Asianet Suvarna News Asianet Suvarna News

ಕೋಟಿಗೊಬ್ಬ ಬಗ್ಗೆ ಸುದೀಪ್ ಪೋಸ್ಟ್: ಮನದಾಳದ ಮಾತು ಬಿಚ್ಚಿಟ್ಟ ಕಿಚ್ಚ

  • ಇನ್‌ಸ್ಟಾಗ್ರಾಮ್‌ನಲ್ಲಿ ಕಿಚ್ಚನ ಪೋಸ್ಟ್
  • ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಬೇಕು
  • ನಾವು ನಮ್ಮ ಕೆಲಸ ಮಾಡಬೇಕು
Sandalwood actor Kichcha Sudeep Instagram post about kotigobba 3
Author
Bangalore, First Published Oct 18, 2021, 1:17 PM IST

ಕೋಟಿಗೊಬ್ಬ 3' (Kottigobba 3) ಯಶಸ್ಸಿನ ಸಂಭ್ರಮದಲ್ಲಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಎಲ್ಲರ ಜೀವನದಲ್ಲಿ ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ ಮತ್ತು ನಗುವಿನಿಂದ ಎದುರಿಸಬೇಕು ಎಂದು ಹೇಳಿದ್ದಾರೆ. ಹೌದು! ಸುದೀಪ್ ಅಭಿನಯದ 'ಕೋಟಿಗೊಬ್ಬ 3'  ಚಿತ್ರ ಕಳೆದ ಗುರುವಾರ ಬಿಡುಗಡೆಯಾಗಬೇಕಿತ್ತು. ಈ ವೇಳೆ ಕಿಚ್ಚನ ಅಭಿಮಾನಿಗಳು ಬೇಸರಗೊಂಡು ಚಿತ್ರಮಂದಿರಗಳ ಬಳಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ತಾಂತ್ರಿಕ ಸಮಸ್ಯೆಯಿಂದ ಮಾರನೇ ಚಿತ್ರ ರಿಲೀಸ್  ಆಯಿತು. 

ಇದರ ನಡುವೆಯೂ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಸುದೀಪ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 'ನನಗೆ ಬೆಂಬಲ ನೀಡಿದ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. ನೀವು ಅದ್ಭುತ, ನಿಮ್ಮ ಜೀವನದಲ್ಲಿ ಒಂದು ಸ್ಥಾನವನ್ನು ಗಳಿಸಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಅದನ್ನು ನಾನು ಗೌರವಿಸುತ್ತೇನೆ ಮತ್ತು  ಎಲ್ಲರೂ ತಮ್ಮ ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಬೇಕು. ಅದನ್ನು ನಾವು ಶಾಂತಿಯಿಂದ, ನಗುನಗುತ ಎದುರಿಸಬೇಕು' ಎಂದು ಬರೆದು ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದೊಂದು ಬ್ಯೂಟಿಫುಲ್ ಚಾಲೆಂಜ್: ಕೋಟಿಗೊಬ್ಬ ಕಲಹ ಕುರಿತು ಕಿಚ್ಚ ಮಾತು

ಕೆಲವು ವಿತರಕರಿಂದ (Distributors) 'ಕೋಟಿಗೊಬ್ಬ 3' ಚಿತ್ರ ಬಿಡುಗಡೆ ತಡವಾಗಿದ್ದು, ಇದರಿಂದ ನಿರ್ಮಾಪಕರಿಗೆ ಮೋಸವಾಗಿದೆ. ಮೊದಲು ನಮ್ಮ ದಡ ಸೇರೋಣ, ಕೋಪ ತಾಪ ಎಲ್ಲವೂ ಆಮೇಲೆ, ಮೊದಲ ದಿನ ಚಿತ್ರ ರಿಲೀಸ್ ಆಗಲಿಲ್ಲ ಎಂದು ಬೇಜಾರಿಲ್ಲ. ನನ್ನ ಕೆಲವು ಸ್ನೇಹಿತರು ಸಿನಿಮಾ ಬಿಡುಗಡೆಯಾಗಲ್ಲ ಅಂತ ಗಾಳಿ ಸುದ್ದಿ ಹಬ್ಬಿಸಿದ್ದಲ್ಲದೇ,  ಸಿನಿಮಾ ರಿಲೀಸ್ ಮಾಡೋದಕ್ಕೆ ತಾಕತ್ತಿಲ್ಲ ಅಂತ ಹೇಳಿದರು. ಸಿನಿಮಾ ರಿಲೀಸ್ ಆಗದೇ ಇದ್ದಿದ್ದು ನನಗೆ ಅವಮಾನ ಅಂತ ಅನ್ನಿಸಲಿಲ್ಲ. ಇದೊಂದು ಚಾಲೆಂಜ್‌ ಅಂತ ಸ್ವೀಕರಿಸಿದೆ. ನಾನು ಸಂಪಾದಿಸಿದ್ದು ನಿಮ್ಮನ್ನು, ನನ್ನ ಅಭಿಮಾನಿ ಸ್ನೇಹಿತರನ್ನು ಇಲ್ಲಿ ಎಲ್ಲ ತರದ ಅವಮಾನ ಆಗುತ್ತಿರುತ್ತೆ. ನಾವು ನಮ್ಮ ಕೆಲಸ ಮಾಡಬೇಕು ಅಷ್ಟೇ ಎಂದು ಇತ್ತಿಚೆಗಷ್ಟೇ ಸುವರ್ಣ ನ್ಯೂಸ್ ಜೊತೆ ಸುದೀಪ್ ಮಾಹಿತಿ ಹಂಚಿಕೊಂಡಿದ್ದರು.

ಇನ್ನು 'ಕೋಟಿಗೊಬ್ಬ 3'ಚಿತ್ರದ ನಿರ್ಮಾಪಕ ಸೂರಪ್ಪ ಬಾಬು (Soorappa Babu) ವಿರುದ್ಧ ಸಿನಿಮಾ ವಿತರಕ ಖಾಝಾಪೀರ್‌  (Khajapeer)ಚಿತ್ರದ ಅಗ್ರಿಮೆಂಟ್‌ಗೆ ಸಂಬಂಧಿಸಿದ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಲ್ಲದೇ ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಧಮ್ಕಿ ಹಾಕಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ಅನ್ನು ದಾಖಲಿಸಿದ್ದರು. ಹಾಗೂ ನಮ್ಮ ಜೀವಕ್ಕೆ ಪ್ರಾಣಭಯವಿದ್ದು, ನಮಗೆ ರಕ್ಷಣೆ ಒದಗಿಸಬೇಕು, ಸಂಕಷ್ಟದಲ್ಲಿರುವ ನಮಗೆ ನ್ಯಾಯ ಒದಗಿಸಬೇಕೆಂದು ದೂರಿನಲ್ಲಿ ಮನವಿಯನ್ನು ಮಾಡಿಕೊಂಡಿದ್ದರು

Follow Us:
Download App:
  • android
  • ios