ಮತ್ತೆ ಕನ್ನಡಿಗರನ್ನು ಮನೋರಂಜಿಸಲು ಸಜ್ಜಾದ ಮಾಲಾಶ್ರೀ. ಓಟಿಟಿಯಲ್ಲಿ ಬರುತ್ತಿರುವ ಸ್ಟ್ರಾಂಗ್‌ ಪಾತ್ರಗಳು ಸಖತ್ ಇಷ್ಟವಾಗುತ್ತಿದೆ ಅಂತೆ.....

250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕನಸಿನ ರಾಣಿ ಮಾಲಾಶ್ರೀ ಕೊಂಚ ವಿಭಿನ್ನ ಪಾತ್ರಗಳನ್ನು ಹುಡುಕುತ್ತಿದ್ದಾರೆ. ಡ್ರೀಮ್ ಗರ್ಲ್‌, ಬಬ್ಲಿ ಗರ್ಲ್‌, ಲವರ್ ಗರ್ಲ್‌ ಆಗಿ ಜನರಿಗೆ ಹತ್ತಿರವಾದ ಮಾಲಾಶ್ರೀ ಈಗ ಆಕ್ಷನ್ ಕ್ವೀನ್, ಮಾಸ್ ಕ್ವೀನ್ ಎಂಬ ಬಿರುದು ಪಡೆಯುತ್ತಿದ್ದಾರೆ. ಆಕ್ಷನ್ ಅಥವಾ ಪೊಲೀಸ್ ಆಫೀಸರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕಿ ಇದೀಗ ಕೊಂಚ ಚೇಂಜ್ ಬೇಕು ಎನ್ನುತ್ತಿದ್ದಾರೆ.

ನನ್ನ ಅಭಿಮಾನಿಗಳು ಈಗಲೂ ನನ್ನನ್ನು ಇಷ್ಟ ಪಡುತ್ತಾರೆ. ಈಗಲೂ ನಿರ್ದೇಶಕರು ಕಥೆಯೊಂದಿಗೆ ನನ್ನನ್ನು ಸಂಪರ್ಕ ಮಾಡುತ್ತಿರುವುದಕ್ಕೆ ತುಂಬಾ ಖುಷಿ ಇದೆ. ಈಗ ನಾನು ಬೇರೆ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ. ಹೆಚ್ಚಾಗಿ ಮಾಹಿಳಾ ಪ್ರಧಾನ ಪಾತ್ರ ಅಥವಾ ಆಕ್ಷನ್ ಪಾತ್ರಗಳು ಬರುತ್ತಿದೆ. ಏನಾದರೂ ವಿಭಿನ್ನ ಪಾತ್ರವನ್ನು ಕೊಡಿ ಎಂದು ಕೇಳಿದಾಗ ಸರಿ ನಿಮ್ಮನ್ನು ಈ ಸಲ CID ಮಾಡೋಣ ಎನ್ನುತ್ತಾರೆ. ಇನ್ನೂ ವಿಭಿನ್ನ ಪಾತ್ರಗಳನ್ನು ನಿರ್ದೇಶಕರು ಕೊಡುವ ಮೂಲಕ ಈ ಮಿಥ್‌ಗೆ ಬ್ರೇಕ್ ಹಾಕಬೇಕು. ಗೆಸ್‌ ಅಪೀಯರೆನ್ಸ್‌ ಆಗಿದ್ದರೂ ವೀಕ್ಷಕರೊಟ್ಟಿಗೆ ಎಮೋಷನಲ್‌ ಆಗಿ ಕನೆಕ್ಟ್‌ ಆಗಬೇಕು. ಅವರ ಸಮಯ ಮತ್ತು ನನ್ನ ಸಮಯಕ್ಕೆ ಬೆಲೆ ಸಿಗಬೇಕು ಅಷ್ಟೇ ಎಂದು ಟೈಮ್ಸ್ ಸಂದರ್ಶನದಲ್ಲಿ ಮಾಲಾಶ್ರೀ ಮಾತನಾಡಿದ್ದಾರೆ. 

ಈ ವಿಚಾರಕ್ಕೆ ನನ್ನ ಪತ್ನಿ ಕುಗ್ಗಿದ್ದಾಳೆ ಎಂದು ನಾನು ಬರಬೇಕಿತ್ತು; ಹೊರ ಬರಲು ಕ್ಲಾರಿಫಿಕೇಷನ್‌ ಕೊಟ್ಟ ಗೋಲ್ಡ್‌ ಸುರೇಶ್

'ಓಟಿಟಿಯಲ್ಲಿ ನಾಯಕಿಯರಿಗೆ ಸಿಗುತ್ತಿರುವ ಪಾತ್ರದ ಬಗ್ಗೆ ನನಗೆ ತುಂಬಾ ಖುಷಿ ಇದೆ. ನನಗೆ ಸಮಯ ಸಿಕ್ಕಾಗ ಸೀರಿಸ್‌ ನೋಡುತ್ತೀನಿ, ನನ್ನ ನೆಚ್ಚಿನ ಸೀರಿಸ್‌ ಗೇಮ್ ಆಫ್ ಥ್ರೋನ್ಸ್‌. ತೀನ್‌ ಪಟ್ಟಿಯಲ್ಲಿ ಕಾಲೋಜ್ ಪಾತ್ರ, ಅಂದಾದುನ್‌ನಲ್ಲಿ ತಬು ಪಾತ್ರ ನನಗೆ ಸಖತ್ ಇಷ್ಟವಾಗುತ್ತದೆ. ಸೌತ್‌ ಕರ್ನಾಟಕದಲ್ಲಿ ರಮ್ಯಾ ಕೃಷ್ಣ, ಸಿಮ್ರನ್‌ ವಿಭಿನ್ನ ಪಾತ್ರಗಳಲ್ಲಿ ಸಖತ್ ಕೆಲಸ ಮಾಡುತ್ತಿದ್ದಾರೆ ಎಂದು ಮಾಲಾಶ್ರೀ ಹೇಳಿದ್ದಾರೆ. 

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್ ; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ

ಇದೀಗ ಮಾಲಾಶ್ರೀ ಮುದ್ದಿನ ಮಗಳ ಆರಾಧನಾ ರಾಮ್ 'ಕಾಟೇರ' ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಇನ್ನೂ ವಿದ್ಯಾಭ್ಯಾಸ ಮಾಡುತ್ತಿರುವ ಪುತ್ರನನ್ನು ಬಣ್ಣ ಪ್ರಪಂಚಕ್ಕೆ ಕರೆತರಲು ಮಾಲಾಶ್ರೀ ಎಲ್ಲ ರೀತಿ ತಯಾರಿಗಳನ್ನು ನೀಡುತ್ತಿದ್ದಾರೆ.

ನನಗೆ ಇಷ್ಟವಿಲ್ಲ ಅಂದ್ರೆ ಹಣದ ಬಗ್ಗೆ ಯೋಚನೆ ಮಾಡದೆ No ಅನ್ನುತ್ತೀನಿ: 'ರಿಷಬ್ ಶೆಟ್ಟಿ' ನಾಯಕಿ ತಪಸ್ವಿ ಪೂಣಚ್ಚ ಹೇಳಿಕೆ ವೈರಲ್