Asianet Suvarna News Asianet Suvarna News

ಡಿ-ಬಾಸ್ ಬಾರ್ತಡೇ ಕೌಂಟ್ಡೌನ್: ದಾನ ಧರ್ಮಕ್ಕೆ ಸೈ ಎಂದ ಫ್ಯಾನ್ಸ್!

ದರ್ಶನ್‌ ಈ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ತಮ್ಮ ಜನ್ಮದಿನದ ಸಂಭ್ರಮವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಾಗಿಟ್ಟಿದ್ದಾರೆ. ಇದಕ್ಕೆ ದರ್ಶನ್‌ ಅವರ ಅಭಿಮಾನಿ ಸಮೂಹ ಕೂಡ ಕೈ ಜೋಡಿಸಿದೆ. ಹೀಗಾಗಿ ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬ, ಅದ್ದೂರಿ ಸಮಾವೇಶ ಆಗದೆ, ನಾಲ್ಕು ಜನಕ್ಕೆ ಒಳ್ಳೆಯದಾಗುತ್ತಿದೆ. ಫೆ.16ರಂದು ದರ್ಶನ್‌ ಹುಟ್ಟುಹಬ್ಬ. ಈ ಬಾರಿ ಚಾಲೆಂಜಿಂಗ್‌ ಸ್ಟಾರ್‌ ಮನವಿ ಏನು?

Kannada actor darshan Birthday countdown fans starts contributions
Author
Bangalore, First Published Jan 21, 2020, 9:42 AM IST

ಕೇಕ್‌, ಬ್ಯಾನರ್‌ ಬೇಡ

ಬ್ಯಾನರ್‌, ಕೇಕ್‌ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಹಾಗೆ ನನ್ನ ಹುಟ್ಟುಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ- ಪಕ್ಕದವರಿಗೆ ತೊಂದರೆ ಆಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್‌ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಈ ಮನವಿಯನ್ನು ನೀವೆಲ್ಲ ಒಪ್ಪಿಕೊಂಡು ಪಾಲಿಸುತ್ತೀರಿ ಎಂದು ನಂಬಿದ್ದೇನೆ... ಇದು ನಟ ದರ್ಶನ್‌ ಅವರು ಮಾಡಿಕೊಂಡಿರುವ ಮನವಿ.

ಡಿ-ಬಾಸ್‌ ಬರ್ತಡೇ: ಮನವಿಗೆ ಕಿವಿಗೊಡ್ತಾರಾ ಅಭಿಮಾನಿಗಳು?

ದವಸ, ಧಾನ್ಯಗಳ ಸಂಗ್ರಹ

ದರ್ಶನ್‌ ಮನವಿಗೆ ಸ್ಪಂದಿಸಿದ ನೂರಾರು ಮಂದಿ ಅಭಿಮಾನಿಗಳು ಈಗಾಗಲೇ ದವಸ, ಧಾನ್ಯಗಳು, ಅಕ್ಕಿ, ಬೇಳೆ ಮುಂತಾದವುಗಳನ್ನು ತಂದು ದರ್ಶನ್‌ ಅವರಿಗೆ ನೇರವಾಗಿ ನೀಡುತ್ತಿದ್ದಾರೆ. ಮೂಟೆಗಳ ಲೆಕ್ಕದಲ್ಲಿ ಅಭಿಮಾನಿಗಳು ನೀಡುತ್ತಿದ್ದು, ಎಲ್ಲವನ್ನೂ ಸ್ವತಃ ದರ್ಶನ್‌ ಅವರೇ ಪಡೆದುಕೊಂಡು ತಮ್ಮ ನಿವಾಸದಲ್ಲಿ ಸಂಗ್ರಹ ಮಾಡುತ್ತಿದ್ದಾರೆ. ಹೀಗೆ ಅಭಿಮಾನಿಗಳಿಂದ ದವಸ- ಧಾನ್ಯಗಳು ಪಡೆದುಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ಹುಟ್ಟುಹಬ್ಬಕ್ಕೆ 26 ದಿನ ಬಾಕಿ

ದರ್ಶನ್‌ ಹುಟ್ಟುಹಬ್ಬಕ್ಕೆ ಇನ್ನೂ 26 ದಿನ ಬಾಕಿ ಇದೆ. ಫೆ.16ರಂದು ದರ್ಶನ್‌ ಹುಟ್ಟುಹಬ್ಬ. ಕಳೆದ ವರ್ಷ ದರ್ಶನ್‌ ಇದೇ ರೀತಿ, ‘ನನ್ನ ಹುಟ್ಟುಹಬ್ಬಕ್ಕೆ ಕೇಕು, ಹೂವಿನ ಹಾರ, ಕಟೌಟ್‌ಗಳನ್ನು ಹಾಕಿ ಖರ್ಚು ಮಾಡುವ ಹಣವನ್ನು ಕಷ್ಟದಲ್ಲಿ ಇರುವವರಿಗೆ ನೆರವಾಗುವುದಕ್ಕೆ ಆ ಹಣವನ್ನು ಬಳಸಿ’ ಎಂದಿದ್ದರು. ದರ್ಶನ್‌ ಮಾತಿನಂತೆ ಕಳೆದ ವರ್ಷದಿಂದ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹೀಗೆ ಸಾಮಾಜಿಕ ಕಾರ್ಯಗಳಿಗೆ ಅಭಿಮಾನಿಗಳು ಬಳಸುವ ಮೂಲಕ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

Follow Us:
Download App:
  • android
  • ios