ನನಗೆ ಇಷ್ಟವಿಲ್ಲ ಅಂದ್ರೆ ಹಣದ ಬಗ್ಗೆ ಯೋಚನೆ ಮಾಡದೆ No ಅನ್ನುತ್ತೀನಿ: 'ರಿಷಬ್ ಶೆಟ್ಟಿ' ನಾಯಕಿ ತಪಸ್ವಿ ಪೂಣಚ್ಚ ಹೇಳಿಕೆ ವೈರಲ್
ಕನ್ನಡಿಗರಿಗೆ ಕಾಫಿ ಮಹತ್ವ ತಿಳಿಸಿಕೊಡಲು ವಿದೇಶಕ್ಕೆ ಹಾರಲಿದ್ದಾರೆ ತಪಸ್ವಿ ಪೂಣಚ್ಚ. ರಿಷಬ್ ಶೆಟ್ಟಿ ನಾಯಕಿ ಹೇಳಿಕೆ ವೈರಲ್......
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾದಲ್ಲಿ ನಟಿಸಿರುವ ತಪಸ್ವಿ ಪೂಣಚ್ಚ ಸದ್ಯ ಎರಡು ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡು ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರುಕ್ಮಿಣಿ ವಸಂತ್ ಮತ್ತು ಶ್ರೀ ಜೊತೆಗೆ ಒಂದು ಚಿತ್ರ ಹಾಗೂ ಗುರುನಂದನ್ ಜೊತೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ನನಗೆ ಬಂದಿರುವ ಪ್ರತಿಯೊಂದು ಪ್ರಾಜೆಕ್ಟ್‌ಗೆ ನಾನು ಸಹಿ ಹಾಕಿಲ್ಲ. ಆಲೋಚನೆಗಳಿಂದಲೇ ಪ್ರತಿಯೊಂದು ಪಾತ್ರಗಳನ್ನು ಬರೆದಿರುತ್ತಾರೆ, ಆದರೆ ನಾನು ಆ ಪಾತ್ರಕ್ಕೆ ಹೇಗೆ ಫಿಟ್ ಆಗುತ್ತೀನಿ ಎಂದು ನೋಡುತ್ತೀನಿ. ನನಗೆ ಕಥೆ ಅಥವಾ ಪಾತ್ರ ಇಷ್ಟವಾಗಿಲ್ಲ ಅಂದ್ರೆ ಒಂದು ನಿಮಿಷವೂ ಯೋಚನೆ ಮಾಡದೆ ಯಾವುದೇ ಮಾನಿಟರಿ ಅಂಗಲ್ ಯೋಜಿಸದೆ ಇಲ್ಲ ಎಂದು ಹೇಳುತ್ತೀನಿ. ನನ್ನ ಮನಸ್ಸಿಗೆ ತೃಪ್ತಿ ಕೊಡುವ ಪಾತ್ರಗಳನ್ನು ಮಾತ್ರ ಮಾಡಬೇಕು. ರಿಷಬ್ ಶೆಟ್ಟಿ ಸರ್ ಜೊತೆ ನನ್ನ ಮೊದಲ ಸಿನಿಮಾ ಜರ್ನಿ ಆರಂಭಿಸಿದ್ದು..ನನ್ನ ವೃತ್ತಿ ಜೀವನ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಹಾಗೂ ಜನರು ನನ್ನೊಟ್ಟಿಗೆ ಕನೆಕ್ಟ್ ಆಗಬೇಕು'ಎಂದು ಟೈಮ್ಸ್ ಆಫ್ ಇಂಡಿಯ್ ಸಂದರ್ಶನದಲ್ಲಿ ತಪಸ್ವಿ ಮಾತನಾಡಿದ್ದಾರೆ.
ಡ್ಯಾನ್ಸ್ ಮಾತ್ರವಲ್ಲ ನಟನೆಯಿಂದಲೂ ಗುರುತಿಸಬೇಕು; ಶ್ರೀಲೀಲಾ ಜೊತೆ ಹೋಲಿಸಿದ್ದಕ್ಕೆ ಗರಂ ಆದ ರೇಷ್ಮಾ ನಾನಯ್ಯ
'ಒಮ್ಮ ಸಿನಿಮಾ ಶೂಟಿಂಗ್ ಮುಗಿಸಿದ ಮೇಲೆ ಯೂರೋಪ್‌ಗೆ ತೆರಳುತ್ತಿದ್ದೀನಿ ಏಕೆಂದರೆ ಕಾಫಿಗಳ ಬಗ್ಗೆ ತಿಳಿದುಕೊಳ್ಳಲು. ಇಲ್ಲಿನ ಜನರಿಗೆ ಕಾಫಿ ಬಗ್ಗೆ ಮನವರಿಗೆ ಮಾಡಬೇಕು ಅದರಿಂದ ಆಗುವ ಪ್ರಯೋಜನಗಳನ್ನು ಜನರಿಗೆ ನಾನು ತಿಳಿಸಬೇಕು. ನನಗೆ ಸ್ಪೆಷಾಲಿಟಿ ಕಾಫಿ ಸರ್ಟಿಫಿಕೇಟ್ ಇದೆ...ಇದರ ಬಗ್ಗೆ ಇನ್ನು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಚಿತ್ರರಂಗದಲ್ಲಿ ಏರು ಇಳಿತಗಳು ಇರುವ ಕಾರಣ ನನಗೆ ನನ್ನದೇ ಆದಾಯ ಮಾಡುವ ಕೆಲಸ ಬೇಕಿದೆ. ಕೂರ್ಗ್‌ನಲ್ಲಿ ನನ್ನದೇ ಕಾಫಿ ಎಸ್ಟೇಟ್ ಇರುವ ಕಾರಣ ಇದರೆ ಬಗ್ಗೆ ಓದಿ ತಿಳಿದುಕೊಳ್ಳುವುದು ಜೀವನಕ್ಕೆ ಒಂದು ಅರ್ಥ ಕೊಡುತ್ತದೆ. ಎಂದಿನಂತೆ ನನ್ನ ಪೋಷಕರು ನನ್ನ ಪ್ರತಿಯೊಂದು ನಿರ್ಧಾರಕ್ಕೆ ಸಾಥ್ ಕೊಟ್ಟಿದ್ದಾರೆ'ಎಂದು ತಪಸ್ವಿ ಹೇಳಿದ್ದಾರೆ.
ಕಳೆದ ವರ್ಷ ಹಲವರನ್ನು ಕಳೆದುಕೊಂಡೆ ಅದಿಕ್ಕೆ 30ರಲ್ಲಿ ನನ್ನ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವೆ: ಹಿತಾ ಚಂದ್ರಶೇಖರ್