ಶಕೀಲಾ ನೋಡಲು ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ : ಇಂದ್ರಜಿತ್
ಡಿ.25ಕ್ಕೆ 2000 ಥಿಯೇಟರ್‌ಗಳಲ್ಲಿ ಶಕೀಲಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಿರ್ದೇಶನ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿದ್ದಾರೆ.
‘ಶಕೀಲಾ ಸಿನಿಮಾ ವಿಶ್ವಾದ್ಯಂತ 2000 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗ್ತಿದೆ. ಇದು ರಿಯಲ್ ಪ್ಯಾನ್ ಇಂಡಿಯಾ ಸಿನಿಮಾ. ಶಕೀಲಾ ಸಿನಿಮಾಗೆ ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ?’ ಹೀಗೆಂದದ್ದು ನಿರ್ದೇಶಕ ಇಂದ್ರಜಿತ್ ಲಂಕೇಶ್.
ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್
ಚಿತ್ರ ಬಿಡುಗಡೆ ಪ್ರಯುಕ್ತ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಹೀಗೊಂದು ಓಪನ್ ಚಾಲೆಂಜ್ ಮಾಡಿದ್ರು. ‘ನಾವು ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಗೆದ್ರೆ ಟ್ರೆಂಡ್ ಸೆಟ್ಟರ್ ಆಗ್ತೀವಿ’ ಅಂದ ಇಂದ್ರಜಿತ್ ಅದೇ ಆತ್ಮವಿಶ್ವಾಸದಲ್ಲಿ, ಶಕೀಲಾಗೆ ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ ಅಂತ ಮಾರ್ಮಿಕವಾಗಿ ನುಡಿದರು.
‘ಈ ಚಿತ್ರದ ಕತೆ ದಕ್ಷಿಣ ಭಾರತದ ನಟಿ ಶಕೀಲಾ ಬದುಕಿನದ್ದು. ಹೀರೋಯಿನ್ ರಿಚಾ ಚಡ್ಡಾ, ಮುಖ್ಯಪಾತ್ರದಲ್ಲಿರುವ ಪಂಕಜ್ ತ್ರಿಪಾಠಿ ಬಾಲಿವುಡ್‌ನವರು. ಇದರಲ್ಲಿ ಕೇರಳದ ರಾಜೀವ್ ಇದ್ದಾರೆ. ನಮ್ಮ ಕನ್ನಡದ ಸುಚೇಂದ್ರ ಪ್ರಸಾದ್, ಎಸ್ತರ್ ನೊರ್ಹೊನಾ ಮೊದಲಾದವರಿದ್ದಾರೆ. ಬೇರೆ ಬೇರೆ ರಾಜ್ಯದವರೆಲ್ಲ ಇದ್ದಾರೆ. ಹೀಗಾಗಿ ನಿಜಕ್ಕೂ ಇಂಡಿಯಾ ಲೆವೆಲ್ ಸಿನಿಮಾ. ಹಿಂದಿಯಲ್ಲಿ ಸಿನಿಮಾ ಮಾಡಿರೋದು. ಕನ್ನಡ, ತೆಲುಗು, ತಮಿಳು, ಮಲೆಯಾಳಂಗೆ ಡಬ್ ಮಾಡಿರೋದು. ನಮ್ಮಲ್ಲೀಗ ಭಾಷೆ ಬೆಳೀತಿದೆ, ಗಡಿ ಕುಸೀತಿದೆ. ಈ ಟೈಮ್‌ನ ಅಗತ್ಯ ಪಾನ್ ಇಂಡಿಯಾ ಸಿನಿಮಾ’ ಎಂದೂ ಇಂದ್ರಜಿತ್ ಹೇಳಿದರು. ಡಿ 25ಕ್ಕೆ ಚಿತ್ರ ಬಿಡುಗಡೆ ಕಾಣಲಿದೆ.
ಶಕೀಲಾ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್...!