ನಟ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಚಿತ್ರೀಕರಣದ ವೇಳೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಹೆಸರಿನ ಪಕ್ಕ ಯಾರ ಹೆಸರನ್ನೂ ಸೇರಿಸಬೇಡಿ; ತಂದೆ ಬಗ್ಗೆ ಜಗ್ಗೇಶ್ ಭಾವುಕ ಮಾತು! 

ಹಿರಿಯ ನಟ ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ. 'ಅಣ್ಣನ ಮನೆಗೆ ರಾಘಣ್ಣ ಆರೋಗ್ಯ ವಿಚಾರಿಸಲು ಹೋದ ಕ್ಷಣ. ರಾಘಣ್ಣನ ಆತ್ಮೀಯ ಸಹೋದರ ಭಾವ ಅಣ್ಣ ಪ್ರೀತಿಯ ಆ ದಿನಗಳು ನೆನಪಿಸಿತು. ನನ್ನ ಮನ ರಾಯರ ಪ್ರಾರ್ಥಿಸಿದ್ದು ಒಂದೇ, ರಾಘಣ್ಣನಿಗೆ ಆಯುಷ್ಮಾನ್ಭವ ಆರೋಗ್ಯಂ ದೇಹಿಮೆ,' ಎಂದು ಬರೆದು ಕೊಂಡಿದ್ದಾರೆ. 

ಶನಿ ಮಹಾದೇವಪ್ಪ ಬಗ್ಗೆ ಜಗ್ಗೇಶ್ ಟ್ಟೀಟ್; 'ಮೇಯರ್ ಫಂಡ್‌ನಿಂದ 5 ಲಕ್ಷ ಬರುವಂತೆ ಮಾಡಿದೆ'!

ಡಿಸ್ಚಾರ್ಜ್ ಆದ ದಿನವೇ ರಾಘವೇಂದ್ರ ರಾಜ್‌ಕುಮಾರ್‌ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ್ದಾರೆ. 'ಶೂಟಿಂಗ್ ನನ್ನನ್ನು ಕಾಪಾಡಿತು. ಮಲ್ಲೇಶ್ವರದ ನೂರು ಅಡಿ ರಸ್ತೆಯಲ್ಲಿರುವ ಮಧು ಶೂಟಿಂಗ್ ಹೌಸ್‌ನಲ್ಲಿ ಬೆಳಕು ಹೆಸರಿನ ಸಿನಿಮಾ ಶೂಟಿಂಗ್‌ನಲ್ಲಿದ್ದಾಗ ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಾಣಿಸಿತು. ತಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲಾಯಿತು. ಶೂಟಿಂಗ್‌ನಲ್ಲಿ ಇಲ್ಲದಿದ್ದರೆ, ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಭಿಮಾನಿಗಳ ಆಶೀರ್ವಾದ, ಕುಟುಂಬದವರ ಪ್ರೀತಿ ನನ್ನನ್ನು ಕಾಪಾಡುತ್ತಿದೆ' ಎಂದು ಹೇಳಿದ್ದಾರೆ.