ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!
ಸಿನಿಮಾ ನಿರ್ಮಾಪಕರಾಗಿ ನಾವು ಕಲಾವಿದರಿಗೆ, ತಂತ್ರಜ್ಞರಿಗೆ ಬೇಸಿಕ್ ಫೆಸಿಲಿಟಿ ಎಲ್ಲಾನೂ ಕೊಡ್ತೀವಿ. ಹಣ, ಫುಡ್, ಟೀ-ಕಾಫೀ, ಈಗ ಕ್ಯಾರಾವ್ಯಾನ್, ಎಲ್ಲಾ ಸೌಲಭ್ಯ ಕೊಡ್ತೀವಿ. ಬೇರೆ ಏನೇ ಬೇಕಾದ್ರೆ, ಅಗತ್ಯ ಅನ್ನಿಸಿದ್ರೆ ಖಂಡಿತ ತಂದು ಕೊಡ್ತೀವಿ. ಸಿನಿಮಾ ಟೀಮ್‌ನಲ್ಲಿ ಯಾರಿಂದಲಾದ್ರೂ ಲೈಂಗಿಕ ಕಿರುಕುಳ..
ಕನ್ನಡದ ಹಿರಿಯ ನಿರ್ಮಾಪಕರಾದ ಕೆ. ಮಂಜು ಅವರು ಕಾಸ್ಟಿಂಗ್ ಕೌಚ್ ಹಾಗೂ ಮೀಟೂ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಚಾನೆಲ್ಲೊಂದರ ಸಂದರ್ಶನದಲ್ಲಿ ಮಾತನಾಡಿರುವ ಕೆ ಮಂಜು ಅವರು 'ಹಳೆಯ ಹೀರೋಯನ್‌ಗಳು ಈ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರು ತಮ್ಮ ಕೆಲಸವಾಗಿರುವ ಸಿನಿಮಾ ನಟನೆಯನ್ನು ಮಾಡಿಕೊಂಡು ಹೋಗುತ್ತಿದ್ದರು. 'ಸಿನಿಮಾವನ್ನು ಸಿನಿಮಾ ಆಗಿ ನೋಡಿ. ಹಿರಿಯ ನಟಿ ಲಕ್ಷ್ಮೀ (Lakshmi) ಅವರು ಹಾಗೂ ಮಾಲಾಶ್ರೀ ಮೇಡಂ (Malashri) ಬಗ್ಗೆ ಅಪಾರವಾದ ಗೌರವವಿದೆ' ಎಂದಿದ್ದಾರೆ' ಕೆ ಮಂಜು.
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು ಅವರು, 'ಸಿನಿಮಾ ಅಂದಾಗ ಆ ಬಗ್ಗೆ ಪ್ರೀತಿ ಇರಬೇಕು. ಲಕ್ಷ್ಮೀ ಮೇಡಂ ಹಾಗೂ ಮಾಲಾಶ್ರೀ ಅವರೆಲ್ಲಾ ಎರಡು ಸೀರೆ ಅಡ್ಡ ಇಟ್ಟುಕೊಂಡು ಡ್ರೆಸ್ ಚೇಂಜ್ ಮಾಡಿದಾರೆ. ಗ್ರೇಟ್ ಅನ್ಬೇಕು, ಯಾಕಂದ್ರೆ ಅವ್ರು ರೂಮ್‌ಗೆ ಹೋಗಿ ಡ್ರೆಸ್ ಬದಲಾಯಿಸಿಕೊಂಡು ಬರೋದಕ್ಕೆ ಮೂರು ತಾಸು ಆಗುತ್ತೆ.. ಲಕ್ಷ್ಮೀ ಮೇಡಂ ಹಾಗೂ ಮಾಲಾಶ್ರೀ ಅವರೆಲ್ಲಾ ಹಾಗೆ ಇದ್ರು. ಅದು ಸಿನಿಮಾ, ಅದು ಅವ್ರ ಸಿನಿಮಾ ಪ್ರೀತಿ. ಕಂಪ್ಲೇಂಟ್ ಮಾಡುತ್ತಾ ಕುಳಿತಿರಲಿಲ್ಲ ಅವ್ರೆಲ್ಲಾ.
ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ಕನ್ನಡ ಇಲ್ಲ; ಹೌದು ಸ್ವಾಮಿ!
ನಾವು ಸಿನಿಮಾ ನಿರ್ಮಾಪಕರಾಗಿ ಕಲಾವಿದರಿಗೆ, ತಂತ್ರಜ್ಞರಿಗೆ ಬೇಸಿಕ್ ಫೆಸಿಲಿಟಿ ಎಲ್ಲಾನೂ ಕೊಡ್ತೀವಿ. ಹಣ, ಫುಡ್, ಟೀ-ಕಾಫೀ, ಈಗ ಕ್ಯಾರಾವ್ಯಾನ್, ಎಲ್ಲಾ ಸೌಲಭ್ಯ ಕೊಡ್ತೀವಿ. ಬೇರೆ ಏನೇ ಬೇಕಾದ್ರೆ, ಅಗತ್ಯ ಅನ್ನಿಸಿದ್ರೆ ಖಂಡಿತ ತಂದು ಕೊಡ್ತೀವಿ. ಸಿನಿಮಾ ಟೀಮ್‌ನಲ್ಲಿ ಯಾರಿಂದಲಾದ್ರೂ ಲೈಂಗಿಕ ಕಿರುಕುಳ ಅಥವಾ ಬೇರೆ ಏನಾದರೂ ಸಮಸ್ಯೆ ಆದ್ರೆ ನಮ್ಗೆ ಹೇಳಿದ್ರೆ ಅಲ್ಲೇ ಬಗೆ ಹರಿಸ್ತೀವಿ. ಅದು ಬಿಟ್ಟೆ, ಆಗ ಸುಮ್ಮನೇ ಇದ್ದು, ಹತ್ತು ವರ್ಷಗಳ ಮೇಲೆ ಕ್ಯಾಮೆರಾ ಎದುರು ಹೇಳಿದ್ರೆ ಏನ್ ಮಾಡೋದು' ಎಂದು ತಮ್ಮ ಸಿಟ್ಟು ಹೊರಹಾಕಿದ್ದಾರೆ ಕೆ. ಮಂಜು.
ಸಿನಿಮಾ ಟೀಮ್‌ನಲ್ಲಿ, ಸ್ಥಳದಲ್ಲಿ ಯಾವುದೇ ಸಮಸ್ಯೆ ಆದರೆ ಅಲ್ಲೇ ಹೇಳಿ ಅದನ್ನು ಬಗೆಹರಿಸಿಕೊಳ್ಳಬಹುದು. ಅಥವಾ, ಅಲ್ಲಿ ಪರಿಹಾರ ಸಾಧ್ಯವಿಲ್ಲ ಎಂದಾದರೆ ತಕ್ಷಣವೇ ಪೊಲೀಸ್ ಸ್ಟೇಷನ್ ಮೊರೆ ಹೋಗಬಹುದು. ಅದು ಬಿಟ್ಟು, ಯಾರದೋ ಮಾತನ್ನು ಕೇಳಿ ಯಾವತ್ತೋ ಒಂದು ದಿನ ನನಗೆ ಹಾಗೆ ಮಾಡಿದ್ರು, ಹೀಗೆ ಮಾಡಿದ್ರೆ ಎಂದು ಹೇಳಿದರೆ ಅದು ಮೀಡಿಯಾಗೆ ಮತ್ತು ಕೆಲವರಿಗೆ ಫುಡ್ ಕೊಡುತ್ತೆ ಅಷ್ಟೇ. ಅದರಿಂದ ಸಮಾಜಕ್ಕೆ ಅಥವಾ ಅವರಿಗೆ ಯಾವುದೇ ಲಾಭವಿಲ್ಲ. ಅದರಿಂದ ಸಿನಿಮಾರಂಗಕ್ಕೆ ಏಟು ಬೀಳುತ್ತೆ ಅಷ್ಟೇ' ಎಂದಿದ್ದಾರೆ ಕೆ. ಮಂಜು.
ಒಟ್ಟಿನಲ್ಲಿ, ಮಲೆಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿಯಿಂದ ಬಿರುಗಾಳಿ ಎದ್ದ ಬೆನ್ನಲ್ಲೇ, ತೆಲುಗು ಚಿತ್ರರಂಗದಲ್ಲಿ ಕೂಡ ಕಾಸ್ಟಿಂಗ್ ಕೌಚ್ ಹಾಗೂ ಮೀಟೂ ಸಖತ್ ಸದ್ದು ಮಾಡತೊಡಗಿದೆ. ಇದೀಗ, ಚೇತನ್ ಅಹಿಂಸಾ ನೇತೃತ್ವದಲ್ಲಿ, ಕವಿತಾ ಲಂಕೇಶ್, ಶ್ರುತಿ ಹರಿಹರನ್ ಹಾಗು ಇತರರ ಬೆಂಬಲ ಪಡೆದು 'ಫೈರ್' ಸಂಸ್ಥೆಯನ್ನು ಕನ್ನಡದಲ್ಲಿ ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಸಿನಿಮಾರಂಗದಲ್ಲಿ ನಡೆಯುವ ಶೋಷಣೆಗೆ ಕಡಿವಾಣ ಹಾಕಲು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಕೂಡ ಮಾಡಿಕೊಳ್ಳಲಾಗಿದೆ.
ವೀರಪ್ಪನ್‌ನಿಂದ ಡಾ ರಾಜ್‌ಕುಮಾರ್ ಬಿಡಿಸಿಕೊಳ್ಳಲು 'ಸಂಗ್ರಾಮ್' ಸಂಗ್ರಹಿಸಿದ್ದ ಹಣವೆಷ್ಟು?
ಆದರೆ, ಈ ಬಗ್ಗೆ ಕನ್ನಡ ಚಿತ್ರರಂಗದಲ್ಲಿ, ನಿರ್ಮಾಪಕರಲ್ಲಿ ಒಮ್ಮತವಂತೂ ಇಲ್ಲ. ಏಕೆಂದರೆ, ಈಗಾಗಲೇ ಯಾವುದೇ ಶೋಷಣೆ ತಡೆಯಲು ಪೊಲೀಸ್, ಕಾನೂನು, ಕೋರ್ಟು ಎಲ್ಲವೂ ಇದೆ. ಅದು ಬಿಟ್ಟು ಎಲ್ಲದರಲ್ಲೂ ಮೂಗು ತೂರಿಸೋ ನಿರುದ್ಯೋಗಿ ಚೇತನ್ ಅಹಿಂಸಾ ಅಂಥವರನ್ನು ಅನಾವಶ್ಯಕವಾಗಿ ಸಾಕಲು 'ಫೈರ್'ನಂತಹ ಹೊಸ ಸಂಸ್ಥೆ ಅಗತ್ಯವಿಲ್ಲ ಎಂದು ನಿರ್ಮಾಪಕ ಹಾಗೂ ಫಿಲಂ ಚೇಂಬರ್ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು ಸೇರಿದಂತೆ, ಹಲವರು ಹೇಳಿದ್ದಾರೆ. ಇದೀಗ ಕೆ. ಮಂಜು ಕೂಡ ಸಾರಾ ಗೋವಿಂದು ಅವರ ಧಾಟಿಯಲ್ಲೇ ಮಾತನಾಡಿದ್ದಾರೆ.