ಸ್ಯಾಂಡಲ್‌ವುಡ್ ಸುಲ್ತಾನ ಕಿಚ್ಚ ಸುದೀಪ್ ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ತಿದ್ದಾರೆ. ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ. ಇಂದು ದುಬೈನ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದೆ. ಇಂದು ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ರಾರಾಜಿಸಲಿದೆ.

ಜಗತ್ತಿನ ಎತ್ತರದ ಬುರ್ಜ್ ಖಲೀಫಾದ ಮೇಲೆ ಅಭಿನಯ ಚಕ್ರವರ್ತಿಯ 2000 ಅಡಿ ಕಟೌಟ್ ಕಾಣಿಸಲಿದೆ. ವಿಕ್ರಾಂತ್ ರೋಣ ಚಿತ್ರದ ಟೀಸರ್ ಕೂಡ ಬುರ್ಜ್ ಖಲೀಫಾದ ಮೇಲೆ ರಿಲೀಸ್ ಆಗಲಿದೆ.

ಟಾಲಿವುಡ್‌ನಲ್ಲಿ ರಾಬರ್ಟ್ ರಿಲೀಸ್: ವಿವಾದಕ್ಕೆ ಸಿಗುತ್ತಾ ಪರಿಹಾರ ?

ವಿಕ್ರಾಂತ್ ರೋಣ ಸಿನಿಮಾದ 180 ಸೆಕೆಂಡುಗಳ ಟೀಸರ್ ಬಿಡುಗಡೆ ಆಗಲಿದೆ. ಇಂದು ರಾತ್ರಿ ವಿಕ್ರಾಂತ್ ರೋಣ ಟೈಟಲ್‌   ಲೋಗೋ ಕೂಡ ಲಾಂಚ್ ಆಗಲಿದೆ. ರಾತ್ರಿ 9 ಗಂಟೆಗೆ ಕಿಚ್ಚ ಕ್ರಿಯೇಷನ್ಸ್ ಯ್ಯೂಟ್ಯೂಬ್ ಚಾನೆಲ್ ನಿಂದ ಕಾರ್ಯಕ್ರಮ ಲೈವ್ ಪ್ರಸಾರವಾಗಲಿದೆ.

ಸುದೀಪ್ ಮತ್ತು ತಂಡ ಮೂರು ದಿನಗಳ ಹಿಂದೆಯೇ ದುಬೈ ತಲುಪಿದ್ದಾರೆ. ಕಿಚ್ಚನ ಬೆಳ್ಳಿಹಬ್ಬ ಆಚರಣೆಯಲ್ಲಿ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಭಾಗಿಯಾಗಲಿದ್ದಾರೆ. ದುಬೈನ ಬುರ್ಜ್​ ಖಲೀಫ ಮೇಲೆ ಕಿಚ್ಚ ಸುದೀಪ್​ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದ್ದು, ಸುದೀಪ್ ಬೆಳ್ಳಿ ಹಬ್ಬ ಆಚರಣೆಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ.? ಮೂರು ನಿಮಿಷದ ಲೇಸರ್ ಲೈಟ್​​​​​ ಕಟೌಟ್​​ಗೆ ಬರೋಬ್ಬರಿ 70 ಲಕ್ಷ ಖರ್ಚು ಮಾಡಲಾಗಿದೆ.

ವಾವ್..! ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಪೋಸ್ಟರ್

ಬುರ್ಜ್​ ಖಲೀಫ ಕಟ್ಟಡವನ್ನ ಒಂದುವರೆ ಕಿಲೋ ಮೀಟರ್ ದೂರದಿಂದ ಚಿತ್ರೀಕರಿಸಲಿರೋ ಕಿಚ್ಚ ಕ್ರಿಯೇಷನ್ಸ್​​​​ ಟೀಂ ಆರು ಕ್ಯಾಮೆರಾ ಯುನಿಟ್​ಗಳನ್ನ ಬಳಸಿ ಈ ಸುಂದರ ಕ್ಷಣವನ್ನ ಸೆರೆಹಿಡಿಯಲಿದ್ದಾರೆ.

ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಈ ಮನಮೋಹಕ ದೃಶ್ಯವನ್ನ ಕಣ್ತುಂಬಿಕೊಳ್ಳಬಹುದು. ದುಬೈನ ಕಾಲಮಾನದಲ್ಲಿ 7.30 ಕ್ಕೆ ಕಿಚ್ಚನ ಬೆಳ್ಳಿಹಬ್ಬ ಆಚರಣೆ ಶುರುವಾಗುತ್ತೆ. 

'ಮೈ ಆಟೋಗ್ರಾಫ್ ಸೋತಿದ್ರೆ ಮನೆ ಬಿಟ್ಟು ಹೋಗಬೇಕಿತ್ತು. ಸೂಟ್‌ಕೇಸ್ ರೆಡಿ ಮಾಡಿಟ್ಟಿದ್ದೆ'

ಸುದೀಪ್​ ಬೆಳ್ಳಿಹಬ್ಬ ಆಚರಣೆ 45 ನಿಮಿಷ ನಡೆಯಲಿದೆ. ದುಬೈನಲ್ಲಿ ಸುದೀಪ್ ಬೆಳ್ಳಿಹಬ್ಬದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ. ಸುದೀಪ್ ಗೆ ಸಿನಿಮಾ ಗಣ್ಯರಿಂದ ಶುಭಾಶಯಗಳ ಸುರಿಮಳೆಯಾಗಿದೆ. ಸಿನಿರಂಗದಲ್ಲಿ 25ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಲಾವಿದರು ವಿಷ್ ಮಾಡಿದ್ದಾರೆ. ಕಿಚ್ಚನಿಗೆ ರಮ್ಯಾ ಕೃಷ್ಣ, ಮೋಹನ್ ಲಾಲ್, ಉಪೇಂದ್ರ‌, ಪ್ರಿಯಾಮಣಿ ಶುಭಕೋರಿದ್ದಾರೆ.