ಹಿರಿಯ ಕಲಾವಿದ ಶನಿ ಮಹಾದೇವಪ್ಪ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸುಮಾರು 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದ ಶನಿ ಮಹಾದೇವಪ್ಪ ವಯೋಸಹಜ ಕಾಯಿಲೆ ಹಾಗೂ ಕೊರೋನಾ ಸೋಂಕಿಗೆ ತುತ್ತಾಗಿ ಜನವರಿ 3ರಂದು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.
'ಡಿಂಡಿಮ ಕವಿ' ಹಿರಿಯ ಕಲಾವಿದ ಶನಿ ಮಹದೇವಪ್ಪ ಇನ್ನಿಲ್ಲ
ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಮಹಾದೇವಪ್ಪ ನೆನೆದು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟ ಜಗ್ಗೇಶ್ ಟ್ಟೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
'ಕಮೊಲೋ ಕಮೊಲೋತ್ಪತ್ತಿ ಖ್ಯಾತಿ ಇನ್ನಿಲ್ಲ. ಬಹಳ ದುಃಖದ ಸಂಗತಿ. ಸುಮಾರು 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ, ಹಿರಿಯ ಕಲಾವಿದರಾದ ಶನಿ ಮಹಾದೇವಪ್ಪ ಇನ್ನಿಲ್ಲ ಅನ್ನುವುದು ಬಹಳ ಬೇಜಾರು ಆಯಿತು.ಓಂ ಶಾಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಎಂದು ಟ್ವೀಟ್ ಮಾಡಿದ್ದರು.
ಗುರುಪ್ರಸಾದ್ - ಜಗ್ಗೇಶ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ..!
'ಅಣ್ಣಾ ಏನು ಆಗಿತ್ತು. ಇವರಿಗೆ' ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ.
'1984ರಿಂದ ಬಲ್ಲೆ. ಈತನನ್ನು ಮಾವ ಎಂದು ಕರೆಯುತ್ತಿದ್ದೆ! ಅಣ್ಣನ ಆತ್ಮೀಯ!ಸಕ್ಕರೆ ಖಾಯಿಲೆಯಿಂದ ಎರಡು ಕಣ್ಣು ಕಳೆದುಕೊಂಡಿದ್ದ!10ವರ್ಷದ ಹಿಂದೆ ಮೇಯರ್ ಫಂಡ್ ನಿಂದ ಈತನಿಗೆ ವಿಶೇಷ ಪ್ಯಾಕೇಜ್ 5 ಲಕ್ಷ ಬರುವಂತೆ ಶ್ರಮಿಸಿದ್ದೆ ಹಾಗೂ ವೈಯಕ್ತಿಕವಾಗಿ ನಾನು ಬ್ಯಾಂಕ್ ಜನಾರ್ದನ ಜೂತೆ ಹೋಗಿ ಕೈಲಾದ ಸಹಾಯ ಮಾಡಿದ್ದೆ!80ವರ್ಷ ವಯಸ್ಸು ದಾಟಿದೆ! ಇವರ ಆತ್ಮಕ್ಕೆ ಶಾಂತಿ' ಎಂದು ಜಗ್ಗೇಶ್ ಘಟನೆ ಬಗ್ಗೆ ವಿವರಿಸಿದ್ದಾರೆ.
1984ರಿಂದ ಬಲ್ಲೆ ಈತನ ಮಾವ ಎಂದು ಕರೆಯುತ್ತಿದ್ದೆ!ಅಣ್ಣನ ಆತ್ಮೀಯ!ಸಕ್ಕರೆಖಾಯಿಲೆಯಿಂದ ಎರಡುಕಣ್ಣು ಕಳೆದುಕೊಂಡಿದ್ದ!
— ನವರಸನಾಯಕ ಜಗ್ಗೇಶ್ (@Jaggesh2) January 4, 2021
10ವರ್ಷ ಹಿಂದೆ ಮೇಯರ್ ಫಂಡ್‌ನಿಂದ ಈತನಿಗೆ ವಿಶೇಷ ಪ್ಯಾಕೇಜ್ 5ಲಕ್ಷ ಬರುವಂತೆ ಶ್ರಮಿಸಿದ್ದೆ ಹಾಗು ವೈಯಕ್ತಿಕವಾಗಿ ನಾನು ಬ್ಯಾಂಕ್ ಜನಾರ್ದನ ಜೂತೆಹೋಗಿ ಕೈಲಾದ ಸಹಾಯಮಾಡಿದ್ದೆ!80ವರ್ಷ ವಯಸ್ಸು ದಾಟಿದೆ!ಇವರ ಆತ್ಮಕ್ಕೆ ಶಾಂತಿ https://t.co/cDuP9IJ01q
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2021, 11:41 AM IST