'ಮುಂದುವರೆದ ಅಧ್ಯಾಯ' ಚಿತ್ರದ ಮೂಲಕ ಗಾಂಧಿ ನಗರಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ನಟ ಆದಿತ್ಯ ಸಹೋದರಿ ರಿಷಿಕಾ ಸಿಂಗ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಿಕಾ ಪರಿಸ್ಥಿತಿ ನೆನೆದು ದಯವಿಟ್ಟು ಈ ತಪ್ಪು ಯಾರು ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಎರಡು ತಿಂಗಳ ನಂತರ ಆಸ್ಪತ್ರೆಯಿಂದ ಮನೆಗೆ ಬಂದ ನಟಿ ರಿಷಿಕಾ ಸಿಂಗ್! 

ಆದಿತ್ಯ ಮಾತು: 
ರಿಷಿಕಾ ಈಗ ಸುಧಾರಿಸಿಕೊಳ್ಳುತ್ತಿದ್ದಾಳೆ. ಸ್ಪೈನಲ್‌ ಕಾರ್ಡ್‌ಗೆ ಏಟಾಗಿರೋದ್ರಿಂದ ಬಹಳ ನಿಧನವಾಗಿ ಗುಣಮುಖಳಾಗುತ್ತಿದ್ದಾಳೆ. ವೀಲ್ ಚೇರ್‌ನಲ್ಲೇ ಇದ್ದಾಳೆ ನಿಧಾನವಾಗಿ ಎದ್ದೇಳಲು ಪ್ರಯತ್ನ ಮಾಡುತ್ತಿದ್ದಾಳೆ. ಸಂಪೂರ್ಣವಾಗಿ ಗುಣಮುಖಳಾಗೋಕ್ಕೆ 1 ವರ್ಷ ಬೇಕು ಎಂದಿದ್ದಾರೆ ಡಾಕ್ಟರ್ ಎಂದು ಆದಿತ್ಯ ಮಾತನಾಡಿದ್ದಾರೆ.

'ನನ್ನ ತಂಗಿ ಸೀಟ್‌ ಬೆಲ್ಟ್‌ ಹಾಕದೇ ಇದ್ದಿದ್ದಕ್ಕೆ ಆ ಆ್ಯಕ್ಸಿಡೆಂಟ್ ಆಗಿ, ಇಷ್ಟು ದೊಡ್ಡ ಮಟ್ಟದಲ್ಲಿ ಏಟು ಆಗಿರೋದು. ನನ್ನನ್ನು ಹೊರತುಪಡಿಸಿ ಇಡೀ ಫ್ಯಾಮಿಲಿ ಬರ್ತಡೇ ಪಾರ್ಟಿ ಮುಗಿಸಿಕೊಂಡು ಬರುತ್ತಿರುವಾಗ ಈ ಘಟನೆ ನಡೆದಿದೆ. ಮಳೆ ಬಂದಿದ್ದ ಕಾರಣ ರೋಡ್ ಸ್ಕಿಡ್ ಆಗಿತ್ತು. ಬಹುಶಃ ಸೀಟ್‌ ಬೆಲ್ಟ್‌ ಹಾಕಿದಿದ್ರೆ ನನ್ನ ತಂಗಿಗೆ ಈ ಪರಿಸ್ಥಿತಿ ಬರ್ತಿರಲಿಲ್ಲ,' ಎಂದ್ಹೇಳುತ್ತಾ ಆದಿತ್ಯ ಭಾವುಕರಾಗಿದ್ದಾರೆ. 

ಹೋರಾಟ ಗೆದ್ದು ಬಂದ ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್ 

ಮತ್ತೆ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಬೇಕು ಎಂಬುದು ರಿಷಿಕಾ ಕನಸಾಗಿರುವ ಕಾರಣ ಮನೆಯಲ್ಲಿ ಸಿನಿಮಾ ಸ್ಕ್ರಿಪ್ಟ್‌ಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರಂತೆ. ಚೇತರಿಕೆ ಕಂಡು ಬರುತ್ತಿದ್ದಂತೆ, ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.