Asianet Suvarna News Asianet Suvarna News

ಸಾಧು ಒಬ್ಬರು ಗಂಗಾ ನೀರು ಕೊಟ್ಟಮೇಲೆ ತಾಯಿ ನೆಮ್ಮದಿಯಾಗಿ ಉಸಿರುಬಿಟ್ಟರು: ದುನಿಯಾ ವಿಜಯ್

ವಾರಣಾಸಿಯಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಟ.....

Kannada actor Duniya Vijay visits Varanasi immersed himself in ganga water vcs
Author
First Published Feb 2, 2024, 4:43 PM IST

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತಾ ಭೀಮಾ ಸಿನಿಮಾ ತಯಾರಿಯಲ್ಲಿದೆ. ನಟ ಮತ್ತು ನಿರ್ದೇಶನ ಮಾಡುತ್ತಿರುವ ದುನಿಯಾ ವಿಜಯ್ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಕೊಡುವುದರಲ್ಲಿ ಅನುಮಾನವಿಲ್ಲ. ಸಿನಿಮಾ ಕೆಲಸವಾಗಿ ವಿಜಯ್ ಊರೂರು ಸುತ್ತಾಡುತ್ತಿದ್ದಾರೆ. ತಮ್ಮ ಸಿನಿಮಾ ಕೆಲಸ ಅಲ್ಲದೆ ಹಿರಿಮಗಳು ಮೋನಿಕಾ ವಿಜಯ್‌ರನ್ನು ಕೂಡ ಲಾಂಚ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಹಲವು ಶೈಲಿಯಲ್ಲಿ ಫೋಟೋಶೂಟ್ ನಡೆದಿದೆ. 

ಕೆಲವು ದಿನಗಳ ಹಿಂದೆ ದುನಿಯಾ ವಿಜಯ್ ವಾರಣಾಸಿಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸದ್ದು ಮಾಡಿತ್ತು. ಮಣಿಕರ್ಣಿಕಾ ಬಳಿ ವಿಜಯ್ ಏನು ಮಾಡುತ್ತಿದ್ದಾರೆ ಎಂದು ಹಲವು ಪ್ರಶ್ನಿಸಿದ್ದರು. 'ನನ್ನಲ್ಲೂ ಆಧ್ಯಾತ್ಮಿಕವಿದೆ, ನನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ತಿಳಿದಿದೆ' ಎಂದು ವಿಜಯ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.

ಖೈದಿಗಳನ್ನು ಬಿಡುಗಡೆ ಮಾಡಿಸಿದ್ದು ಪ್ರಚಾರಕ್ಕೆ ಅಲ್ಲ: ದುನಿಯಾ ವಿಜಯ್

'ನನ್ನ ತಾಯಿಯ ಕೊನೆ ದಿನಗಳು ಬಹಳ ಕಷ್ಟವಾಗಿತ್ತು, ಉಸಿರಾಡುವುದಕ್ಕೂ ಕಷ್ಟ ಪಡುತ್ತಿದ್ದರು. 12 ದಿನಗಳ ನರಳಾಟದ ನಂತರ ಒಬ್ಬರು ಸಾಧು ಬಂದು ಗಂಗಾ ನೀರನ್ನು ಕೊಟ್ಟರು. ಅದನ್ನು ಕುಡಿದು ಮರು ದಿನವೇ ನೆಮ್ಮದಿಯಾಗಿ ಉಸಿರುಬಿಟ್ಟರು. ಈ ರೀತಿ ಮಿರಾಕಲ್‌ಗಳನ್ನು ಹೇಗೆ ವಿವರಿಸುವುದು? ಆಕೆಯ ನೆನಪುಗಲ್ಲಿ ನಾನು ಈ ಸಲ ವಾರಣಾಸಿಗೆ ಪ್ರಯಾಣ ಮಾಡಿ ಗಂಗಾ ನದಿಯಲ್ಲಿ ಮುಳಿಗಿ ಬಂದೆ' ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ನೀನು ಯಾರಾದರೆ ನನಗೇನು? ಯೋಗ್ಯತೆ ಉಳಿಸಿಕೊಳ್ಳಬೇಕು; ಮಕ್ಕಳ ಬಗ್ಗೆ ದುನಿಯಾ ವಿಜಯ್

ಮಣಿಕರ್ಣಿಕಾ ಘಾಟ್‌ನಲ್ಲಿ ಸಾಧುಗಳು ಅಘೋರಿಗಳ ಸಮ್ಮುಖದಲ್ಲಿ ಧ್ಯಾನ ಮಾಡಿದ್ದಾರೆ ದುನಿಯಾ ವಿಜಯ್. 'ಪವಿತ್ರವಾದ ಜಾಗದಲ್ಲಿ ತುಂಬಾ ಎನರ್ಜಿ ಫೀಲ್ ಅಗುತ್ತದೆ. ಅಲ್ಲಿಂದ ಬರುತ್ತಿದ್ದಂತೆ ಫುಲ್ ಎನರ್ಜಿಯಿಂದ ಬಂದು ಕೆಲಸಗಳನ್ನು ಶುರು ಮಾಡುತ್ತಿರುವೆ. ನನ್ನ ಕೆಲಸ ವಿಚಾರಗಳಲ್ಲಿ ಚೆನ್ನಾಗಿ ನಡೆಯುತ್ತಿದೆ' ಎಂದಿದ್ದಾರೆ ವಿಜಯ್. 

Follow Us:
Download App:
  • android
  • ios