ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಮ್ಮ ನಿರ್ದೇಶನದ ‘ಶಕೀಲಾ’ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವ ಮುನ್ನವೇ ಅವರು ಹೀಗೆ ಧಿಡೀರನೆ ಮಾಧ್ಯಮಗಳ ಮುಂದೆ ಬರಲು ಕಾರಣ, ಪೈರಸಿ ಎಂಬ ಭೂತ.
ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ‘ಶಕೀಲಾ’ ಚಿತ್ರವನ್ನು ಪೈರಸಿ ಮಾಡಿ ಅನ್ಯಾಯ ಮಾಡಿದ್ದಾರೆ ಎಂಬುದು ನಿರ್ದೇಶಕರ ನೇರ ಆರೋಪ ಮತ್ತು ನೋವಿನ ಮಾತು.
‘ಒಂದು ಚಿತ್ರವನ್ನು ಹೆಚ್ಚು ಜನ ನೋಡಿದರೆ ನಿರ್ದೇಶಕನಿಗೆ ಖುಷಿ ಆಗುತ್ತದೆ. ತನ್ನ ಸಿನಿಮಾ ಯಾವ ಮೂಲದಲ್ಲಾದರೂ ನೋಡಲಿ ಎಂದುಕೊಳ್ಳುತ್ತಾನೆ ನಿರ್ದೇಶಕ. ಆದರೆ, ನಿರ್ಮಾಪಕನಿಗೆ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತದೆ. ಸಿನಿಮಾದಿಂದ ನಿರ್ದೇಶಕ ಗೆದ್ದರೆ ಮಾತ್ರ ಸಾಲದು. ನಿರ್ಮಾಪಕನಿಗೂ ಹಣ ಬರಬೇಕು. ಆದರೆ, ಪೈರಸಿ ಮಾಡಿದರೆ ನಿರ್ಮಾಪಕನಿಗೆ ಹಣ ಎಲ್ಲಿಂದ ಬರಬೇಕು. ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿರಗಳಲ್ಲಿ ಶಕೀಲಾ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿತ್ತು. ಆದರೆ, ಪೈರಸಿಯಿಂದ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿದೆ. ಗಳಿಕೆ ಕಡಿಮೆಯಾಗಿದೆ. ಇದು ಒಂದು ಚಿತ್ರವನ್ನು ನಿರ್ದಾಕ್ಷಿಣ್ಯವಾಗಿ ಕೊಂದಂತೆ ಆಗುತ್ತದೆ’ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.
"
ಪೈರಸಿಯನ್ನು ತಡೆಯಲು ಸೂಕ್ತ ಕ್ರಮಗಳು ಜರುಗಿಸಲು ಆಗುತ್ತಿಲ್ಲ. ಅಂತ ವ್ಯವಸ್ಥೆಯೂ ಇಲ್ಲ. ಸುಮಾರು 15 ರಿಂದ 20 ವೆಬ್‌ಸೈಟ್‌ಗಳಲ್ಲಿ ‘ಶಕೀಲಾ’ ಸಿನಿಮಾ ಸಿಗುತ್ತಿದೆ. ಯಾರೂ ಯೂಟ್ಯೂಬ್‌ನಲ್ಲೂ ಅಪ್‌ಲೋಡ್ ಮಾಡಿದ್ದಾರಂತೆ. ಬಹುಭಾಷೆಯಲ್ಲಿ ಬಿಡುಗಡೆಯಾಗಿರುವ ಕಾರಣ ಯಾರು, ಎಲ್ಲಿ, ಯಾವಾಗ ಪೈರಸಿ ಮಾಡುತ್ತಿದ್ದಾರೆ ಎಂಬುದು ಚಿತ್ರತಂಡಕ್ಕೆ ಗೊತ್ತಾಗುತ್ತಿಲ್ಲ. ಹೀಗಾಗಿ ‘ಶಕೀಲಾ’ ಪೈರಸಿ ಭೂತಕ್ಕೆ ಬಲಿಯಾಗುತ್ತಿದೆ ಎಂದು ಇಂದ್ರಜಿತ್ ನೋವು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಪೈರಸಿಯನ್ನು ತಡೆಗಟ್ಟಿನಿರ್ಮಾಪಕರನ್ನು ಉಳಿಸಬೇಕು ಎನ್ನುವ ಮನವಿಯನ್ನು ಮುಂದಿಟ್ಟರು ಇಂದ್ರಜಿತ್ ಲಂಕೇಶ್.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 1, 2021, 3:31 PM IST