ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್ ಸುಲ್ತಾನ್ ದರ್ಶನ್‌ ಲಾಕ್‌ಡೌನ್‌ ಆದಾಗಿನಿಂದಲೂ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಫುಡ್‌ ಕಿಟ್‌ ಹಾಗೂ ದಿನ ನಿತ್ಯ ಆಹಾರ ವಿತರಣೆ ಮಾಡುತ್ತಿದ್ದಾರೆ. ಈ ನಡುವೆ ಹೋಟೆಲ್‌ನಿಂದ  ಆಹಾರ ಪಡೆದುಕೊಂಡು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಡೆಲಿವರಿ ಬಾಯ್ಸ್‌ಗೆ ಬಿರಿಯಾನಿ ಊಟ ಹಂಚಿದ್ದಾರೆ.

ಬಾಯ್ಸ್‌ಗೆ ಬಿರಿಯಾನಿ ಊಟ:

ಲಾಕ್‌ಡೌನ್‌ನಿಂದಾಗಿ ಹೋಟಲ್ ಸೇವೆಗಳು ರದ್ದಾಗಿದ್ದು ಕೇವಲ ಪಾರ್ಸಲ್‌ ಸೌಲಭ್ಯಕ್ಕೆ ಸರ್ಕಾರ ಅನುಮತಿ ನೀಡಿತ್ತು ಅಂದಿನಿಂದ ನಾನ್‌ ಸ್ಟಾಪ್‌ ಕೆಲಸ ಮಾಡುತ್ತಿರುವ ಡೆಲಿವರ್‌ ಹುಡುಗರಿಗೆ ದರ್ಶನ್‌ ಮೈಸೂರು ಅಭಿಮಾನಿಗಳು ಬಳಗದಿಂದ ಆಹಾರ ವಿತರಣೆ ಮಾಡಿದ್ದಾರೆ. ಈ ಬಗ್ಗೆ ಟ್ಟಿಟರ್‌ ಖಾತೆಯಲ್ಲಿ ಫ್ಯಾನ್ಸ್‌ ಶೇರ್ ಮಾಡಿಕೊಂಡಿದ್ದಾರೆ.

 

'ಯಾರ್ ಹೆತ್ತ  ಮಗನೋ ನಮಗಾಗೆ ಬಂದನು ಮೇಲು ಕೀಳು ಗೊತ್ತೆಯಿಲ್ಲ ಬಡವಾನೂ ಗೆಳೆಯಾನೆ ಶ್ರೀಮಂತಿಕೆ ತಲೆಗತ್ತೆಯಿಲ್ಲ ಹತ್ತೂರ ಒಡೆಯಾನೆ' ಬಾಸ್. ಚಾಲೆಂಜಿಂಗ್ ಸ್ಟಾರ್ ಅವರು ಇಂದು ಮೈಸೂರು Swiggy Delivery ಹುಡುಗರಿಗೆ ನಾಗಣ್ಣ ಅವರ ಕಡೆಯಿಂದ ಬಿರಿಯಾನಿ ವಿತರಿಸಿದರು' ಎಂದು ಬರೆದುಕೊಂಡಿದ್ದಾರೆ.

ಕಾಳಮ್ಮ ಕೊಪ್ಪಲು ಬಸವನಿಗೆ ಚಿಕಿತ್ಸೆ:

2019ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ದರ್ಶನ್‌ ಸ್ಪರ್ಶಕ್ಕಾಗಿ ಗಾಡಿಯನ್ನು ಅಡ್ಡ ಹಾಕಿದ ಬಸವ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು ಆಹಾರ ಸೇವಿಸದೆ ನರಳುತ್ತಿತು.  ಊರಿನ ಜನರು ಹಾಗೂ ಬಸವನ ಮಾಲೀಕರು ವಿಡಿಯೋ ಮೂಲಕ ದರ್ಶನ್‌ನನ್ನು ಸಹಾಯ ಬೇಡಿದರು. ವಿಚಾರ ತಿಳಿದ ಕೆಲವೇ ದಿನಗಳಲ್ಲಿ ದರ್ಶನ್‌ ತನ್ನ ಸ್ನೇಹಿತರೊಂದಿಗೆ ವೈದ್ಯರನ್ನು ಕರೆಸಿ ಬಸವನಿಗೆ ಚಿಕಿತ್ಸೆ ನೀಡಿಸಿದ್ದಾರೆ.

ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಬಸವ; ಚಿಕಿತ್ಸೆ ಕೊಡಿಸಿ ಮಾನವೀಯತೆ ತೋರಿದ ಡಿ-ಬಾಸ್!

ಲಾಕ್‌ಡೌನ್‌ನಿಂದಾಗಿ ಏನು ಮಾಡುವುದು ಎಂದು ತಿಳಿಯದೇ ಚಿಂತೆಯಲ್ಲಿದ ಮಾಲೀಕರಿಗೆ ದರ್ಶನ್‌ ತಕ್ಷಣವೇ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟು ಸಹಾಯ ಮಾಡಿರುವುದಕ್ಕೆ ಕೃತಜ್ಞತೆ ತಿಳಿಸಿದ್ದರು.

ಬುಲೆಟ್‌ ಪ್ರಕಾಶ್‌ ಮಗಳ  ಮದುವೆ:

ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಏಪ್ರಿಲ್‌ 6,2020ರಂದು ಇಹಲೋಕ ತ್ಯಜಿಸಿದ ಬುಲೆಟ್‌ ಪ್ರಕಾಶ್‌ ಇಂದು ನೆನಪುಗಳು ಮಾತ್ರ. ಬುಲೆಟ್‌ ಹಾಗೂ ದರ್ಶನ್‌ ಕಾಂಬಿನೇಶನ್‌ ಸಿನಿಮಾಗಳು ಸಿಕ್ಕಾಪಟ್ಟೆ ಹಿಟ್‌ ಆಗಿವೆ  ಆದರೆ ಕಾರಣಾಂತರಗಳಿಂದ ಅವರಿಬ್ಬರು ಕೆಲ ವರ್ಷಗಳ ಕಾಲ ಮಾತನಾಡುತ್ತಿರಲಿಲ್ಲ. ಆದರೆ ಬುಲೆಟ್‌ ಅನಾರೋಗ್ಯರಾಗಿದ್ದಾರೆ ಎಂದು ತಿಳಿದ ತಕ್ಷಣವೇ ದರ್ಶನ್‌ ಸಹಾಯ ಮಾಡಿದ್ದಾರೆ ಅಷ್ಟೇ ಅಲ್ಲದೆ ಬುಲೆಟ್‌ ಮಗಳ ಮದುವೆ ಖರ್ಚನ್ನು ನಿಭಾಯಿಸುವುದಾಗಿ ಕುಟುಂಬಸ್ಥರಿಗೆ ಮಾತು ನೀಡಿದ್ದಾರೆ.

ನಾಟಿ ಕೋಳಿ ಮುದ್ದೆ ಸಾರು; ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಫೇವರೆಟ್‌ ಫುಡ್‌ ಇದು!

ಒಟ್ಟಿನಲ್ಲಿ ಯಾರೇ ಕಷ್ಟ ಎಂದರು  ಸಹಾಯ ಮಾಡಿ ಮಾನವೀಯತೆ ಮೆರೆಯುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್.