Asianet Suvarna News Asianet Suvarna News

ಯುವ ರಾಜ್‌ಕುಮಾರ್ ಅಸ್ತಿ ಹಣ ಏನೂ ಬೇಡ, ನಟಿಯ ಜೊತೆ ಸಿಕ್ಕಿಬಿದ್ದ ಸಾಕ್ಷಿ ಇದೆ: ಶ್ರೀದೇವಿ ಲಾಯರ್

ಶ್ರೀದೇವಿ ಮತ್ತು ಯುವ ರಾಜ್‌ಕುಮಾರ್ ನಡುವೆ ಎನಾಗಿದೆ? ಆಸ್ತಿ ಹಣಕ್ಕೆ ಈ ಕಿರಿಕಿರಿ? ಲಾಯರ್‌ ಕೊಟ್ಟ ಉತ್ತರವಿದು.....

Sridevi need no money or property from Yuva rajkumar says lawyer vcs
Author
First Published Jun 12, 2024, 10:27 AM IST | Last Updated Jun 12, 2024, 10:27 AM IST

ದೊಡ್ಡ ಮನೆಯ ಕುಟುಂಬದಿಂದ ದೂರು ಉಳಿದಿರುವ ಶ್ರೀದೇವಿ ಬೈರಪ್ಪ ಯಾವುದೇ ರೀತಿಯಲ್ಲಿ ಹಣ ಮತ್ತು ಆಸ್ತಿಗೆ ಆಸೆ ಪಡುತ್ತಿಲ್ಲ ಆಕೆ ವಿದ್ಯಾವಂತಿಯಾಗಿ ಪ್ರತಿಯೊಂದನ್ನು ಮ್ಯಾನೇಜ್ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಲಾಯರ್ ಹೇಳಿದ್ದಾರೆ. ಸುಮಾರು 9 ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿರುವ ಯುವ ರಾಜ್‌ಕುಮಾರ್ ಇದ್ದಕ್ಕಿದ್ದಂತೆ ವಿಚ್ಚೇದನ ಬೇಕು ಎಂದು ನೋಟಿಸ್‌ ಕಳುಹಿಸಲು ಕಾರಣವೇನು?

'ಶ್ರೀದೇವಿ ತಂದೆ ಬೈರಪ್ಪರವರು ಸ್ಪಷ್ಟವಾಗಿ ಹೇಳಿದ್ದಾರೆ ಯುವ ಅವರಿಂದ ಯಾವ ಹಣ ಬೇಕಿಲ್ಲ ಎಂದು. ಅವರು ಅನುಕುಲವಾಗಿದ್ದಾರೆ ಅಲ್ಲದೆ ಶ್ರೀದೇವಿ ವಿದ್ಯಾವಂತೆ ಆಗಿರುವ ಕಾರಣ ಆಕೆ ಸಂಪೂರ್ಣವಾಗಿ ಪ್ರತಿಯೊಂದನ್ನು ಮ್ಯಾನೇಜ್ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಇಬ್ಬರು ಗಂಡು ಮಕ್ಕಳಿದ್ದರೂ ಶ್ರೀದೇವಿ ಆ ಮನೆಯನ್ನು ಚೆನ್ನಾಗಿ ನೋಡಿಕೊಂಡು ಬಂದಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಡಿಸೆಂಬರ್‌ ತಿಂಗಳ ನಂತರ ಆ ಬದಲಾವಣೆ ಆಕೆಗೆ ತುಂಬಾನೇ ಕಷ್ಟವಾಗಿದೆ. ಪ್ರತಿಯೊಂದನ್ನು ಶ್ರೀದೇವಿ ಪ್ರಶ್ನೆ ಮಾಡಿದ್ದಾರೆ ...ಪ್ರಶ್ನೆ ಮಾಡಿದಾಗ ಕಾರ್ನರ್‌ ಮಾಡಿದ್ರೆ ಏನು ಮಾಡುತ್ತೀರಾ?' ಎಂದು ಶ್ರೀದೇವಿ ಬೈರಪ್ಪ ಲಾಯರ್ ಮಾತನಾಡಿದ್ದಾರೆ.

ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪ ಮಾಡಿರುವುದು ನೋವು ಮಾಡಿದೆ: ಶ್ರೀದೇವಿ ಬೈರಪ್ಪ

'ಶ್ರೀದೇವಿ ಯುಎಸ್‌ನಲ್ಲಿ ಇರುವ ಕಾರಣ ಟೈಮ್‌ ಬದಲಾವಣೆ ಇರುತ್ತದೆ ಅಲ್ಲದೆ ಆಕೆಗೆ ಪರೀಕ್ಷೆ ಇರುವ ಸಮಯದಲ್ಲಿ ನೋಟಿಸ್‌ ಕಳುಹಿಸಿದ್ದಾರೆ. ಹಾರ್ವರ್ಡ್‌ ಅಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದುತ್ತಿರುವಾಗ ಡಿಗ್ರಿ ಪಡೆಯುವುದು ಮುಖ್ಯವಾಗುತ್ತದೆ ಆ ಸಮಯದಲ್ಲಿ ಕೊಟ್ಟಿದ್ದು. ನೋಟಿಸ್‌ನಲ್ಲಿ ನಟಿಯ ಹೆಸರನ್ನು ಸುಮ್ಮನೆ ಹಾಕಿಲ್ಲ...ಮ್ಯಾಟ್ರಿಮೋನಿಯಲ್‌ ಆಕ್ಟ್‌ನಲ್ಲಿ  adultery ಅನ್ನೋದು ಸುಖಸುಮ್ಮನೆ  ಹಾಕಲು ಆಗುವುದಿಲ್ಲ. ಯಾರ ಜೊತೆ ಏನೂ ಎಂದು ಹಾಕಿದಾಗ ಅದನ್ನು ಕೋರ್ಟ್‌ಗೆ ಎಸ್‌ಸ್ಟಾಬ್ಲಿಷ್‌ ಮಾಡಬೇಕು. ಆ ವ್ಯಕ್ತಿಯ ಎಂಟ್ರಿಯಿಂದ ಹೀಗೆ ಆಗಿದ್ದಾ ಎಂದು ಆ ವ್ಯಕ್ತಿನೇ ಹೇಳಬೇಕು ಏಕೆಂದರೆ ಡಿಸೆಂಬರ್‌ವರೆಗೂ ಊಟ ಆಯ್ತಾ ಮಗಳೆ ಎಂದು ಮೆಸೇಜ್ ಬಂದಿದೆ ಅದಾದ ಮೇಲೆ ಎಲ್ಲವೂ ಸ್ಟಾಪ್ ಆಗಿದೆ' ಎಂದು ಲಾಯರ್ ಹೇಳಿದ್ದಾರೆ.

ಒತ್ತಾಯಿಸಿ ಸೊಸೆಯನ್ನು ವಿದೇಶಕ್ಕೆ ಕಳುಹಿಸಿದ್ದಾರೆ, ಹಿಂಸೆ ಕೊಟ್ಟಿರುವುದು ಅಷ್ಟಿಷ್ಟಲ್ಲ: ಶ್ರೀದೇವಿ ತಂದೆ ಬೈರಪ್ಪ ಬೇಸರ

'ಪ್ರೀತಿಯಿಂದ ಯುವ ಮಾತನಾಡಿಸಿರುವ ಪ್ರತಿಯೊಂದು ಮೆಸೇಜ್‌ ಡಿಸೆಂಬರ್‌ವರೆಗೂ ಇದೆ. ಅವರೇ ಮೊದಲು ನೋಟಿಸ್‌ ಕೊಟ್ಟಿರುವ ಕಾರಣ ಅದಕ್ಕೆ ಶ್ರೀದೇವಿ ಅವರು ಉತ್ತರ ಕೊಟ್ಟಿದ್ದಾರೆ ಅಷ್ಟೇ. ಯಾವತ್ತೂ ಡಿವೋರ್ಸ್‌ ಕೊಡುತ್ತೀವಿ ಎಂದು ಶ್ರೀದೇವಿ ಹೇಳಿಲ್ಲ ಆದರೆ ಅವರೇ ಕೇಳಿರುವುದು ಅಲ್ಲದೆ ಎಲ್ಲವೂ ಸರಿ ಹೋದರೆ ಜೀವನ ಮುಂದುವರೆಸಲಿ ಅನ್ನೋದೇ ಇರೋದು' ಎಂದಿದ್ದಾರೆ ಲಾಯರ್. 

Latest Videos
Follow Us:
Download App:
  • android
  • ios