ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಿನಿಮಾ ಟಾಲಿವುಡ್‌ನಲ್ಲಿಯೂ ಭರ್ಜರಿ ಬಿಡುಗಡೆ ಕಾಣಲಿದೆ ಎನ್ನಲಾಗಿತ್ತು.

ಆದರೆ ನಂತರ ನಡೆದ ಬೆಳವಣಿಗೆಗಳಿಂದ ಟಾಲಿವುಡ್‌ನಲ್ಲಿ ರಾಬರ್ಟ್ ಸಿನಿಮಾ ಸಿನಿಮಾ ಬಿಡುಗಡೆ ಡೌಟ್ ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ ಬಗ್ಗೆ ಭಾರೀ ಕುತೂಹಲವಿದ್ದು ಈ ಸಂಬಂಧ ಮಹತ್ವದ ಸಭೆ ನಡೆಯಲಿದೆ.

ವಾವ್..! ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಪೋಸ್ಟರ್

ರಾಬರ್ಟ್ ವಿವಾದಕ್ಕೆ ಇಂದು ಮಹತ್ವದ ದಿನವಾಗಿದ್ದು, ಸೌತ್ ಇಂಡಿಯನ್ ಫಿಲಂ ಚೇಂಬರ್ ಅಸೋಶಿಯೇಶನ್ ಸಭೆ ಚೆನ್ನೈನಲ್ಲಿ ನಡೆಯಲಿದೆ. ಬೆಳಗ್ಗೆ 11.30 ಕ್ಕೆ ಸಭೆ ನಡೆದಿದೆ. ಸೌತ್ ಇಂಡಿಯನ್ ಫಿಲಂ ಚೇಂಬರ್ ಅದ್ಯಕ್ಷ ಕಾಟ್ರಗಾಡ್ ಪ್ರಸಾದ್ ಸೇರಿದಂತೆ ಎಲ್ಲ ಪದಾದಿಕಾರಿಗಳು ಭಾಗಿಯಾಗಲಿದ್ದಾರೆ. 

ಕರ್ನಾಟಕ ವಾಣಿಜ್ಯ ಮಂಡಳಿ ಅದ್ಯಕ್ಷ ಜಯರಾಜ್ ಭಾಗಿಯಾಗಲಿದ್ದಾರೆ. ತೆಲುಗು ಪ್ರೊಡ್ಯೂಜರ್ಸ್ ಕೌನ್ಸಿಲ್ ನ ಪ್ರಮುಖರು ಭಾಗಿಯಾಗಲಿದ್ದಾರೆ. ಟಾಲಿವುಡ್ ನ ನಿರ್ಮಾಪಕರ ಸಂಘದಿಂದ ಶ್ರೀ ಕಲ್ಯಾಣ್ ಮತ್ತು ರವಿ ಕೊಟಾರ್ ಕರ್ ಭಾಗಿಯಾಗಲಿದ್ದು, ಸದ್ಯ ರಾಬರ್ಟ್ ತಂಡದ ದೂರಿನ ಪ್ರತಿ ಜೊತೆ ಜಯರಾಜ್ ಮಾತುಕತೆ ನಡೆಸೋ ಪ್ಲಾನ್ ಮಾಡಲಾಗಿದೆ.