ದರ್ಶನ್‌ ಮನೆಯ ಮುಂದೆ ಅಭಿಮಾನಿಳಿಗೆ ಮನವಿ ಬೋರ್ಡ್‌. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು....

ಕನ್ನಡ ಚಿತ್ರರಂಗದ ಅದ್ಭುತ ನಟ ದರ್ಶನ್‌ ಪ್ರತಿ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರೆ. ಮಧ್ಯರಾತ್ರಿ 12 ಗಂಟೆಗೆ ದರ್ಶನ್‌ರನ್ನು ಭೇಟಿ ಮಾಡಬೇಕು ಎಂದು ಅಭಿಮಾನಿಗಳು ಸಂಜೆ 5 ಗಂಟೆಗೆ ಬಂದು ಸಾಲಿನಲ್ಲಿ ನಿಲ್ಲುತ್ತಾರೆ. ಕೇಕ್, ಹಾರ ಮತ್ತು ದಿನಸಿ ಸಾಮಾಗ್ರಿಗಳನ್ನು ಹಿಡಿದು ಶುಭ ಹಾರೈಸಿ ಹೋಗುತ್ತಾರೆ. ಒಂದು ಸೆಲ್ಫಿ ಪಡೆದು ಖುಷಿಯಿಂದ ದಚ್ಚು ಅಂದು ಮಾಡಿಸುವ ಅಡುಗೆಯನ್ನು ಸವಿದು ಹೋಗುತ್ತಾರೆ. ಆದರೆ ಈ ವರ್ಷ ಒಂದು ತಿಂಗಳ ಮುನ್ನವೇ ಮನೆಯ ಮುಂದಿನ ಮನವಿ ಮಾಡಿರುವ ಬೋರ್ಡ್ ಹಾಕಿದ್ದಾರೆ.

'ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ಬ್ಯಾನರ್‌, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ಯೊಂದರೆಯಾಗುವುದು, ಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರು ಮತ್ತು ಪೊಲೀಸ್‌ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ' ಎಂದು ಬರೆದುಲಾಗಿದೆ. 

ಅದ್ಧೂರಿಯಾಗಿ ಪತ್ನಿ ಬರ್ತಡೇ ಪಾರ್ಟಿ ಮಾಡಿದ ದರ್ಶನ್; ಅಣ್ಣ-ಅತ್ತಿಗೆ ಕ್ಯೂಟ್‌ ಫೋಟೋ ಮೇಲೆ ನೆಟ್ಟಿಗರ ಕಣ್ಣು!

ಫೆಭ್ರವರಿ 16ರಂದು ದರ್ಶನ್ ಹುಟ್ಟುಹಬ್ಬ. ಕೊರೋನಾ ಸಮಯದಲ್ಲಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅದಾದ ನಂತರ ಆಚರಿಸಿಕೊಂಡ ಹುಟ್ಟುಹಬ್ಬಕೂ ಇದೇ ರೀತಿ ಮನವಿ ಮಾಡಿಕೊಂಡಿದ್ದರು. ಆಗ ಅಭಿಮಾನಿಗಳು ಕೇಕ್ ಹಾರ ಬಿಟ್ಟು ದಿನಸಿ ಸಾಮಾಗ್ರಿಗಳನ್ನು ತಂದರು. ಕೆಲವರು ಗಾಡಿ ತುಂಬಿಸಿಕೊಂಡು ಬಂದರು.  ಅದನ್ನು ಬಡ ಕುಟುಂಬಗಳಿಗೆ ಹಾಗೂ ಕೊರೋನಾ ಸಮಯದಲ್ಲಿ ಕಷ್ಟ ಎದುರಿಸಿದವರಿಗೆ ನೀಡಲಾಗಿತ್ತು. 

 

View post on Instagram