ನೂರಾರು ಸಿನಿಮಾಗಳಲ್ಲಿ ನಟಿಸಿರುವ ನಟ ಯಾಕೆ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ? ಕಾರಣ ಬಿಚ್ಚಿಟ್ಟ ಅಚ್ಯುತ್ ಕುಮಾರ್... 

ಕನ್ನಡ ಚಿತ್ರರಂಗದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಅಚ್ಯುತ್ ಕುಮಾರ್ ಪ್ರಚಾರ ಮತ್ತು ಸಂದರ್ಶನಗಳಿಂದ ತುಂಬಾ ದೂರ ಉಳಿಯುತ್ತಾರೆ ಎಂದು ಜನರು ಸೋಷಿಯಲ್ ಮೀಡಿಯಾ ಮತ್ತು ಅಲ್ಲಿ ಇಲ್ಲಿ ಆಗಾಗ ಮಾತನಾಡಿಕೊಳ್ಳುತ್ತಾರೆ. ಈ ವಿಚಾರದ ಬಗ್ಗೆ ಯಾರೂ ಪ್ರಶ್ನೆ ಮಾಡುವ ಧೈರ್ಯ ಮಾಡಿರಲಿಲ್ಲ ಆದರೆ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ರಿಲೀಸ್ ಸಮಯದಲ್ಲಿ ಸಂದರ್ಶನವೊಂದರಲ್ಲಿ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 

'ನಿಮ್ಮನ್ನು ಸಿನಿಮಾಗಳಲ್ಲಿ ಸಾಕಷ್ಟು ನೋಡುತ್ತೀವಿ ಇದರ ಬಗ್ಗೆ ಖುಷಿ ಇದೆ ಆದರೆ ಸಂದರ್ಶನಗಳಲ್ಲಿ ನೀವು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಅದಕ್ಕೆ ಕಾರಣ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೀವಿ ಅಂತಾನಾ ಅಥವಾ ನನ್ನ ಕೆಲಸ ಮಾತನಾಡಬೇಕು ನಾನು ಮಾತನಾಡುವುದಿಲ್ಲ ಅನ್ನೋ ಆಲೋಚನೆನಾ?' ಎಂದು ಫಿಲ್ಮ ಕಂಪ್ಯಾನಿಯನ್ ಸಂದರ್ಶನದಲ್ಲಿ ನಿರೂಪಕ ಪ್ರಶ್ನೆ ಮಾಡಿದಾಗ 'ಎರಡೂ ಇದೆ...ಬ್ಯುಸಿಯಾಗಿರುತ್ತೀವಿ ಹಾಗೂ ಮಾತನಾಡುವ ಆಸಕ್ತಿನೂ ಇಲ್ಲ' ಎಂದು ಅಚ್ಯುತ್ ಉತ್ತರ ಕೊಟ್ಟಿದ್ದಾರೆ. 

ಛೀ! ಯಾವ ಬಾಲಿವುಡ್‌ ನಟಿನೂ ಈ ರೀತಿ ಪೋಸ್ಟ್‌ ಹಾಕಲ್ಲ; ಸಾರಾಗೆ ಫುಲ್ ಕ್ಲಾಸ್

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಅಗಿತ್ತು. ಈ ಪ್ರಶ್ನೆಗೆ ಉತ್ತರ ಕೊಟ್ಟ ನಂತರ ಅಚ್ಯುತ್ ಹೊರಡಬಹುದಾ ಎನ್ನುತ್ತಾರೆ. ಒಬ್ಬ ಹಿರಿಯ ನಟನಾಗಿ ಈ ರೀತಿ ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟ ರೀತಿ ತಪ್ಪಾ ಎಂದು ತಿಳಿಯದೆ ಅಭಿಮಾನಿಗಳು ಸುಮ್ಮನಾಗಿದ್ದಾರೆ.

ಈ ಹಿಂದೆ ನೀಡಿದ ಸಂದರ್ಶನಗಳಲ್ಲಿ ವೈರಲ್ ಆದ ಮಾತುಗಳು. ಬೈ ಟು ಲವ್ ಸಮಯದಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ ಬಗ್ಗೆ ಪ್ರಶ್ನೆ ಮಾಡಿದಾಗ 'ನೀವು ಲೀವ್ ಇನ್‌ನಲ್ಲಿ (Living Relationship) ಇರ್ತೀರೋ ಅಥವಾ ಗಂಡ ಹೆಂಡತಿ (Marriage) ಆಗಿರ್ತೀರೋ, ಒಬ್ಬರನ್ನೊಬ್ಬರು ಎಷ್ಟು ದೂರ ಪ್ರೀತಿ ಮಾಡ್ತೀರಾ, ಮನುಷ್ಯರಾಗಿರುತ್ತೀರಾ ಅನ್ನೋದು ಮುಖ್ಯ. ಯಾವ ರೀತಿ ಬಂಧನದಲ್ಲಿರುತ್ತೀವಿ ಅನ್ನೋದೂ ಮುಖ್ಯ ಅಲ್ಲ. ಯಾವ ಬಂಧನದಲ್ಲಿ ಇದ್ದು ಮನುಷ್ಯರಾಗಿ ಇರುತ್ತೀವಿ ಅನ್ನೋದು ಮುಖ್ಯ. ಇದು ವ್ಯತ್ಯಾಸ ಅನಿಸೊಲ್ಲ ನನಗೆ. ಈಗಿನ ತುರ್ತು ಏನು ಅಂದ್ರೆ ಎಷ್ಟು ಮನುಷ್ಯರಾಗಿ ಇರ್ತೀವಿ. ಸಾಯ್ತೀವಿ ಅನ್ನೋದು ಮುಖ್ಯವಾಗುತ್ತದೆ'ಎಂದು ಹೇಳಿದ್ದರು.

ನಟಿ ರೇಖಾ ದಾಸ್‌ನ ಮೀರಿಸುತ್ತಾಳೆ ಪುತ್ರಿ ಸಾತ್ವಿಕಾ; ತಲೆ ಕೆಡಿಸಿದ ಹಾಟ್ ಲುಕ್!

ಕೈ ತುಂಬಾ ಸಿನಿಮಾಗಳಿರುವ ಅಚ್ಯುತ ಕುಮಾರ್ ಅವರಿಗೆ ಸಿನಿಮಾ ನಿರಾಕರಿಸುವುದು ಕಷ್ಟದ ಕೆಲಸ ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರ ಇದು. 'ಸಿನಿಮಾ ತಂಡಗಳು ಸಂಪರ್ಕ ಮಾಡಿದ್ದಾಗ ಇಲ್ಲ ಎಂದು ಹೇಳುವುದಕ್ಕೆ ಕಷ್ಟ ಆಗುತ್ತದೆ. ಅಲ್ಲಿ ಎಲ್ಲರೂ ಗೊತ್ತಿರುವವರೇ ಇರುತ್ತಾರೆ. ಇಲ್ಲವಾದರೆ ಸ್ನೇಹಿತರು (Friends,) ಇಲ್ಲವಾದರೆ ನಾವು ತುಂಬಾ ಗೌರವ ನೀಡುವ ವ್ಯಕ್ತಿಗಳು ಇರುತ್ತಾರೆ. ನಾನು ವರ್ಷಗಳು ಕಳೆಯುತ್ತಿದ್ದಂತೆ, ಯಾವ ರೀತಿ ಸಿನಿಮಾ ಫಿಲ್ಟರ್ ಮಾಡಿಕೊಳ್ಳಬೇಕು ಎಂದು ತಿಳಿದುಕೊಂಡಿರುವೆ. ನನಗೆ ಚಾಲೆಂಜ್ ಮತ್ತು excite ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವೆ,' ಎಂದು ಅಚ್ಯುತ್ ಕುಮಾರ್ ಟೈಮ್ಸ್‌‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.