Asianet Suvarna News Asianet Suvarna News

Happy Birthday Ajay Rao: 42ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್‌ನ​ 'ಕೃಷ್ಣ' ಖ್ಯಾತಿಯ ಅಜಯ್ ರಾವ್

ಸ್ಯಾಂಡಲ್​ವುಡ್​ನಲ್ಲಿ 'ಕೃಷ್ಣ' ಅಂತಲೇ ಫೇಮಸ್​ ಆಗಿರುವ ನಟ ಅಜಯ್ ರಾವ್. ಇಂದು ಅಜಯ್​ ರಾವ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2003ರಲ್ಲಿ ತೆರೆಕಂಡ 'ಎಕ್ಸ್​ಕ್ಯೂಸ್​ ಮಿ' ಚಿತ್ರದ ಮೂಲಕ ಅಜಯ್​ ರಾವ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
 

Kannada Actor Ajay Rao Turns to 42 and Celebrating Birthday Today gvd
Author
Bangalore, First Published Jan 24, 2022, 1:27 PM IST

ಸ್ಯಾಂಡಲ್​ವುಡ್​ನಲ್ಲಿ 'ಕೃಷ್ಣ' ಅಂತಲೇ ಫೇಮಸ್​ ಆಗಿರುವ ನಟ ಅಜಯ್ ರಾವ್ (Ajay Rao). ಇಂದು ಅಜಯ್​ ರಾವ್ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದು, 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2003ರಲ್ಲಿ ತೆರೆಕಂಡ ಜೋಗಿ ಪ್ರೇಮ್ (Jogi Prem) ನಿರ್ದೇಶನದ 'ಎಕ್ಸ್​ಕ್ಯೂಸ್​ ಮಿ' (Excuse Me) ಚಿತ್ರದ ಮೂಲಕ ಅಜಯ್​ ರಾವ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದರು. ಈ ಚಿತ್ರದಲ್ಲಿ ಅಜಯ್​ ರಾವ್, ರಮ್ಯಾ (Ramya) ಹಾಗೂ ಸುನೀಲ್ ರಾವ್ (Sunil Rao)​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 'ಎಕ್ಸ್​ಕ್ಯೂಸ್​ ಮಿ' ಚಿತ್ರ ಅಜಯ್‌ಗೆ ಒಳ್ಳೆಯ ಇಮೇಜ್ ತಂದುಕೊಡುವಲ್ಲಿ ಯಶಸ್ವಿಯಾಯಿತು. 

ಅನಂತರ 2008ರಲ್ಲಿ ತೆರೆಕಂಡಿರುವ ಆರ್.ಚಂದ್ರು (R.Chandru) ನಿರ್ದೇಶನದ 'ತಾಜ್ ಮಹಲ್' (Tajmahal) ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುವ ಮೂಲಕ ಪರಿಪೂರ್ಣ ನಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣ ಲೀಲಾ', 'ಕೃಷ್ಣ ರುಕ್ಕು', 'ಕೃಷ್ಣ ಟಾಕೀಸ್' ಸಿನಿಮಾಗಳ ಮೂಲಕ ಚಂದನವನದಲ್ಲಿ 'ಕೃಷ್ಣ' (Krishna) ಅಜಯ್ ರಾವ್ ಅಂತಲೇ ಅವರು ಖ್ಯಾತಿ ಪಡೆದಿದ್ದಾರೆ. ಅಜಯ್ ಕೇವಲ ನಟನೆ ಮಾಡುವುದಲ್ಲದೇ ಕೆಲ ಚಿತ್ರಗಳಿಗೆ ನಿರ್ಮಾಪಕರಾಗಿಯೂ ಸ್ಯಾಂಡಲ್‌ವುಡ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಇವರ ಅಭಿನಯದ ರೊಮ್ಯಾಂಟಿಕ್ ಕ್ರೈಮ್‌ ಥ್ರಿಲ್ಲರ್ ಚಿತ್ರ 'ಲವ್​ ಯೂ ರಚ್ಚು' (Love You Racchu) ತೆರೆ ಕಂಡಿತ್ತು.

Ajay Rao: 'ಶೋಕಿವಾಲ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

ನಟ ಅಜಯ್​ ರಾವ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಪ್ನಾರನ್ನು (Sapna) ಅಜಯ್ ರಾವ್ ಮದುವೆಯಾಗಿದ್ದಾರೆ. ಅಜಯ್ ರಾವ್ - ಸಪ್ನಾ ದಂಪತಿಗೆ ಚೆರಿಷ್ಮಾ (Cherishma) ಎಂಬ ಮುದ್ದಾದ ಮಗಳಿದ್ದಾಳೆ. ಮಾತ್ರವಲ್ಲದೇ ಅಜಯ್ ಸಿನಿಮಾ ಕೆಲಸಗಳ ಬಿಡುವಿನಲ್ಲಿ ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಾರೆ. ಮುದ್ದು ಮಗಳಾದ ಚರೀಷ್ಮಾ ಜೊತೆ ಎಂಜಾಯ್​ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್​ (Viral) ಆಗಿತ್ತು. 'ಲವ್ ಯು ರಚ್ಚು' ಸಿನಿಮಾ ನಂತರ ನಟ ಅಜಯ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. 'ಶ್ರಾವಣಿ ಸುಬ್ರಮಣ್ಯ' ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ (Manju Swaraj) ಡೈರೆಕ್ಷನ್‌ನ ಮುಂದಿನ ಸಿನಿಮಾದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ.

ವಿಶಿಷ್ಟ ಪ್ರೇಮಕಥೆಯುಳ್ಳ ಕೌಟುಂಬಿಕ ಸಿನಿಮಾಗಾಗಿ ಇಬ್ಬರು ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ, ಇನ್ನೂ ಹೆಸರಿಡದ ಸಿನಿಮಾವನ್ನು ಲೋಹಿತ್ ನಂಜುಂಡಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಆರಂಭಿಸಿದೆ. ಸ್ಕ್ರಿಪ್ಟ್‌ನ ಅಂತಿಮ ಕೆಲಸ ನಡೆಯುತ್ತಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಅಧಿಕೃತವಾಗಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಅಜನೀಶ್ ಲೋಕನಾಥ್ ಸಂಗೀತ, ಬಸವರಾಜ್ ಅರಸ್ ಸಂಕಲನ ಈ ಚಿತ್ರಕ್ಕಿರಲಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ (TR Chandrasekhar) ಅವರು ನಿರ್ಮಿಸುತ್ತಿರುವ 'ಶೋಕಿವಾಲ' (Shokiwala) ಚಿತ್ರದಲ್ಲೂ ಅಜಯ್ ನಟಿಸುತ್ತಿದ್ದಾರೆ.

Love You Rachchu Film Review: ದಾಂಪತ್ಯ ಗೀತದಲ್ಲಿ ಕೊಲೆ ಗಿಲೆ ಇತ್ಯಾದಿ

ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯಿಂದ ಯು/ಎ ಪ್ರಮಾಣ ಪತ್ರ (U/A Certificate) ಸಿಕ್ಕಿದೆ. ಅಜಯ್‌ಗೆ ಜೋಡಿಯಾಗಿ ಸಂಜನಾ ಆನಂದ್ (Sanjana Anand) ಅಭಿನಯಿಸುತ್ತಿದ್ದಾರೆ. 'ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಲಕ್ಕಿ, ಸಂತು ಸ್ಟ್ರೇಟ್ ಫಾರ್ವಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದ ಜಾಕಿ (Jocky) ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲಿಟ್ ಆಗಿ ಡಬ್ಬಿಂಗ್ ಸಹ ಮುಕ್ತಾಯವಾಗಿದೆ. ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನಾ, ಲಾಸ್ಯಾ, ನಾಗರಾಜ ಮೂರ್ತಿ ಸೇರಿದಂತೆ ಹಲವರು ಈ ಚಿತ್ರದ ತಾರಾಗಣದಲ್ಲಿದ್ದಾರೆ. 

Follow Us:
Download App:
  • android
  • ios