Asianet Suvarna News Asianet Suvarna News

ಕಿಚ್ಚ ಸುದೀಪ್ @51: ಬಹುಮುಖ ಪ್ರತಿಭೆಯ ನಟನ ಐಷಾರಾಮಿ ಜೀವನ, ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಅವರ 51 ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಸಿನಿ ಜೀವನ, ನಿವ್ವಳ ಮೌಲ್ಯ ಮತ್ತು ಐಷಾರಾಮಿ ಜೀವನಶೈಲಿಯ ಬಗ್ಗೆ ಒಂದು ನೋಟ.

kannada actor Kiccha Sudeep Net Worth Income Investments Assets And Lifestyle gow
Author
First Published Sep 2, 2024, 6:25 PM IST | Last Updated Sep 2, 2024, 6:25 PM IST

ಕನ್ನಡದ ಸ್ಟಾರ್ ಹೀರೋ ಗಳಲ್ಲಿ ಒಬ್ಬರಾಗಿರುವ ಕಿಚ್ಚ ಸುದೀಪ್ ತಮ್ಮ 51 ನೇ  ಹುಟ್ಟುಹಬ್ಬದ  ಸಂಭ್ರಮದಲ್ಲಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದ ಕರುನಾಡಿನಾದ್ಯಂತ ಕಿಚ್ಚನ ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದ್ದಾರೆ. ಈ ವಿಶೇಷ ದಿನ ಕಿಚ್ಚನ ಜೀವನದ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.

ಕಿಚ್ಚ ಸುದೀಪ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಸುದೀಪ, ಭಾರತೀಯ ಸಿನಿಮಾದಲ್ಲಿ ಬಹುಮುಖ ಪ್ರತಿಭೆ. ನಟನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಮತ್ತು ನಿರೂಪಕರಾಗಿ ಅದ್ಭುತ ವೃತ್ತಿಜೀವನವನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮ ಪ್ರತಿಭೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ.  ಸುದೀಪ್ ಅವರ ಜೀವನ ಚರಿತ್ರೆ, ಅವರ ವೃತ್ತಿಪರ ಪಯಣ, ಅಂದಾಜು ನಿವ್ವಳ ಮೌಲ್ಯ ಮತ್ತು ಅವರ ಐಷಾರಾಮಿ ಜೀವನಶೈಲಿಯ ಬಗ್ಗೆ ಇಲ್ಲಿ ನೀಡಲಾಗಿದೆ.

ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಬೆಂಕಿ ಬಿರುಗಾಳಿ, ಮೊದಲ ಪ್ರೋಮೋ ರಿಲೀಸ್‌!

ಇತ್ತೀಚಿನ ವರದಿಗಳ ಪ್ರಕಾರ, ನಟ ಕಿಚ್ಚ ಸುದೀಪ್ ಅವರ ನಿವ್ವಳ ಮೌಲ್ಯ 2024 ರ ವೇಳೆಗೆ  300 ಕೋಟಿ ರೂ ದಾಟುವ ನಿರೀಕ್ಷೆಯಿದೆ.  ಇದು ಕೇವಲ ಅಂದಾಜು ಅಷ್ಟೇ. ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರನ್ನಾಗಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ, ಜಾಹೀರಾತುಗಳು ಮತ್ತು ಹಲವಾರು ಉದ್ಯಮಗಳಲ್ಲಿ ಹೂಡಿಕೆಗಳು ಸೇರಿದಂತೆ ವಿವಿಧ ಮೂಲಗಳಿಂದ ಅವರಿಗೆ ಆದಾಯ ಬರುತ್ತದೆ.   

ವಿವಿಧ ವ್ಯವಹಾರಗಳು, ಸಿನಿಮಾಗಳ ಸಂಭಾವನೆ ಮತ್ತು ಲಾಭದ ಪಾಲು ಸೇರಿದಂತೆ ವಿವಿಧ ಮೂಲಗಳಿಂದ ಸುದೀಪ್ ಅವರಿಗೆ ಆದಾಯ ಬರುತ್ತದೆ. ಸುದೀಪ್ ಅವರ ಚಿತ್ರಗಳು ಭಾರಿ ಮಟ್ಟದಲ್ಲಿ ಸದ್ದು ಮಾಡಿ ಮಾರುಕಟ್ಟೆಯಲ್ಲಿ ಲಾಭ ತರುತ್ತವೆ. ಸುದೀಪ್ ಅವರ ಚಿತ್ರಗಳು ತೆಲುಗು ಮತ್ತು ತಮಿಳು ಸೇರಿ ಹಲವು ಭಾಷೆಗಳಿಗೆ ಡಬ್  ಕೂಡ ಆಗಿದೆ.

ಬಿಗ್ ಬಾಸ್ ತೆಲುಗು 8ರಲ್ಲಿ ಕನ್ನಡ ಕಿರುತೆರೆಯ ನಾಲ್ವರು, ಇವರೆಲ್ಲಾ ನೆನಪಿದ್ದಾರಾ?

ಸುದೀಪ್ ನಟನಾಗಿ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಸುದೀಪ್ ಅವರು ಬಹುಭಾಷಾ ನಟನಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಉತ್ತಮ ಬೇಡಿಕೆಯಿದೆ. ರಾಜಮೌಳಿ ಅವರ "ಈಗ" ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ಮಿಂಚಿ ಅನೇಕರ ಹೃದಯ ಗೆದ್ದಿದ್ದರು. 

ಸುದೀಪ್ ಓರ್ವ ಅತ್ಯುತ್ತಮ ನಿರೂಪಕ ಅನ್ನುವುದರಲ್ಲಿ ಎರಡು ಮಾತಿಲ್ಲ.  ಬಿಗ್ ಬಾಸ್ ಕನ್ನಡ ಆರಂಭದಿಂದ ಇಲ್ಲಿವರೆಗೂ ಅವರೇ ನಿರೂಪಣೆ ಮಾಡಿದ್ದಾರೆ. ವಿವಾದಾತ್ಮ ಶೋ ಅಂತಲೇ ಖ್ಯಾತಿ ಪಡೆದಿರುವ ಬಿಗ್‌ಬಾಸ್‌ ರಿಯಾಲಿಟಿ ಶೋವನ್ನು  ಕಿಚ್ಚ ಬಿಟ್ಟು ಬೇರೆ ಯಾರಿದಂಲೂ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬುದು ಕನ್ನಡಡಿಗರ ಅಭಿಪ್ರಾಯ. ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸುವ ಮೂಲಕ ಕೂ ಸುದೀಪ ಹೆಚ್ಚುವರಿ ಆದಾಯವನ್ನು ಗಳಿಸುತ್ತಾರೆ.   

ಸುದೀಪ್ ಹಲವಾರು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಪ್ರತಿ ಬ್ರಾಂಡ್ ಜಾಹೀರಾತಿನಿಂದ ಅವರು ಗಳಿಸುವ ಹಣವು ಅವರ ಆದಾಯದ ಮೇಲೆ ಸಕಾರಾತ್ಮಕವಾಗಿದೆ.  ಸುದೀಪ್ ಅವರಿಗೆ ಬೆಂಗಳೂರಿನಲ್ಲಿ ಒಂದು ಐಷಾರಾಮಿ ಮನೆ ಇದೆ.  ಬಂಗಲೆಗಳೂ ಇವೆ. ಹೊಟೇಲ್ ಉದ್ಯಮಿ, ಪಬ್‌, ರೆಸ್ಟೋರೆಂಟ್‌ಗಳನ್ನು ಕೂಡ ಹೊಂದಿದ್ದಾರೆ.  ಸುದೀಪ್ ಅವರಿಗೆ ಕಾರುಗಳೆಂದರೆ ತುಂಬಾ ಇಷ್ಟ. ಅವರ ಗ್ಯಾರೇಜ್‌ನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳ ಸಂಗ್ರಹವಿದೆ. ಇವರ ಪತ್ನಿ ಪ್ರಿಯಾ ಸುದೀಪ್‌ ಕೂಡ ನಿರ್ಮಾಪಕಿ, ಮಗಳು ಸಾನ್ವಿ ಉತ್ತಮ ಹಾಡುಗಾರ್ತಿ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಹುಟ್ಟುಹಬ್ಬದ  ಅಂಗವಾಗಿ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ಝಲಕ್ ನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಹನುಮಾನ್ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ‌ ಚೈತನ್ಯ ರೆಡ್ಡಿ ಬಿಲ್ಲ ರಂಗ ಭಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಅನೂಪ್‌ ಭಂಡಾರಿ ಮತ್ತು ಕಿಚ್ಚ ವಿಕ್ರಾಂತ್ ರೋಣ ಬಳಿಕ ಮತ್ತೆ ಒಂದಾಗುತ್ತಿದ್ದಾರೆ.

Latest Videos
Follow Us:
Download App:
  • android
  • ios