Asianet Suvarna News Asianet Suvarna News

ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಮಿಂದೆದ್ದ ಸುದೀಪ್ ದಂಪತಿ

-ಸುದೀಪ್-ಪ್ರಿಯಾ ದಾಂಪತ್ಯಕ್ಕೆ 20 ವರ್ಷ
-ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ
-ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸಾನ್ವಿ ಸುದೀಪ್ ವಿಶ್

Kannada Actor Kiccha Sudeep celebrates 20th wedding anniversary shares selfie with wife
Author
Bangalore, First Published Oct 20, 2021, 11:07 AM IST
  • Facebook
  • Twitter
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep)  ಮತ್ತು ಪ್ರಿಯಾ (Priya) ವೈವಾಹಿಕ ಜೀವನಕ್ಕೆ 20 ವರ್ಷ ತುಂಬಿದ್ದು, ಈ ಸಂಭ್ರಮವನ್ನು (Celebration) ಅವರು ಒಟ್ಟಾಗಿ ಆಚರಿಸಿದ್ದಾರೆ.  ಅಭಿಮಾನಿಗಳು, (Fans) ಸ್ನೇಹಿತರು (Friends) ಹಾಗೂ ಸೆಲೆಬ್ರಿಟಿಗಳು (Celebrities) ಈ ಜೋಡಿಗೆ ಮದುವೆ ವಾರ್ಷಿಕೋತ್ಸವದ (Wedding Anniversary) ಶುಭಾಶಯವನ್ನು (Wishes) ಕೋರಿದ್ದಾರೆ. 

ಸುದೀಪ್​ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಆತ್ಮೀಯರು ಬರೆದ ಕವನವನ್ನು  ಪ್ರಿಯಾ ಶೇರ್​ ಮಾಡಿಕೊಂಡಿದ್ದು, ಇಂಗ್ಲಿಷ್​ನಲ್ಲಿರುವ ಆ ಕವನವನ್ನು ಅವರು ಟ್ವಿಟರ್​ನಲ್ಲಿ (Tweeter) ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್​ ಮೆಚ್ಚುಗೆ ಸೂಚಿಸಿದ್ದಾರೆ. 'ಈಗಾಗಲೇ 20 ವರ್ಷ ಆಯ್ತು. ಸಮಯ ತುಂಬ ಬೇಗ ಸಾಗುತ್ತಿದೆ. ಖುಷಿಯ 20 ವರ್ಷಗಳು. ಧನ್ಯವಾದಗಳು ಪ್ರಿಯಾ. ಮತ್ತು ಈ ಪ್ರೀತಿಯ ಕವನಕ್ಕೂ ಧನ್ಯವಾದ' ಎಂದು ಸುದೀಪ್​ ಟ್ವೀಟ್​ ಮಾಡಿ, ಪತ್ನಿಯ ಜೊತೆಗಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. 

 

ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಮಗಳು ಸಾನ್ವಿ  ಸುದೀಪ್ (Saanvi Sudeep)​ ಕೂಡ ವಿಶ್​ ಮಾಡಿದ್ದಾರೆ. ವೆಡ್ಡಿಂಗ್​ ಆ್ಯನಿವರ್ಸರಿ ಸಂಭ್ರಮಕ್ಕೆ ಕೇಕ್​ ಕತ್ತರಿಸಲಾಗಿದ್ದು, ಆಪ್ತರ ಜೊತೆ ಸೇರಿ ಸಂಭ್ರಮಿಸಲಾಗಿದೆ. ಆ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ತಂದೆ-ತಾಯಿಗೆ ಸಾನ್ವಿ ವಿಶ್​ ಮಾಡಿದ್ದಾರೆ. 2001ರ ಅಕ್ಟೋಬರ್‌ನಲ್ಲಿ ಸುದೀಪ್ ಮತ್ತು ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ 2004ರಲ್ಲಿ ಸಾನ್ವಿ ಜನಿಸಿದರು. 

40.5 ಕೋಟಿ ಗಳಿಕೆ ದಾಖಲಿಸಿದ ಕೋಟಿಗೊಬ್ಬ 3

ಸುದೀಪ್ ಅಭಿನಯದ 'ಕೋಟಿಗೊಬ್ಬ 3' (Kotigobba 3) ಚಿತ್ರವು ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದ್ದು, ಬಿಡುಗಡೆಯಾದ ನಾಲ್ಕೇ ದಿನದಲ್ಲಿ 40.5 ಕೋಟಿ ಹಣ ಗಳಿಸಿದ್ದು, ಸ್ವತಃ ಕಿಚ್ಚ ಸುದೀಪ್‌ ಅವರೇ ಈ ಸುದ್ದಿಯನ್ನು ರೀಟ್ವೀಟ್‌ ಮಾಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ವಿತರಕರು ಮತ್ತು ನಿರ್ಮಾಪಕರ ನಡುವೆ ಹಣಕಾಸಿನ ಸಮಸ್ಯೆ​ ಉಂಟಾಗಿದ್ದರಿಂದ ಒಂದು ದಿನ ತಡವಾಗಿ ಚಿತ್ರ ಬಿಡುಗಡೆ ಆಯಿತು. 

ಇದರಿಂದ ಸುಮಾರು ಏಳೆಂಟು ಕೋಟಿ ನಷ್ಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು (Soorappa Babu) ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಇದಕ್ಕೆ ಕಾರಣವಾದವರ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದರು. ಶನಿವಾರ 'ಕೋಟಿಗೊಬ್ಬ 3' ಸಕ್ಸಸ್‌ ಮೀಟ್‌ ಆಯೋಜಿಸಿದ್ದೇವೆ. ಅಲ್ಲಿ ನನಗಾದ ಅನ್ಯಾಯ, ನನ್ನ ವಿರುದ್ಧದ ಪಿತೂರಿ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದು ಸೂರಪ್ಪ ಬಾಬು ತಿಳಿಸಿದ್ದಾರೆ.  

ಕೋಟಿಗೊಬ್ಬ ಬಗ್ಗೆ ಸುದೀಪ್ ಪೋಸ್ಟ್

ಇನ್ನು ಇತ್ತಿಚೆಗಷ್ಟೇ 'ಕೋಟಿಗೊಬ್ಬ 3'ಚಿತ್ರದ ನಿರ್ಮಾಪಕರ ವಿರುದ್ಧ ಸಿನಿಮಾ ವಿತರಕ ಖಾಝಾಪೀರ್‌  (Khajapeer)ಚಿತ್ರದ ಅಗ್ರಿಮೆಂಟ್‌ಗೆ ಸಂಬಂಧಿಸಿದ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಲ್ಲದೇ ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಧಮ್ಕಿ ಹಾಕಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ಅನ್ನು ದಾಖಲಿಸಿದ್ದರು.

"

Follow Us:
Download App:
  • android
  • ios