ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಆಗಸ್ಟ್‌ 11ಕ್ಕೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು  23 ವರ್ಷ ಪೂರೈಸಲಿದ್ದಾರೆ. ಡಿ-ಬಾಸ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ #23YearsOfBossism ಎಂಬ ಹ್ಯಾಷ್‌ಟ್ಯಾಗ್ ವೈರಲ್ ಮಾಡುತ್ತಿದ್ದಾರೆ.  ಈ ಸಂಭ್ರಮದಲ್ಲಿ ಭಾಗಿಯಾಗಿರುವ   ಜೂನಿಯರ್ ರೆಬೆಲ್ ಸ್ಟಾರ್ ಹೊಸ ಪೋಸ್ಟರ್  ರಿವೀಲ್ ಮಾಡಿದ್ದಾರೆ.

ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪುತ್ರನ ಕುದುರೆ ಸವಾರಿ..!

'ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ. ಸೆಲೆಬ್ರೇಟ್‌ ದಿ ಮ್ಯಾನ್, ದಿ ಮಿಥ್, ದಿ ಲೆಜೆಂಡ್- 23ರ ಸಂಭ್ರಮ. ನಿಮ್ಮನ್ನ ಅಣ್ಣ ಎಂದು ಕರೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ. ಇದು ನಿಮ್ಮ ಅಭಿಮಾನಿಗಳ ಕೊಡುಗೆ. ಸೀನಿಯರ್‌ ನಿಮ್ಮಂತೆ ಮತ್ಯಾರು ಇರಲು ಸಾಧ್ಯವಿಲ್ಲ' ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ.

 

ನಟ ನೆನಪಿರಲಿ ಪ್ರೇಮ್‌ ಕೂಡ ನಾಳೆ ಬೆಳಗ್ಗೆ 10ಕ್ಕೆ ದರ್ಶನ್‌ ಫೋಟೋ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ಎಲ್ಲರೂ ಕಾಮನ್‌ ಡಿಪಿ ಆಗಿ ಬಳಸಿಕೊಳ್ಳಬಹುದು. '23 ವರ್ಷ ಪೂರೈಸುವುದು ಸುಲಭ ಸಾಧನೆಯಲ್ಲ. ಅಭಿನಂದನೆಗಳು ಭಾಯಿಜಾನ್‌ ದರ್ಶನ್' ಎಂದು ಪ್ರೇಮ್ ಟ್ಟೀಟ್ ಮಾಡಿದ್ದಾರೆ.

ಕೊರೋನಾ ಕಾಟದಿಂದ ಅಭಿಮಾನಿಗಳು ನಾಳೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭ್ರಮಾಚರಣೆ ಮಾಡಲಿದ್ದಾರೆ.

 

 
 
 
 
 
 
 
 
 
 
 
 
 

Tomorrow at 10am! Stay Tuned 🤗 #STAYLOVELY

A post shared by Prem Nenapirali (@premnenapirali) on Aug 9, 2020 at 3:15am PDT