ಶಿವರಾಜ್‌ ಕುಮಾರ್‌ ಹಾಗೂ ದರ್ಶನ್‌ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಾರಾ ? ಅಭಿನಯಿಸುವುದೇ ಆಗಿದ್ದರೆ ಆ ಸಿನಿಮಾ ಹೇಗಿರುತ್ತೆ? ಆ ಸಿನಿಮಾಕ್ಕೆ ಡೈರೆಕ್ಟರ್‌ ಯಾರ್‌ ಆಗ್ತಾರೆ? ಮಜಾ ಅಂದ್ರೆ ಕುತೂಹಲದ ಈ ಪ್ರಶ್ನೆಗಳಿಗೆ ಉತ್ತರ ಅವರಿಂದಲೇ ರಿವೀಲ್‌ ಆಗಿದೆ. ಆ ಬಗ್ಗೆ ಶಿವಣ್ಣ ಮತ್ತು ದರ್ಶನ್‌ ಇಬ್ಬರು ಮಾತನಾಡಿದರು. ಈ ಇಬ್ಬರು ಸ್ಟಾರ್‌ ನಟರು ಜತೆಗಿದ್ದು ಒಂದೇ ಸಿನಿಮಾದಲ್ಲಿ ಅಭಿನಯಿಸುವ ಕುರಿತು ಮಾತನಾಡಿದ್ದು, ಧ್ರುವನ್‌ ಹಾಗೂ ಪ್ರಿಯಾ ವಾರಿಯರ್‌ ಅಭಿನಯದ ಹೊಸ ಸಿನಿಮಾದ ಮುಹೂರ್ತದ ಸಂದರ್ಭ.

ಶಿವಣ್ಣ ಲಾಂಗ್ ಹಿಡಿದ್ರೆ ಬೆನ್ನಿಗೆ ನಿಲ್ತೇನೆ, ದರ್ಶನ್-ಶಿವಣ್ಣ ಜೋಡಿಯಾಗಿ ಹೊಸ ಚಿತ್ರ!

ದರ್ಶನ್‌ ಅವರ ಪರಿಚಿತ ಹಾಗೂ ರಾಜ್‌ ಕುಟುಂಬ ಸಂಬಂಧಿ ಧ್ರುವನ್‌ ಅಭಿನಯದ ಸಿನಿಮಾ ಮುಹೂರ್ತ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಯಿತು. ಅಲ್ಲಿಗೆ ಶಿವಣ್ಣ ಹಾಗೂ ದರ್ಶನ್‌ ಅತಿಥಿಗಳಾಗಿ ಬಂದು ಚಿತ್ರಕ್ಕೆ ಚಾಲನೆ ನೀಡಿದರು. ಶಿವಣ್ಣ ಕ್ಲಾಪ್‌ ಮಾಡಿದರೆ, ದರ್ಶನ್‌ ಕ್ಯಾಮರಾ ಸ್ವಿಚ್‌ ಆನ್‌ ಮಾಡಿದರು. ನಂತರ ಮಾಧ್ಯಮದ ಜತೆಗೆ ಮಾತಿಗೆ ನಿಂತರು.

ಶಿವಣ್ಣ ಹೇಳಿದ್ದು

‘ಹೇಳೋದಿಕ್ಕೆ ಆಗಲ್ಲ, ಟೈಮ್‌ ಹೇಗೆ ಬರುತ್ತೆ ಅಂತ. ಒಳ್ಳೆಯ ಕತೆಗಳು ಸಿಕ್ಕಾಗ ಇಬ್ಬರು ಕೂಡ ಒಂದಾಗಿ ಕಾಣಿಸಿಕೊಳ್ಳಬಹುದು. ಅದೇನು ಕಷ್ಟನಾ? ಈಗಾಗಲೇ ಸಾಕಷ್ಟುನಟರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾನು ಕೂಡ ಅಂತಹ ಸಿನಿಮಾ ಮಾಡಿದ್ದೇನೆ. ಸುದೀಪ್‌ ಮತ್ತು ನಾನು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದೆವು. ಸಮಯ ಬಂದ್ರೆ ದರ್ಶನ್‌ ಜತೆಗೂ ಅಭಿನಯಿಸಿದರೆ ಅಚ್ಚರಿ ಇಲ್ಲ ಅಂತ’ ಶಿವರಾಜ್‌ ಕುಮಾರ್‌ ನೀಡಿದ ಉತ್ತರಕ್ಕೆ ಪಕ್ಕದಲ್ಲೇ ಇದ್ದ ದರ್ಶನ್‌ ಕೊಟ್ಟರಿಯಾಕ್ಷನ್‌ ಕೂಡ ಮಜಾವಾಗಿತ್ತು.

ತಮ್ಮ ರಾಧಿಕಾ ನಡುವಿನ ಸೀಕ್ರೆಟ್ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್!

ದರ್ಶನ್‌ ಮಾತುಗಳು

‘ಸಮಯ ಬರುತ್ತೆ, ಹೇಳೋದಿಕ್ಕೆ ಆಗಲ್ಲ ಅಂತಲ್ಲ. ಆದ್ರೆ ನಮ್ಮಿಬ್ಬರನ್ನು ಹ್ಯಾಂಡಲ್‌ ಮಾಡುವಂತಹ ಡೈರೆಕ್ಟರ್‌ ಇಲ್ಲ. ಅಂತಹ ಡೈರೆಕ್ಟರ್‌ ಸಿಕ್ಕಾಗ, ನಮಗೆ ಮೆಚ್ಚಿಗೆ ಆಗುವಂತಹ ಕತೆ ಸಿಕ್ಕಾಗ ಸಿನಿಮಾ ಮಾಡೋಣ ಬಿಡಿ’ ಎನ್ನುವುದು ದರ್ಶನ್‌ ಇಂಗಿತವಾಗಿತ್ತು.

ಒಂದು ವೇಳೆ ಅಂತ ಸಮಯ ಬಂದೇ ಬಿಟ್ಟಿತು, ಅದು ಲಾಂಗ್‌ ಹಿಡಿಯುವ ಸಿನಿಮಾವೇ ಆಗಿಬಿಟ್ಟಿತು ಅಂತಿಟ್ಟುಕೊಳ್ಳಿ, ಆಗ್‌ ಏನ್‌ ಮಾಡ್ತೀರಿ? ತಕ್ಷಣವೇ ದರ್ಶನ್‌ಗೆ ಎದುರಾದ ಪ್ರಶ್ನೆ ಅದು. ಅದಕ್ಕೆ ಅವರು ಕೊಟ್ಟರಿಯಾಕ್ಷನ್‌ ಕೂಡ ಸಖತ್‌ ಆಗಿತ್ತು. ‘ಶಿವಣ್ಣ ಸೀನಿಯರ್‌, ಅವ್ರು ಲಾಂಗ್‌ ಹಿಡಿದ್ರೆ, ಅವರ ಹಿಂದೆ ನಾನು ಇರ್ತೀನಿ...’ ಎನ್ನುವ ಮೂಲಕ ಶಿವರಾಜ್‌ಕುಮಾರ್‌ ಜತೆಗೆ ತಾವು ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದರು ದರ್ಶನ್‌.