ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ಇಲ್ಲದ ಕಾರಣ ತರಗತಿಗೆ ಗೈರು ಮೊಬೈಲ್ ನೆರವು ನೀಡುವಂತೆ ಭಿತ್ತಿಪತ್ರ ಹಿಡಿದ ಸಹೋದರಿಯರು  ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ನೋಡಿ ನೆರವಿಗೆ ಮುಂದಾದ ನಟ

ಬೆಂಗಳೂರು(ಜು.08): ಕೊರೋನಾ ಕಾರಣ ಮಕ್ಕಳ ಶಿಕ್ಷಣ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಆದರೆ ಅದೆಷ್ಟೋ ಮಕ್ಕಳು ಮೊಬೈಲ್ ಇಲ್ಲದೆ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಹೀಗೆ ಕೊಪ್ಪಳದ ಸಹೋದರಿಯಾರದ ಗಿರಿಜಾ ಹಾಗೂ ಪ್ರೀತಿ ನೋವಿನ ಕತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಎಳೆ ಎಳೆಯಾಗಿ ಬಿಚ್ಚಿಟ್ಟಿತು. ಈ ವರದಿ ನೋಡಿದ ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ನೆರವಿಗೆ ಧಾವಿಸಿದ್ದಾರೆ. 

ಆನ್‌ಲೈನ್ ಕ್ಲಾಸ್‌ಗೆ ಮೊಬೈಲ್‌ಗಾಗಿ ಭಿತ್ತಿಪತ್ರ ಹಿಡಿದ ಸಹೋದರಿಯರು

8 ತರಗತಿಯಲ್ಲಿ ಓದುತ್ತಿರುವ ಗಿರಿಜಾ ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಿ, ಮೊಬೈಲ್ ಇಲ್ಲದ ಕಾರಣ ಆನ್‌ಲೈನ್ ಕ್ಲಾಸ್‌ನಿಂದ ವಂಚಿತರಾಗಿದ್ದಾರೆ. ಇನ್ನು 10 ವರ್ಷಗಳ ಹಿಂದೆ ತಂದೆ ನಿಧನರಾಗಿದ್ದಾರೆ. ನಿಂಬೆ ಹಣ್ಣು ಮಾರುತ್ತಾ ಜೀವನ ಸಾಗಿಸುತ್ತಿರುವ ಸಹೋದರಿಯರ ತಾಯಿಗೆ ಮೊಬೈಲ್ ಖರೀದಿಸುವ ಶಕ್ತಿ ಇಲ್ಲ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ನೋಡಿದ ಶ್ರೀಮುರಳಿ, ಸಹೋದರಿಯರಿಗೆ ಟ್ಯಾಬ್ ಕೊಡಿಸಲು ಮುಂದಾಗಿದ್ದಾರೆ.

ಗಿರಿಜಾ ಹಾಗೂ ಪ್ರೀತಿ ಸಹದೋರಿಯರ ಶಿಕ್ಷಣಕ್ಕೆ ಟ್ಯಾಬ್, ಇಂಟರ್ನೆಟ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲು ಶ್ರೀಮುರಳಿ ಕಾರ್ಯಪ್ರವೃತ್ತರಾಗಿದ್ದಾರೆ. ಅವರ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡಲು ಮುರಳಿ ಮುಂದಾಗಿದ್ದಾರೆ. ಈಗಾಗಲೇ ಮುರಳಿ ಮ್ಯಾನೇಜರ್ ಮೂಲಕ ಸೋಹದರಿಯರ ಶಿಕ್ಷಣಕ್ಕೆ ಹಣ ರವಾನಿಸಿದ್ದಾರೆ.

ಕೊರೋನಾ ವಾರಿಯರ್ಸ್‌ಗೆ ಅಗತ್ಯ ವಸ್ತು ನೀಡಿ ಮಾನವೀಯತೆ ಮೆರೆದ ನಟ ಶ್ರೀಮುರಳಿ!.

ಮುರಳಿ ಸೂಚನೆಯಂತೆ ಮದಗಜ ಚಿತ್ರದ ನಿರ್ದೇಶಕ ಮಹೇಶ್ , ಬಾಲಕಿಯರನ್ನು ಭೇಟಿಯಾಗಿ ಮಾತನಾಡಲಿದ್ದಾರೆ. ಬಾಲಕಿಯರಿಗೆ ಮೊಬೈಲ್ ಜೊತೆಗೆ ಅವರ ಅಗತ್ಯಕ್ಕೆ ಬೇಕಾದ ಆರ್ಥಿಕ ನೆರವು ನೀಡುವುದಾಗಿ ಮುರಳಿ ಭರವಸೆ ನೀಡಿದ್ದಾರೆ. 
"

ಕಳೆದೊಂದು ವಾರದಿಂದ ಆನ್‌ಲೈನ್ ತರಗತಿಗಳು ಆರಂಭಗೊಂಡಿದೆ. ತೀವ್ರ ಬಡತನ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗಿರಿಜಾ ಹಾಗೂ ಪ್ರೀತಿ ಸಹೋದರಿಯರು ಬೇರೆ ದಾರಿ ಕಾಣದೆ ಭಿತ್ತಿ ಪತ್ರ ಹಿಡಿದು ಆನ್‌ಲೈನ್ ಕ್ಲಾಸ್‌ಗೆ ಮೊಬೈಲ್ ನೆರವು ನೀಡುವಂತೆ ಭಿತ್ತಿ ಪತ್ರ ಹಿಡಿದು ಮನವಿ ಮಾಡಿದ್ದರು.