Asianet Suvarna News Asianet Suvarna News

ಮತ್ತೊಂದು ಶಾಕ್; ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ವಿಚ್ಛೇದನ ತೀರ್ಪು

ಚಿತ್ರರಂಗಕ್ಕೆ ಮತ್ತೊಂದು ಶಾಕ್. ದುನಿಯಾ ವಿಜಯ್ ಮತ್ತು ಪತ್ನಿ ವಿಚ್ಛೇದನದ ಅಂತಿಮ ತೀರ್ಪು ಇಂದು.... 

Kannada actor Duniya Vijay and wife Nagarathna divorce verdict to be announced vcs
Author
First Published Jun 13, 2024, 10:59 AM IST

ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ರವರ ವಿಚ್ಛೇದನ ತೀರ್ಪು ಇಂದು ಹೊರ ಬರಲಿದೆ. 2018ರಲ್ಲಿ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಇಂದು ಮಧ್ಯಾಹ್ಮ ಅಂತಿಮ ತೀರ್ಪು ಹೊರ ಬರಲಿದೆ. 

ಸ್ಯಾಂಡಲ್‌ವುಡ್‌ನಿಂದ ಒಂದಾದ ಮೇಲೊಂದು ಶಾಕಿಂಗ್ ನ್ಯೂಸ್ ಹೊರ ಬರುತ್ತಿದೆ. 2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ 'ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ' ಎಂದು ವಿಜಯ್ ಹೇಳಿದ್ದರಂತೆ. ಈ ಹೇಳಿಕೆ ದೊಡ್ಡಮಟ್ಟದಲ್ಲಿ ಸುದ್ದಿ ಆಗಿತ್ತು. ಕೌರ್ಯ ಮತ್ತು 2 ವರ್ಷಕ್ಕಿಂತ ಹೆಚ್ಚು ಸಮಯ ಬೇರೆ ವಾಸವಿದ್ದಾರೆ ನಾಗರತ್ನ ಎಂದು ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು.

ಮದ್ವೆಯಲ್ಲಿ ಖುಷಿಯಾಗಿರುವ ಶ್ರೀದೇವಿ ಫೋಟೋ ವೈರಲ್; ನಗುನೇ ಕಿತ್ಕೊಂಡು ಬಿಟ್ರು ಎಂದು ನೆಟ್ಟಿಗರು ಗರಂ

ಅಲ್ಲದೆ 'ನಾಗರತ್ನ ಜೊತೆ ಬಾಳೋಲೆ ಸಾಧ್ಯವಿಲ್ಲ ಮಕ್ಕಳ ಜವಾಬ್ದಾರಿಯನ್ನು  ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ' ಎಂದು ವಿಜಯ್ ಹೇಳಿದಾಗ ಅದಕ್ಕೆ 'ಜೀವನಾಂಶ ನೀಡಿರುವ ದಾಖಲೆ ಕೊಡಿ ಎಂದು ಕೇಳಿದ್ದೇವೆ' ಎಂದು ನಾಗರತ್ನ ಹೇಳಿದ್ದರು. ಅಲ್ಲದೆ ಪ್ರತಿ ಸಲವೂ ಕೋರ್ಟ್‌ಗೆ ಬಂದಾಗ ಗಂಡ ಬೇಕು ಎಂದು ನಾಗರತ್ನ ಹೇಳುತ್ತಿದ್ದರಂತೆ. ಸದ್ಯ ಮಕ್ಕಳನ್ನು ಚಿತ್ರರಂಗಕ್ಕೆ ತರುವ ಪ್ರಯತ್ನದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. 

ಯುವ ರಾಜ್‌ಕುಮಾರ್ ಅಸ್ತಿ ಹಣ ಏನೂ ಬೇಡ, ನಟಿಯ ಜೊತೆ ಸಿಕ್ಕಿಬಿದ್ದ ಸಾಕ್ಷಿ ಇದೆ: ಶ್ರೀದೇವಿ ಲಾಯರ್

ದುನಿಯಾ ವಿಜಯ್ ಹಿರಿಯ ಪುತ್ರಿ ರಿತನ್ಯಾ ವಿಜಯ್ ಮೊದಲ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಎರಡನೇ ಪುತ್ರಿ ಮೋನಿಕಾ ವಿದೇಶದಲ್ಲಿ ಸಿನಿಮಾಗಳ ಬಗ್ಗೆ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಪುತ್ರ ಸಾಮ್ರಾಟ್‌ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದು ಶೀಘ್ರದಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಡುವ ಲಕ್ಷಣಗಳಿದೆ. 

Latest Videos
Follow Us:
Download App:
  • android
  • ios