Asianet Suvarna News Asianet Suvarna News

40.5 ಕೋಟಿ ಗಳಿಕೆ ದಾಖಲಿಸಿದ ಕೋಟಿಗೊಬ್ಬ 3: ಸುದೀಪ್‌ ಟ್ವೀಟ್‌

ಅಡೆತಡೆಗಳ ನಡುವೆಯೂ ಅದ್ಧೂರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಕೋಟಿಗಟ್ಟಲೆ ಗಳಿಸುತ್ತಿರುವ ಕೋಟಿಗೊಬ್ಬ 3 ಬಗ್ಗೆ ಟ್ಟೀಟ್ ಮಾಡಿದ್ದ ಕಿಚ್ಚ ಸುದೀಪ್. 
 

Kannada Kotigobba 3 film collection 41 crores says Kiccha Sudeep  vcs
Author
Bangalore, First Published Oct 20, 2021, 8:51 AM IST
  • Facebook
  • Twitter
  • Whatsapp

ಕಿಚ್ಚ ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಚಿತ್ರ ನಾಲ್ಕೇ ದಿನದಲ್ಲಿ 40.5 ಕೋಟಿ ರು. ಬಾಚಿಕೊಂಡಿದೆ. ಸ್ವತಃ ಕಿಚ್ಚ ಸುದೀಪ್‌ ಅವರೇ ಈ ಸುದ್ದಿಯನ್ನು ರೀಟ್ವೀಟ್‌ ಮಾಡಿದ್ದಾರೆ. ಜೊತೆಗೆ ‘ಕೋಟಿಗೊಬ್ಬ 3’ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಎಲ್ಲೆಡೆ ಕಿಚ್ಚ ಸುದೀಪ್‌ ಅಭಿಮಾನಿಗಳು ಈ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಈ ತಿಂಗಳ 14 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕಾರಣಾಂತರಗಳಿಂದ ಒಂದು ದಿನ ವಿಳಂಬವಾಗಿ ಆರಂಭವಾಗಿತ್ತು. ಇದರಿಂದ ಏಳೆಂಟು ಕೋಟಿ ರು. ನಷ್ಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಇದಕ್ಕೆ ಕಾರಣವಾದವರ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದರು. ಇದೀಗ ಚಿತ್ರ ದಾಖಲೆಯ ಗಳಿಕೆ ಕಾಣುತ್ತಿದ್ದು, ಚಿತ್ರತಂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಜನಪ್ರವಾಹ ಥಿಯೇಟರ್‌ಗೆ ಬರುತ್ತಿರುವುದು ಚಿತ್ರೋದ್ಯಮದ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ನೆಚ್ಚಿನ ನಟ ಕಿಚ್ಚನನ್ನು ದೊಡ್ಡೆ ತೆರೆ ಮೇಲೆ ನೋಡಲು ಅಭಿಮಾನಿಗಳು ಸಂಭ್ರಮ

"

ಭಗವಂತ ಕಣ್ಬಿಟ್ಟಿದ್ದಾನೆ : ಸೂರಪ್ಪ ಬಾಬು, ನಿರ್ಮಾಪಕ

ಈಗ ಆಗಿರುವ 40.5 ಕೋಟಿ ರು. ಗಳಿಕೆ ಒಟ್ಟಾರೆಯಾಗಿ ಗಳಿಕೆಯಾದ ಮೊತ್ತ. ದೇವರು ಎಷ್ಟೇ ಕಷ್ಟಕೊಟ್ಟರೂ ಕೊನೆಗೂ ಕೈ ಹಿಡಿದ. ನಾನು ಎಷ್ಟೆಲ್ಲ ಪಾಡು ಪಟ್ಟಿದ್ದೆ ಅನ್ನುವುದು ಭಗವಂತನೊಬ್ಬನಿಗೇ ಗೊತ್ತು. ಈಗ ಬಹಳ ಖುಷಿ ಅನಿಸುತ್ತಿದೆ. ಸುದೀಪ್‌, ಜಾಕ್‌ ಮಂಜು ಸೇರಿದಂತೆ ಹಲವರು ನನ್ನ ಜೊತೆಗೆ ನಿಂತರು. ಸುದೀಪ್‌ ಅಭಿಮಾನಿಗಳು ಪೈರಸಿ ಆಗದಂತೆ ನೋಡಿಕೊಂಡರು. ಶನಿವಾರ ‘ಕೋಟಿಗೊಬ್ಬ 3’ ಸಕ್ಸಸ್‌ ಮೀಟ್‌ ಆಯೋಜಿಸಿದ್ದೇವೆ. ಅಲ್ಲಿ ನನಗಾದ ಅನ್ಯಾಯ, ನನ್ನ ವಿರುದ್ಧದ ಪಿತೂರಿ ಎಲ್ಲದಕ್ಕೂ ಉತ್ತರ ಕೊಡ್ತೀನಿ. ಇತರ ಭಾಷೆಗಳಲ್ಲಿ ಇನ್ನೆರಡು ವಾರ ಬಿಟ್ಟು ‘ಕೋಟಿಗೊಬ್ಬ 3’ ರಿಲೀಸ್‌ ಆಗುತ್ತಿದೆ.

ಕಿಚ್ಚ ಸುದೀಪ್ ಮೊಬೈಲ್ ವಾಲ್‌ ಪೇಪರ್ ಏನು ಗೊತ್ತಾ ? SSLC ಮಾರ್ಕ್ಸ್ ಎಷ್ಟಿತ್ತು ?
Follow Us:
Download App:
  • android
  • ios