ಹಿರಿಮಗಳನ್ನು ಚಿತ್ರರಂಗಕ್ಕೆ ಕರೆತಂದ ದುನಿಯಾ ವಿಜಯ್. ಅಪ್ಪ ಆದ್ಮೇಲೆ ಮಕ್ಕಳು ಎಂದು ನೆಪೋಟಿಸಂ ಎನ್ನುವವರಿಗೆ ಉತ್ತರ ಕೊಟ್ಟ ನಟ... 

ಹತ್ತು ಹಲವಾರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು 'ದುನಿಯಾ' ಚಿತ್ರದ ಮೂಲಕ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೋಡುತ್ತಿರುವ ವಿಜಯ್ ಕುಮಾರ್ ಸದ್ಯ ಬ್ಯುಸಿ ಇರುವ ನಟ ಕಮ್ ನಿರ್ದೇಶಕ. ಸಲಗಾ ಸಿನಿಮಾ ನಂತರ ಮತ್ತೊಮ್ಮೆ ನಿರ್ದೇಶಕರ ಸ್ಥಾನ ಸ್ವೀಕರಿಸಿ ಭೀಮಾ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ತಮಿಳು ವೀರಾ ಸಿಂಹಾ ರೆಡ್ಡಿ ಸಿನಿಮಾದಲ್ಲೂ ಪ್ರತಾಪ್ ರೆಡ್ಡಿ ಪಾತ್ರದಲ್ಲಿ ಮಿಂಚಿದ್ದಾರೆ. ತೆರೆ ಮೇಲೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ವಿಜಯ್ ನಿಜ ಜೀವನದಲ್ಲಿ ಸ್ಟ್ರಿಕ್ಟ್‌ ತಂದೆ. 

'ಇಬ್ರು ಹೆಣ್ಣು ಮಕ್ಕಳು ಡಿಗ್ರಿ ಮಾಡಿ ಅದರಲ್ಲಿ ಮಾಸ್ಟರ್ ಡಿಗ್ರಿ ಮಾಡುತ್ತಿದ್ದಾರೆ. ಕಿರಿಯ ಪುತ್ರಿ ಮಾಸ್ಟರ್ ಡಿಗ್ರಿ ಮಾಡಲು ಅಮೆರಿಕಾದಲ್ಲಿ ಇದ್ದಾಳೆ. ಹಿರಿಮಗಳು ಈಗ ನಾಯಕಿಯಾಗಲು ರೆಡಿಯಾಗಿದ್ದಾಳೆ. ಲಂಡನ್ ಸ್ಕೂಲ್ ಆಫ್ ಡ್ರಾಮಾ ಅಂತ ಇದೆ ಅಲ್ಲಿ ಮಗಳು ವಿದ್ಯಾಭ್ಯಾಸ ಮಾಡಲಿದ್ದಾರೆ. ಒಂದು ವರ್ಷ ನಟನೆ ಟ್ರೈನಿಂಗ್ ಪಡೆಯಬೇಕು. ಸಿನಿಮಾ ಮಾಡುತ್ತೀನಿ ನಾನೇ ಸೇರಿಸುತ್ತೀನಿ ಅನ್ನೋದು ತಪ್ಪು ...ಸಿನಿಮಾ ಕ್ಷೇತ್ರಕ್ಕೆ ತಯಾರಿ ಇಲ್ಲದೆ ಬರಬೇಡಿ, ವಿದ್ಯೆ ಇಲ್ಲದೆ ಬರಬೇಡಿ. ಡಿಗ್ರಿ ಮುಗಿಸಿಕೊಂಡು ಎಲ್ಲಾದರೂ ಅಭ್ಯಾಸ ಮಾಡಿ ಚೆನ್ನಾಗಿ ಟ್ರೈನಿಂಗ್ ಪಡೆದುಕೊಳ್ಳಿ ಎಂದು ಹೇಳಿರುವೆ' ಎಂದು ದುನಿಯಾ ವಿಜಯ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಮಗಳನ್ನು ವಿಮಾನ ಹತ್ತಿಸಲು ಹತ್ತಿರದ ಸಿಟಿಗೆ ಟಿಕೆಟ್‌ ತೆಗೆದುಕೊಂಡ ವಿಜಯ್; ಟಿಕೆಟ್‌ ಹಣ ವೇಸ್ಟ್‌ ಎಂದು ನೆಟ್ಟಿಗರು ಬೇಸರ

'ಹಿರಿಮಗಳು ಮೊನಿಷಾ ಡೆಲ್ಲಿಯಲ್ಲಿರುವ ಅನುಪಮ್ ಖೇರ್‌ ಸ್ಕೂಲ್‌ನಲ್ಲಿ ಟ್ರೈನಿಂಗ್ ಪಡೆದು. ಆನಂತರ ಇಲ್ಲಿನ ಥಿಯೇಟರ್‌ಗಳಿಗೆ ಬಂದು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಈಗ ಮತ್ತೆ ನೀನಾಸಂ ಟೀಚರ್‌ ಆಕೆಯನ್ನು ಟ್ರೈನಿಂಗ್ ಮಾಡುತ್ತಿದ್ದಾರೆ. ಇಲ್ಲಿ ಯಾವ ನೆಪೋಟಿಸಂ ಇಲ್ಲ ನನ್ನ ಮಕ್ಕಳ ಅನ್ನೋ ಮಾತುಗಳು ಇಲ್ಲ. ನೀನು ಯಾರಾದರೂ ನನಗೇನು? ಬೇಕಿರುವ ಸೌಲಭ್ಯಗಳನ್ನು ನೀಡಬಹುದು ಆದರೆ ಸಿನಿಮಾ ಆಯ್ಕೆ ಮಾಡಿಕೊಂಡು ಜೀವನ ಮಾಡುತ್ತೀನಿ ಅನ್ನೋದಕ್ಕೆ ನೀವು ತಯಾರಿ ಮಾಡಬೇಕು ಎಂದು ಹೇಳಿರುವೆ' ಎಂದು ದುನಿಯಾ ವಿಜಯ್ ಹೇಳಿದ್ದಾರೆ. 

ಮಗಳ ಮೊದಲ ಚಿತ್ರದಲ್ಲೂ ನಾನೇ ತಂದೆ, ಸೆಟ್‌ನಲ್ಲಿ ಶಿಸ್ತು ಇರಲೇ ಬೇಕು : ದುನಿಯಾ ವಿಜಯ್

'ನಾನು ತಂದೆಯಾಗಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್‌. ಇಬ್ಬರು ಕಷ್ಟ ಪಟ್ಟು ಬರ್ತಿದ್ದಾರೆ. ಅದಕ್ಕೆ ದೇವರ ಆಶೀರ್ವಾದ ಅಗತ್ಯವಿದೆ. ಜನತೆ ಆಶೀರ್ವಾದ ಬೇಕು. ಆ ಯೋಗ್ಯತೆಯನ್ನು ಅವರು ಉಳಿಸಿಕೊಳ್ಳಬೇಕು. ನನ್ನ ಮಕ್ಕಳಾದರೆನೂ ಯಾರಾದರೆನೂ ದೊಡ್ಡ ಮಟ್ಟದಲ್ಲಿ ತಯಾರಿ ಇದ್ರೆ ಮಾತ್ರ ಉಳಿದುಕೊಳ್ಳುವುದು' ಎಂದಿದ್ದಾರೆ ವಿಜಯ್.