ಪ್ರತಿಭೆಗಳನ್ನು ಗುರುತಿಸಿ, ಗುರುಗಳಿಗೆ ಗೌರವ ಭಕ್ತಿ ನೀಡಿ,  ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಸರ್ವರನ್ನು ಸಮನಾಗಿ ಕಾಣುವ ನಟ ನವರಸ ನಾಯಕ ಜಗ್ಗೇಶ್ ತಂದೆ ಜನ್ಮದಿನದಂದು ಭಾವುಕರಾಗಿದ್ದಾರೆ.

50ನೇ ಹುಟ್ಟುಹಬ್ಬದ ದಿನ ತಂದೆ ಜೊತೆ ಸೆರೆ ಹಿಡಿದ ಕೊನೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ನಟ ಜಗ್ಗೇಶ್ ಶೇರ್ ಅಪ್ಲೋಡ್ ಮಾಡಿದ್ದಾರೆ. ನೆನಪುಗಳನ್ನು ಹಂಚಿಕೊಳ್ಳುತ್ತಾ ಮುಂದಿನ ಪೀಳಿಗೆಗೆ ಬುದ್ಧಿ ಮಾತು ಹೇಳಿದ್ದಾರೆ.

ಜಗ್ಗೇಶ್ ಫೋಸ್ಟ್:
'ಅಪ್ಪನ ಜೊತೆ ತೆಗೆಸಿಕೊಂಡ, ಕೊನೇ ಚಿತ್ರ .ಇದು ನನ್ನ 50ನೇ ಹುಟ್ಟು ಹಬ್ಬದ ಸಂದರ್ಭ. ಮಗನ ಹುಟ್ಟುಹಬ್ಬ ಬಂದರೆ ಬೆಳಗಿನ ಜಾವ 5 ಗಂಟೆಗೇ ಮನೆ ಮುಂದೆ ಇರುತ್ತಿದ್ದರು ಅಪ್ಪ. ಪ್ರತಿಯೊಬ್ಬ ತಂದೆಗೂ ತನ್ನ ಬೆಳವಣಿಗೆಗಿಂತ ತನ್ನ ಮಕ್ಕಳು ಸಾಧಿಸಿಬಿಟ್ಟರೆ, ಆಗುವ ಆನಂದ ಬ್ರಹ್ಮಾನಂದ. ಆ ವಿಷಯದಲ್ಲಿ ನಾನು ಅಪ್ಪನಿಗೆ ಹೆಮ್ಮೆ ಪಡುವಂತೆ ರಾಯರ ದಯೆಯಿಂದ ಬೆಳೆದು, ಅಪ್ಪನ ಹಾಗೂ ವಂಶದ ಗೌರವ ಹೆಚ್ಚಿಸಿದೆ. ಯಾಕೆ ಜನ್ಮ ಕೊಟ್ಟ ತಂದೆಗೆ ತಮ್ಮ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಎಂದರೆ, ಮಗ ಗೆದ್ದರೆ ತಾನು ಗೆದ್ದಂತೆ. ತನ್ನ ವಂಶ ಗೆದ್ದಂಥ ಭಾವ ಅವರಿಗೆ,' ಎಂದು ಬರೆದುಕೊಂಡಿದ್ದಾರೆ.

ಯಶ್‌ ಬಗ್ಗೆ ನಟ ಜಗ್ಗೇಶ್ ಟ್ಟೀಟ್; ಗಾಡ್ ಫಾದರ್ ಇಲ್ಲದೇ ಬೆಳೆದಿದ್ದು ಯಾರು? 

ಜಗ್ಗೇಶ ಸಂದೇಶ:
'ಎಲ್ಲಾ ಯುವ ಸಮಾಜಕ್ಕೆ ನನ್ನ ಸಂದೇಶವಿದು. ದಯಮಾಡಿ ಎಷ್ಟೇ ಶ್ರಮವಾದರೂ, ಅಪಮಾನವಾದರೂ, ಅವಮಾನವಾದರೂ ಸಹಿಸಿ ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೇ  ಜೀವನ ಗೆದ್ದು ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿಬಿಡಿ. ಆಗ ನಿಮ್ಮ ಮಕ್ಕಳು ನಿಮ್ಮ ಹೆಸರು ಉಳಿಸುವ ಯೋಗ ರಾಯರು ನೀಡುತ್ತಾರೆ. ನಾವು ನಡೆದು ಕೊಂಡಂತೆ ನಮ್ಮ ಮುಂದಿನ ಪೀಳಿಗೆ ಇರುತ್ತದೆ. ಜೊತೆಗೆ ನಿಮ್ಮ ಹೆಸರಿನ ಪಕ್ಕ ಅಪ್ಪನ ಹೆಸರು ಹೆಮ್ಮೆಯಿಂದ ಸೇರಿಸಿಕೊಳ್ಳಿ. ಅದರ ಖುಷಿಯೇ ಬೇರೆ. ಅದಕ್ಕೆ ನನ್ನ ಹೆಸರು ಜಗ್ಗೇಶ್ ಶಿವಲಿಂಗಪ್ಪ. ಯಾವುದೇ ಕಾರಣಕ್ಕೂ ನಿಮ್ಮ ಹೆಸರಿನ ಪಕ್ಕ ಯಾವ ನಟ, ನಟಿ ರಾಜಕಾರಣಿ ಹೆಸರು ಸೇರಿಸಬೇಡಿ. ಜನ್ಮ ಕೊಟ್ಟ ತಂದೆ ಒಳಗೊಳಗೇ ದುಃಖ ಪಡುತ್ತಾನೆ. ನೆನಪಿಡಿ ನಾವು ಏನೇ ಸಾಧಿಸಿದರೂ ಆ ಸಾಧನೆಗೆ ದೇಹ ಜೀವ ಉಸಿರು ಅಪ್ಪನ ಭಿಕ್ಷೆಯಿಂದಲೆ,' ಎಂದು ಹೇಳಿದ್ದಾರೆ.

ಶನಿ ಮಹಾದೇವಪ್ಪ ಬಗ್ಗೆ ಜಗ್ಗೇಶ್ ಟ್ಟೀಟ್; 'ಮೇಯರ್ ಫಂಡ್‌ನಿಂದ 5 ಲಕ್ಷ ಬರುವಂತೆ ಮಾಡಿದೆ'! 

ತಿಳಿದೋ ತಿಳಿಯದೆಯೋ ಯವ್ವೌನದ ಮದದಲ್ಲಿ ಅಪ್ಪನಿಗೆ ನೋವಿಸಿದ್ದರೆ ಕ್ಷಮೆ ಇರಲಿ, ಅಪ್ಪ ನಿನ್ನ ಮಗನ ಮೇಲೆ ಪ್ರೀತಿ ಇರಲಿ, ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.