ್ಲಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರಂತೆ.

‘ಈ ಸಿನಿಮಾ ಯೂನಿವರ್ಸಲ…. ಇದರಲ್ಲಿ ಇರುವುದು ಪ್ರತಿ ಮನೆಗೂ ಸಂಬಂಧಿಸಿದ ವಿಷಯ. ಮಗವಿನ ಶಿಕ್ಷಣಕ್ಕಾಗಿ ಬಡ ಮೇಷ್ಟು್ರ ಏನೆಲ್ಲ ಕಷ್ಟಪಡುತ್ತಾನೆ ಎಂಬುದು ಕಥಾಸಾರಾಂಶ. ಆ ಮೇಷ್ಟು್ರ ಪಾತ್ರದ ಮೂಲಕ ಎಲ್ಲರ ಹೃದಯಕ್ಕೆ ನಾಟುವ ಮೆಸೇಜ… ನೀಡಲಾಗಿದೆ’ ಎಂದು ವಿವರಿಸುತ್ತಾರೆ ಜಗ್ಗೇಶ್‌. ಒಂದೊಳ್ಳೆಯ ಪಾತ್ರದಲ್ಲಿ ನಟಿಸಿದ ತೃಪ್ತಿ ಮೇಘನಾ ಗಾಂವ್ಕರ್‌ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ‘ಬೋರ್ಡಿಂಗ್‌ ಶಾಲೆಯಲ್ಲಿ ಬೆಳೆದ ನನಗೆ ಕನ್ನಡದಲ್ಲಿ ಮಾತನಾಡಿದರೆ ಅಲ್ಲಿನ ಶಿಕ್ಷಕರು ಹೊಡೆಯುತ್ತಿದ್ದರು.

10 ವರ್ಷದ ನಂತರ ಒಂದಾದ ಜಗ್ಗೇಶ್-ಗುರು; ಬರಲಿದೆ ‘ರಂಗನಾಯಕ’

ಯಾಕೆ ಹೀಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು. ನಂತರದ ದಿನಗಳಲ್ಲೂ ನನಗೆ ಭಾಷಾಪ್ರೇಮದ ಬಗ್ಗೆ ತಿಳಿವಳಿಕೆ ಇರಲಿಲ್ಲ. ಚಿತ್ರರಂಗಕ್ಕೆ ಕಾಲಿಟ್ಟಮೇಲೆ ಮಾತೃಭಾಷೆಯ ಪ್ರಾಮುಖ್ಯತೆ ಅರ್ಥವಾಯಿತು’ ಎನ್ನುತ್ತಾರೆ ಮೇಘನಾ. ಈ ಹಿಂದೆ ‘ಸರ್ವರ್‌ ಸೋಮಣ್ಣ’ ಸಿನಿಮಾ ನೋಡಿ ಜಗ್ಗೇಶ್‌ ಮೇಲೆ ಮೇಘನಾಗೆ ಕ್ರಶ್‌ ಆಗಿತ್ತಂತೆ. ಈಗ ಜತೆಯಾಗಿ ತೆರೆಹಂಚಿಕೊಂಡಿರುವುದು ಅವರಿಗೆ ಎಲ್ಲಿಲ್ಲದ ಸಂತಸ ಮೂಡಿಸಿದೆ.