Achyuth Kumar: ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ಆಫ್ ಆನ್ ಆಗುವುದನ್ನು ಕಲಿಯಬೇಕು

ಲವ್ ಯೂ ರಚ್ಚು ಚಿತ್ರದಲ್ಲಿ ರಚಿತಾ ರಾಮ್ ತಂದೆ ಪಾತ್ರದಲ್ಲಿ ಅಚ್ಯುತ ಕುಮಾರ್.  ಕ್ಯಾಮೆರಾ ಆಫ್‌ ಆ್ಯಂಡ್ ಆನ್‌ ಆದಾಗ ಪಾತ್ರದ ಬದಾವಣೆ ಹೇಗಿರಬೇಕು? 
 

Kannada actor Achyuta Kumar to play Rachita Ram father in Love You Rachchu vcs

300ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದ ಅಚ್ಯುತ ಕುಮಾರ್ (Achyuth Kumar) 'ಲವ್ ಯು ರಚ್ಚು' ಸಿನಿಮಾದಲ್ಲಿ ರಚಿತಾ ರಾಮ್ (Rachita Ram) ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದಾ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅಚ್ಯುತ್ ಕುಮಾರ್ ಪಾತ್ರ ಆಯ್ಕೆ ಹೇಗೆ ಮಾಡಿಕೊಳ್ಳುತ್ತಾರೆ, ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣ ಮಾಡುವಾಗ ಪಾತ್ರ ಬದಲಾವಣೆ ಹೇಗೆ ಮಾಡುತ್ತಾರೆ?ಸಂಪೂರ್ಣ ಮಾಹಿತಿ ಇಲ್ಲಿದೆ... 

'ನಾವು ಸ್ವಿಚ್ ಆನ್ ಆಂಡ್ ಆಫ್ ಮಾಡುವುದಕ್ಕೆ ಕಲಿಯಬೇಕು. ಸೆಟ್‌ನಲ್ಲಿ ಮಾತ್ರವಲ್ಲದೇ ಕ್ಯಾಮೆರಾ (Camera) ಆನ್ ಮತ್ತು ಆಫ್ ಆದಾಗಲೂ ಇದ ಕಲಾವಿದನಿಗೆ ಕರಗತವಾಗಿರಬೇಕು. ಇದೇ ನಮ್ಮ ವೃತ್ತಿ ಜೀವನದ ಇಂಟಿಗ್ರಲ್ ಪಾರ್ಟ್ (Intergral Part). ಇದು ರಿಯಲ್ Craftsmanship and acting' ಎಂದು ಅಚ್ಯುತ್ ಕುಮಾರ್ ಹೇಳಿದ್ದಾರೆ. 

ಕೈ ತುಂಬಾ ಸಿನಿಮಾಗಳಿರುವ ಅಚ್ಯುತ ಕುಮಾರ್ ಅವರಿಗೆ ಸಿನಿಮಾ ನಿರಾಕರಿಸುವುದು ಕಷ್ಟದ ಕೆಲಸ. 'ಸಿನಿಮಾ ತಂಡಗಳು ಸಂಪರ್ಕ ಮಾಡಿದ್ದಾಗ ಇಲ್ಲ ಎಂದು ಹೇಳುವುದಕ್ಕೆ ಕಷ್ಟ ಆಗುತ್ತದೆ. ಅಲ್ಲಿ ಎಲ್ಲರೂ ಗೊತ್ತಿರುವವರೇ ಇರುತ್ತಾರೆ. ಇಲ್ಲವಾದರೆ ಸ್ನೇಹಿತರು (Friends,) ಇಲ್ಲವಾದರೆ ನಾವು ತುಂಬಾ ಗೌರವ ನೀಡುವ ವ್ಯಕ್ತಿಗಳು ಇರುತ್ತಾರೆ. ನಾನು ವರ್ಷಗಳು ಕಳೆಯುತ್ತಿದ್ದಂತೆ, ಯಾವ ರೀತಿ ಸಿನಿಮಾ ಫಿಲ್ಟರ್ ಮಾಡಿಕೊಳ್ಳಬೇಕು ಎಂದು ತಿಳಿದುಕೊಂಡಿರುವೆ. ನನಗೆ ಚಾಲೆಂಜ್ ಮತ್ತು excite ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವೆ,' ಎಂದು ಅಚ್ಯುತ್ ಕುಮಾರ್ ಟೈಮ್ಸ್‌‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Kannada actor Achyuta Kumar to play Rachita Ram father in Love You Rachchu vcs

'ನಾನು ಅಜಯ್ ರಾವ್‌ (Ajai Rao) ಜೊತೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವೆ. ಕೃಷ್ಣ ಸೀರಿಸ್‌ನಲ್ಲೂ ಕೂಡ. ನಾವಿಬ್ಬರೂ ಕೆಲಸ ಮಾಡುವ ಶೈಲಿಗೆ ಹೊಂದಿಕೊಂಡಿದ್ದೀವಿ, ಹೀಗಾಗಿ ಪದೇ ಪದೇ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸುಲಭವಾಗುತ್ತದೆ,' ಎಂದಿದ್ದಾರೆ. 

Pushpa The Rise review: ರಕ್ತ ಚಂದನ ಕದ್ದು ಸಾಗಿಸೋ ಚಾಲಾಕಿಯಾಗಿ ಸ್ಟೈಲಿಷ್ ಸ್ಟಾರ್

ನಿನ್ನೆ ಲವ್ ಯು ರಚ್ಚು (Love You Racchu) ಸಿನಿಮಾದ ಟ್ರೈಲರ್ ಲಾಂಚ್ (Trailer Launch) ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ನೆನಪಿಸಿಕೊಳ್ಳುವ ಮೂಲಕ ಚಿತ್ರ ತಂಡ ಕಾರ್ಯಕ್ರಮವನ್ನು ಶುರು ಮಾಡಿತ್ತು. 'ಧ್ರುವ ಸರ್ಜಾ ಅವರು ಜನವರಿಯಲ್ಲಿ ನನ್ನ ಜೆಂಟಲ್‌ಮ್ಯಾನ್ ಸಿನಿಮಾ ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದರು. ಅವತ್ತಿನ ದಿನ ನೆನಪಿಸಿಕೊಂಡರೆ ಒಂದು ಕಡೆ ಖುಷಿ, ಒಂದು ಕಡೆ ದುಃಖ. ಅವತ್ತು ಪುನೀತ್ ಸರ್ ಕೂಡ ಇದ್ದರು. ಅವರನ್ನು ನಾನು ಮಿಸ್ ಮಾಡಿಕೊಳ್ಳುವೆ. ಪ್ರತಿ ಸಲವೂ ನಾನು ಅವರಿಗೆ ಟ್ರೈಲರ್ ಕಳುಹಿಸಿದಾಗ ಅಥವಾ ಈ ರೀತಿ ಕಾರ್ಯಕ್ರಮ ಇದೆ ಅಂತ ಹೇಳಿದಾಗ, ಅವರು ಮನೆ ಹತ್ರಾನೂ ಬರುವುದಕ್ಕೆ ಬಿಡುತ್ತಿರಲಿಲ್ಲ. ಸರ್ ಫೋನ್‌ನಲ್ಲಿ (Phone) ಹೇಳಿದ್ದೀರಿ ಅಲ್ವಾ ಸರ್, ಅಷ್ಟೇ ಸಾಕು ಬರ್ತೀನಿ ಅಂತ ಹೇಳುತ್ತಿದ್ದರು. ಅವರು ಇದ್ದಾಗ 15 ದಿನಗಳ ಹಿಂದೆಯೇ ಅವರ ಹತ್ತಿರ ನನ್ನ ಪೆಂಟಗನ್‌ (Pentagon) ಅಂತ ಆರ್ಥಾಲಜಿ ಸಿನಿಮಾ ಮಾಡ್ತೀದೀನಿ ಅಂತ ಹೇಳಿದಾಗ ಹೊಸ ತರ ಸಿನಿಮಾ ನಮ್ಮ ಪಿಆರ್‌ಕೆ (PRK Productions) ಮೂಲಕ ಟ್ರೈ ಮಾಡೋಣ. ನೀವು ಬಂದು ಒಂದು ಟ್ರೈಲರ್‌ ತರ ಕಟ್ ಮಾಡಿಕೊಡಿ. ನಾನು ಅಮೇಜಾನ್ ಅಥವಾ ನೆಟ್‌ಫ್ಲಿಕ್ಸ್‌ ಟ್ರೈ ಮಾಡ್ತೀನಿ ಅಂತ ಹೇಳಿದ್ರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದು ಕರ್ನಾಟಕಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೆ ದುಃಖ ಆಗಿದೆ.' ಎಂದು ನಿರ್ದೇಶಕರು ಗುರುದೇಶಪಾಂಡೆ ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios