ಕಳೆದ ಎರಡು ತಿಂಗಳಲ್ಲಿ ಒಂದು ಸಿನಿಮಾ ಕೂಡ ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ. ಹೇಳಿಕೊಳ್ಳುವಂತಹ ಕಲೆಕ್ಷನ್‌ ಕೂಡ ಆಗುತ್ತಿಲ್ಲ. ಬಹುತೇಕರು ಟಾಕ್ಸಿಕ್‌ ಮೂಲಕವಾದರೂ ಥೇಟರ್‌ ಜಾತ್ರೆ ಶುರುವಾಗಬಹುದು.

ಲಾಭಗಳು
1. ಸಣ್ಣ ಸಿನಿಮಾಗಳಿಗೆ ಟಾಕ್ಸಿಕ್‌ ಆಶೀರ್ವಾದ: ‘ಟಾಕ್ಸಿಕ್‌’ ಬರುತ್ತದೆ ಅಂತ ಸಣ್ಣ ಸಿನಿಮಾಗಳೆಲ್ಲಾ ಕೊಂಚ ಬೆದರಿ ರಜಾ ಸಂದರ್ಭದಲ್ಲಿ ರಿಲೀಸಾಗುವ ಕ್ಯೂನಿಂದ ಚದುರಿ ಸೈಡಿಗೆ ಹೋಗಿದ್ದರು. ಈಗ ಟಾಕ್ಸಿಕ್‌ ಮುಂದಕ್ಕೆ ಹೋಗಿ ಆಶೀರ್ವಾದ ದೊರೆತಿದೆ. ಸಿಕ್ಕಿದ್ದೇ ಚಾನ್ಸು ಅಂತ ‘ಲವ್‌ ಮಾಕ್‌ಟೇಲ್‌3’ ಅದೇ ದಿನಾಂಕದಂದು ಬಿಡುಗಡೆಯಾಗಲಿದೆ. ಇನ್ನೂ ಕೆಲವು ಸಿನಿಮಾಗಳು ಈ ದಿನದಂದು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬಹುದು.

2. ಎರಡು ಲಾಡು ಬಾಯಿಗ್‌ ಬಿತ್ತು: ‘ಟಾಕ್ಸಿಕ್‌’ ಮತ್ತು ‘ದುರಂಧರ್ 2’ ಒಂದೇ ದಿನ ಬಿಡುಗಡೆ ಎಂಬ ಕಾರಣದಿಂದ ಅನೇಕ ಚಿತ್ರಮಂದಿರಗಳಿಗೆ ಕಲೆಕ್ಷನ್‌ ಕಡಿಮೆಯಾಗುವ ಆತಂಕ ಎದುರಾಗಿತ್ತು. ಈಗ ಹಾಗೇನಿಲ್ಲ. ಜೊತೆಗೆ ಎರಡೂ ಸಿನಿಮಾಗಳ ಮೇಲೆ ಅಭಿಮಾನ ಹೊಂದಿರುವವರಿಗೂ ಗೊಂದಲ ಇತ್ತು. ಆ ಗೊಂದಲವೂ ನಿರಾಳವಾಗಿದೆ. ಎರಡೂ ಲಡ್ಡುಗಳು ಬಾಯಿಗೆ ಬೀಳಲಿವೆ.

3. ಒಳ್ಳೆಯ ನಿರ್ಧಾರ: ‘ಟಾಕ್ಸಿಕ್‌’ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಹಾಗಾಗಿ ಕನ್ನಡದ ಸಿನಿಮಾ ಎಂದೇ ಹೆಸರು ಗಳಿಸುವ ಸಾಧ್ಯತೆ ಜಾಸ್ತಿ. ‘ಕಾಂತಾರ 1’ ಬಳಿಕ ಬೇರೆ ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲಲ್ಲಿ ಸದ್ದು ಮಾಡಿಲ್ಲ. ಈಗ ‘ಧುರಂಧರ್ 2’ ಜೊತೆ ಸ್ಪರ್ಧೆಗೆ ಬೀಳಬೇಕಿಲ್ಲವಾದ್ದರಿಂದ, ಕನ್ನಡ ಸಿನಿಮಾವೊಂದು ಮತ್ತೆ ದೊಡ್ಡಮಟ್ಟದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು. ಹಾಗಾಗಿ ಕನ್ನಡ ಚಿತ್ರರಂಗದ ಪಾಲಿಗೆ ಇದೊಂದು ಒಳ್ಳೆಯ ಸುದ್ದಿ ಮತ್ತು ನಿರ್ಧಾರ.

ನಷ್ಟವೇನು?

1. ಥೇಟರ್‌ ಜಾತ್ರೆ ಸ್ವಲ್ಪ ಲೇಟು: ಕಳೆದ ಎರಡು ತಿಂಗಳಲ್ಲಿ ಒಂದು ಸಿನಿಮಾ ಕೂಡ ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ. ಹೇಳಿಕೊಳ್ಳುವಂತಹ ಕಲೆಕ್ಷನ್‌ ಕೂಡ ಆಗುತ್ತಿಲ್ಲ. ಬಹುತೇಕರು ಟಾಕ್ಸಿಕ್‌ ಮೂಲಕವಾದರೂ ಥೇಟರ್‌ ಜಾತ್ರೆ ಶುರುವಾಗಬಹುದು, ಬ್ಲಾಕಲ್ಲಿ ಟಿಕೆಟ್‌ ಹೋಗಬಹುದು ಎಂದು ಕಾಯುತ್ತಿದ್ದರು. ಈಗ ಅದೂ ಲೇಟಾಗಿದೆ. ಮತ್ತೆ ಮೂರು ತಿಂಗಳು ಕಾಯಬೇಕಿದೆ.

2. ನಿರೀಕ್ಷೆ ಹೆಚ್ಚಳ, ಅಭಿಮಾನಿಗಳಿಗೆ ನಿರಾಸೆ: ಟಾಕ್ಸಿಕ್‌ ಮುಂದೆ ಹೋಗಿರುವುದರಿಂದ ಅಬಿಮಾನಿಗಳಿಗೆ ನಿರಾಸೆಯಾಗಿದೆ ಮತ್ತು ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇರಲೇಬೇಕಿದೆ. ಇಲ್ಲದಿದ್ದರೆ ಅದರ ಪರಿಣಾಮ ಖಂಡಿತಾ ಸಿನಿಮಾ ಮೇಲೆ ಆಗುತ್ತದೆ.