2 ವರ್ಷಗಳ ಹಿಂದೆ ಮುಂದುವರೆದ ಅಧ್ಯಾಯ ಸಿನಿಮಾ ರಿಲೀಸ್ ವೇಳೆ ಯುಟ್ಯೂಬ್‌ನಲ್ಲಿ ವಿಮರ್ಶೆ ಮಾಡುವವರ ವಿರುದ್ಧ ಗರಂ ಆದ ಆದಿತ್ಯಾ. ವಿಡಿಯೋ ವೈರಲ್... 

ಕನ್ನಡ ಚಿತ್ರರಂಗದ ಡೆಡ್ಲಿ ಸೋಮಾ ಆದಿತ್ಯಾ ನಟಿಸಿರುವ ಸಿನಿಮಾ ಮುಂದುವರೆದ ಅಧ್ಯಾಯ ಎರಡು ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಸಿನಿಮಾ ಚೆನ್ನಾಗಿಲ್ಲ ಹಾಗಿದೆ ಹೀಗಿದೆ ಎಂದು ನೆಗೆಟಿವ್ ಕಾಮೆಂಟ್ ಮಾಡಿದ ಯುಟ್ಯೂಬ್‌ ವಿಮರ್ಶಕರಿಗೆ ವಿಡಿಯೋ ಮೂಲಕ ಆದಿತ್ಯಾ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿದೆ. ಕೆಲವು ಸರಿಯಾಗಿ ಹೇಳಿದ್ದೀರಾ ಆದಿತ್ಯಾ ಎನ್ನುತ್ತಾರೆ ಇನ್ನೂ ಕೆಲವರು ಯುಟ್ಯೂಬರ್‌ಗಳ ಪರ ಬ್ಯಾಟಿಂಗ್ ಮಾಡಿದ್ದಾರೆ.

'ನನ್ನ ಮುಂದುವರೆದ ಅಧ್ಯಾಯ ಸಿನಿಮಾ ಆಗಿ ಚೆನ್ನಾಗಿ ಓಡುತ್ತಿದೆ ಆದರೆ ಕೆಲವೊಂದು ಯುಟ್ಯೂಬರ್‌ಗಳು ಚಿತ್ರದ ಬಗ್ಗೆ ವಿಮರ್ಶೆ ಮಾಡುತ್ತಾರೆ. ಅವರಿಗೆ ಮೊದಲು ಪ್ರಶ್ನೆ ಮಾಡಿ ಕೇಳಬೇಕು..ವಿಮರ್ಶೆ ಮಾಡೋಕೆ ಯಾರು ನೀವೆಲ್ಲಾ? ವಿಮರ್ಶೆ ಮಾಡೋ ಅರ್ಹತೆ ಯಾರು ಕೊಟ್ಟರು? ನಿಮಗೆ ಹಕ್ಕು ಯಾರು ಕೊಟ್ರು? ನೀವು ಸಿನಿಮಾ ನೋಡಿದ್ದೀರಾ ನಿಮ್ಮ ಅಭಿಪ್ರಾಯವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಸಾವಿರ ಜನಕ್ಕೆ 10 ಸಾವಿರ ಜನಕ್ಕೆ ಹೇಳಲು ಹೋಗಬೇಡಿ. ನಿಮ್ಮಿಂದ ಯಾರೂ ಆಪೇಕ್ಷೆ ಪಡುತ್ತಿಲ್ಲ ಅಥವಾ ಯುಟ್ಯೂಬ್‌ನಲ್ಲಿ ಕುಳಿತುಕೊಂಡು ವಿಮರ್ಶೆ ಮಾಡಿ ಎನ್ನುತ್ತಿಲ್ಲ. ನಿಮಗೆ ಕೆಲಸ ಇಲ್ವಾ ಬನ್ನಿ ಚಿತ್ರರಂಗದಲ್ಲಿ ನಾವು ಕೆಲಸ ಕೊಡುತ್ತೀವಿ. ಒಂದು ದಿನ ನಮ್ಮ ಶೂಟಿಂಗ್ ಸೆಟ್‌ನಲ್ಲಿ ಬಂದು ಕೆಲಸ ಮಾಡಿ ದುಡಿಯಿರಿ..ಒಬ್ಬ ಲೈಟ್‌ ಅಸಿಸ್ಟೆಂಟ್ ಆಗಿ ದುಡಿಬೇಕು ಮತ್ತೊಬ್ಬ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡಿ ಒಬ್ಬ ಡೈರೆಕ್ಟರ್ ಅಸಿಸ್ಟೆಂಟ್ ಆಗಿ ದುಡಿಯಿರಿ ಆಗ ನಮ್ಮ ಕಷ್ಟ ಏನೆಂದು ನಿಮಗೆ ತಿಳಿಯುತ್ತದೆ' ಎಂದು ಆದಿತ್ಯಾ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಸೀಟ್‌ ಬೆಲ್ಟ್‌ ಹಾಕಿದ್ದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ: ತಂಗಿ ಬಗ್ಗೆ ಭಾವುಕರಾದ ನಟ ಆದಿತ್ಯ

'ಒಂದೇ ಒಂದು ದಿನ ನಮ್ಮ ಸಿನಿಮಾದಲ್ಲಿ ಕೆಲಸ ಮಾಡಿ. ಆಗ ಸಿನಿಮಾ ಅಂದ್ರೆ ಏನು ನಮ್ಮ ಕಷ್ಟ ಅಂದ್ರೆ ಏನು ಎಂದು ತಿಳಿಯುತ್ತದೆ. ಒಂದು ರೂಮ್‌ನಲ್ಲಿ ಕುಳಿತುಕೊಂಡು ಮೊಬೈಲ್ ಹಿಡಿದುಕೊಂಡು ಸಿನಿಮಾ ಹಾಗೆ ಹೀಗೆ ಅಂತ ಹೇಳುತ್ತೀರಾ..ನಿಮಗೆ ಹಕ್ಕು ಕೊಟ್ಟವರು ಯಾರು? ನನ್ನ ಸಿನಿಮಾ ಬಗ್ಗೆ ಮಾತನಾಡುವ ಹಕ್ಕು ಕೊಟ್ಟವರು ಯಾರು? ನನ್ನ ಸಿನಿಮಾ ವಿಮರ್ಶೆ ಮಾಡಿರುವ ನಿಮ್ಮ ವಿಡಿಯೋ ಕೆಳಗೆ ಕಾಮೆಂಟ್ಸ್‌ ನೋಡಿ ಎಷ್ಟು ಜನ ನಿಮಗೆ ಬೈದಿದ್ದಾರೆ ಅಂತ. ನಿಜ ಏನು ಅನ್ನೋದು ಮೊದಲು ತಿಳಿದುಕೊಳ್ಳಿ. ಗಂಡಸ್ತನ ಇದ್ರೆ ಏನಾದರೂ ಧೈರ್ಯ ಅನ್ನೋದು ಇದ್ರೆ ನಿಮ್ಮ ಮನೆ ಮಠಗಳನ್ನು ಅಡ ಇಡಿ ಅಥವಾ ಮಾರ್ಕೆಟ್‌ನಿಂದ ಹಣ ತಂದು ಇಂಟ್ರೆಸ್ಟ್‌ಗೆ ಬಿಟ್ಟು ಸಿನಿಮಾ ಮಾಡಿ. ಆಗ ನೀವು ಯಾವ ತರ ಸಿನಿಮಾ ಮಾಡ್ತೀರಾ ನಾನು ನೋಡ್ತೀನಿ. ಆಗ ನಾವೆಲ್ಲಾ ಕೂತ್ಕೊಂಡು ವಿಮರ್ಶೆ ಮಾಡ್ತೀವಿ. ಸಿನಿಮಾ ಬಗ್ಗೆ ನಿಮಗೇನು ಗೊತ್ತು? ಒಬ್ಬ ನಿರ್ಮಾಪಕನ ಕಷ್ಟ ಗೊತ್ತಾ? ಅಥವಾ ಕನಸು ಹೊತ್ತುಕೊಂಡು ಬರುವ ಹೊಸ ನಿರ್ದೇಶನ ಬಗ್ಗೆ ಗೊತ್ತಾ ನಿಮಗೆ? ಒಬ್ಬ ನಿರ್ಮಾಪಕನ ಕಷ್ಟ ಏನು ನಿರ್ದೇಶಕನ ಕಷ್ಟ ಏನು? ನಟನ ಶ್ರಮ ಎಷ್ಟಿದೆ ಅನ್ನೋದು ನಿಮಗೆ ಗೊತ್ತಾಗಬೇಕು ಅಂದ್ರೆ ಬಂದು ಒಂದು ದಿನ ಕೆಲಸ ಮಾಡಿ' ಎಂದು ಆದಿತ್ಯಾ ಹೇಳಿದ್ದಾರೆ.

ಇದು ನನ್ನ ಮತ್ತೊಂದು ಅಧ್ಯಾಯ: ಆದಿತ್ಯ

'ಬೆಳಗ್ಗೆ ರಾತ್ರಿ ಮಳೆ ಚಳಿ ಬಿಸಿಲು ಲೆಕ್ಕ ಮಾಡದೆ ಕಷ್ಟ ಪಟ್ಟು ಸಿನಿಮಾ ಮಾಡುವವರು ನಾವು. ಎಲ್ಲೋ ಎಸಿ ರೂಮ್‌ನಲ್ಲಿ ಕುಳಿತುಕೊಂಡು ಡಬ್ಬ ವಿಮರ್ಶೆ ಮಾಡ್ಕೊಂಡು ಯುಟ್ಯೂಬ್‌ನಲ್ಲಿ ವಿಡಿಯೋ ಮಾಡ್ತೀರಾ? ಸಿನಿಮಾ ಬಗ್ಗೆ ಮಾತನಾಡೋಕೆ ಯಾರು ನೀವು? ಪ್ರತಿಷ್ಠಿತ ಪತ್ರಿಕೆಗಳಲ್ಲಿ ನನ್ನ ಸಿನಿಮಾ 3.5 ಹಾಗೂ 4 ಸ್ಟಾರ್‌ಗಳು ಪಡೆದುಕೊಂಡಿದೆ. ನನ್ನ ಸಿನಿಮಾ ನೋಡಿ ಅದನ್ನು ಅರ್ಥ ಮಾಡಿಕೊಂಡು ಈ ಕ್ಷೇತ್ರವನ್ನು ತಿಳಿದುಕೊಂಡು ವಿಮರ್ಶೆ ಮಾಡಿದ್ದಾರೆ ಅವರು ನಿಜವಾದ ಪತ್ರಕರ್ತರು. ಕೆಲಸ ಇಲ್ಲ ಅಂತ ಯುಟ್ಯೂಬ್ ಮಾಡಿಕೊಂಡಿದ್ದೀರಾ...ವಿಮರ್ಶೆ ಮಾಡುವವರು ಗುಂಪು ಮಾಡಿಕೊಂಡು ಸಿನಿಮಾ ಮಾಡಿ ನಾನು ನೋಡ್ತೀನಿ ಯಾವ ರೀತಿ ಸಿನಿಮಾ ಮಾಡ್ತೀರಾ ಎಂದು. ನಾನು ಹೇಳೋ ಮಾತುಗಳನ್ನು ಕೇಳಿ ನಿಮಗೆ ಬೇಸರ ಆಗಿರಬಹುದು ಆದರೆ ಅದಕ್ಕಿಂತ ಡಬಲ್ ಬೇಸರ ನನಗೆ ಆಗಿದೆ. ಇಷ್ಟು ಒಳ್ಳೆ ವಿಮರ್ಶೆ ಬರುತ್ತಿದೆ ಜನರು ಚೆನ್ನಾಗಿದೆ ಅಂತ ಹೇಳುತ್ತಿದ್ದರೂ ನೀವು ನೆಗೆಟಿವ್ ಹೇಳುತ್ತಿದ್ದಿರಿ. ಒಬ್ಬ ಯುಟ್ಯೂಬರ್ ನನ್ನ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡಿ ಮತ್ತೊಂದು ಕನ್ನಡ ಸಿನಿಮಾ ಪೋಸ್ಟರ್ ಹಾಕಿದ್ದಾರೆ. ನೀನು ಕೂಡ ಕನ್ನಡ ಸಿನಿಮಾಯಿಂದ ದುಡ್ಡು ಮಾಡುತ್ತಿರುವುದು ಅಲ್ವಾ' ಎಂದಿದ್ದಾರೆ ಆದಿತ್ಯಾ.