Asianet Suvarna News Asianet Suvarna News

ನಾನು ಸಣ್ಣಗಾಗುವುದಿಲ್ಲ, ಚಾನ್ಸ್‌ ಕೊಡಿ ಎಂದು ಭಿಕ್ಷೆ ಬೇಡಿಲ್ಲ; 'ನಲ್ಲ' ನಟಿ ಸಂಗೀತಾ ಬಿಚ್ಚಿಟ್ಟ ಸತ್ಯಗಳು

ಕಿಚ್ಚ ಸುದೀಪ್‌ಗೆ ಜೋಡಿಯಾಗಿ ನಲ್ಲ ಸಿನಿಮಾದಲ್ಲಿ ಅಭಿನಯಿಸಿದ ಸಂಗೀತಾ. ದಪ್ಪ-ಸಣ್ಣ, ಆಫರ್‌, ಪರ್ಸನಲ್‌ ಲೈಪ್‌ ಬಗ್ಗೆ ಸಂಗೀತಾ ಹಂಚಿಕೊಂಡ ವಿಚಾರಗಳು....
 

I never asked for chance in film says Nalla fame Sangeetha in prema the journalist interview vcs
Author
First Published Jan 22, 2023, 12:05 PM IST

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾರಂಗದಲ್ಲಿ ಮಿಂಚಿರುವ ನಟಿ ಸಂಗೀತಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ತುಂಬಾ ಕಡಿಮೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪದೇ ಪದೇ ಬಾಡಿ ಶೇಮಿಂಗ್‌ ಅನುಭವಿಸಿರುವ ನಟಿ, ಈಗಲೂ ನಾನು ಚಿತ್ರರಂಗಕ್ಕೆ ಸೂಕ್ತವಲ್ಲ ಎಂದಿದ್ದಾರೆ. 

ಬಾಡಿ ಶೇಮಿಂಗ್:

'ನಿಜ ಹೇಳಬೇಕು ಅಂದ್ರೆ ಈ ಕ್ಷಣವೂ ನಾನು ಸಿನಿಮಾ ರಂಗಕ್ಕೆ ಫಿಟ್ ಆಗುವುದಿಲ್ಲ. ಇಂಡಸ್ಟ್ರಿ ಮತ್ತು ನಾನು ತುಂಬಾ ದೂರ ಇದ್ದೀವಿ ಅನ್ನೋ ಫೀಲಿಂಗ್‌ನಲ್ಲಿ ಜೀವನ ನಡೆಸುತ್ತಿರುವೆ. ಏಕೆಂದರೆ ಮೊದಲಿನಿಂದಲೂ ನಾನು ಟಾಮ್‌ಬಾಯ್‌ ರೀತಿ ಸಿಕ್ಕಾಪಟ್ಟೆ ಬೋಲ್ಡ್‌ ಆಗಿರುವೆ ಓಪನ್ ಮೈಂಡ್‌ನಲ್ಲಿ ಥಿಂಕ್ ಮಾಡುವೆ. ಚಿತ್ರರಂಗದಲ್ಲಿ ಕೆಲವೊಂದು ನಾರ್ಮ್ಸ್‌ಗಳಿದೆ ನಾಯಕಿಯರು ಹೀಗೇ ಇರಬೇಕು ಅನ್ನೋ ಮೈಂಡ್‌ಸೆಟ್‌ಗಳಿದೆ, ಇರಲ್ಲಿ ನನಗೆ ನಂಬಿಕೆ ಇಲ್ಲ. ಇದ್ಯಾವುದು ನನಗೆ ಸೂಟ್ ಆಗುವುದಿಲ್ಲ. ಹುಟ್ಟಿದಾಗಿನಿಂದಲೂ ನಾನು ದಪ್ಪನೇ ಇದ್ದೆ ತುಂಬಾ ಮುದ್ದು ಮುದ್ದಾಗಿದ್ದೆ. ಯಾರೇ ನನ್ನನ್ನು ನೋಡಿದ್ದರು ಕ್ಯೂಟ್ ಆಗಿದ್ಯಾ ಲಡ್ಡು ರೀತಿ ಇರುವೆ ಎನ್ನುತ್ತಿದ್ದರು ಅಷ್ಟು ಸ್ವೀಟ್‌ ಗುಡ್‌ ಲುಕ್ಕಿಂಗ್ ಹುಡುಗಿ ಆಗಿದ್ದೆ. ಆ ಲುಕ್‌ಗಳ ಬಗ್ಗೆ ನನಗೆ ಬೇಸರವಿಲ್ಲ.' ಎಂದು ಪ್ರೇಮಾ ದಿ ಜರ್ನಲಿಸ್ಟ್‌ ಸಂದರ್ಶನದಲ್ಲಿ ಸಂಗೀತಾ ಮಾತನಾಡಿದ್ದಾರೆ.

ಆಗಲೇ ಡುಮ್ಮಿ ಎನ್ನುತ್ತಿದ್ದರು, ಈಗ ಮಾಡ್ತೀನಿ ಅಂದ್ರೆ ಅವಕಾಶನೇ ಕೊಡಲ್ಲ: ಶಿಲ್ಪಾ ಶಿರೋಡ್ಕರ್

ಸಿನಿಮಾ ಎಂಟ್ರಿ:

' ನಾನು ನಾಯಕಿ ಆಗಬೇಕು ಅನ್ನೋದು ನನ್ನ ತಾಯಿ ಕನಸಾಗಿತ್ತು. ಅವರಿಗೆ ಈ ಆಸೆ ಇತ್ತು ಹೀಗಾಗಿ ನಾನು ಸಿನಿಮಾ ರಂಗಕ್ಕೆ ಬಂದೆ. ನಾನು ಕ್ಲಾಸಿಕಲ್ ಡ್ಯಾನ್ಸರ್ ಭರತನಾಟ್ಯ ರಂಗಪ್ರವೇಶ ಆದ ಮೇಲೆ ನನ್ನ ತಾತನೇ ನಿರ್ಮಾಪಕರಾಗಿರುವ ಕಾರಣ ಚಿತ್ರರಂಗಕ್ಕೆ ಕಾಲಿಟ್ಟೆ. ಚಿಕ್ಕ ಹುಡುಗಿ ಇದ್ದಾಗಲೂ ಬಾಲನಟಿಯ ಪಾತ್ರಕ್ಕೆ ತುಂಬಾ ಆಫರ್‌ಗಳು ಬಂದಿತ್ತು. ತುಂಬಾ ಬೇಡ ಬೇಡ ಎಂದು ಹೇಳಿ ಹೇಳಿ ಒಂದು ಪಾಯಿಂಟ್ ಆದ್ಮೇಲೆ ಸಿನಿಮಾ ಒಪ್ಪಿಕೊಳ್ಳಲು ಶುರು ಮಾಡಿದೆ. ಮೊದಲ ಸಲ ನನ್ನನ್ನು ನಾನು ಸ್ಕ್ರೀನ್‌ನಲ್ಲಿ ನೋಡಿಕೊಂಡು ಅಮ್ಮಾ ತುಂಬಾ ಕೆಟ್ಟದಾಗಿ ಕಾಣಿಸುತ್ತಿರುವೆ ಸಿನಿಮಾ ಮಾಡುವುದಿಲ್ಲ ಎನ್ನುತ್ತಿದ್ದೆ. ತಲೆ ಕೆಡಿಸಿಕೊಳ್ಳಬೇಡ ಸರಿ ಹೋಗುತ್ತದೆ ಒಂದೊಂದು ಸಿನಿಮಾ ಒಂದೊಂದು ರೀತಿ ಇರುತ್ತದೆ ಎಂದು ಸಿನಿಮಾ ರಂಗದಲ್ಲಿ ಉಳಿದುಕೊಳ್ಳುವಂತೆ ಸಮಾಧಾನ ಮಾಡುತ್ತಿದ್ದರು.' ಎಂದು ಸಂಗೀತಾ ಹೇಳಿದ್ದಾರೆ.

ಅವಕಾಶಗಳ ಕೊರತೆ:

'ಒಂದು ವಿಚಾರದಲ್ಲಿ ತುಂಬಾ ಹೆಮ್ಮೆ ಇದೆ, ಏನೆಂದರೆ ಈವರೆಗೂ ನಾನು ಚಾನ್ಸ್‌ ಕೊಡಿ ಚಾನ್ಸ್‌ ಕೊಡಿ ಎಂದು ಯಾರ ಬಳಿಯೂ ಮನವಿ ಮಾಡಿಕೊಂಡಿಲ್ಲ. ನನ್ನ ಪರಿಸ್ಥಿತಿ ಹಾಗಿ ಬಂದಿದ್ದರೂ ಕೂಡ ನಾನು ಯಾರಿಗೂ ಚಾನ್ಸ್‌ ಕೊಡಿ ಎಂದು ಕೇಳಲಿಲ್ಲ. ನನ್ನ ಜೊತೆಗಿರುವ ಪ್ರತಿಯೊಬ್ಬರಿಗೂ ಗೊತ್ತಾ ನಾನು ಸ್ಟ್ರೇಟ್‌ ಫಾರ್ವರ್ಡ್‌ ಹುಡುಗಿ. ನೀವು ನನ್ನನ್ನು ಇಷ್ಟ ಪಡುತ್ತೀರಾ ಇಲ್ಲ ಅಂದ್ರೆ ದ್ವೇಷ ಮಾಡ್ತೀರ. ತುಂಬಾ ಕ್ಲೋಸ್ ಆಗಿರುತ್ತಾರೆ ಬೆಸ್ಟ್‌ ಫ್ರೆಂಡ್ ಆಗಿರುತ್ತೀವಿ ಇಲ್ಲ ಅಂದ್ರೆ ಅಯ್ಯೋ ಆ ಹುಡುಗಿನಾ? ಬೇಡಪ್ಪಾ ಎನ್ನುತ್ತಾರೆ. ಸ್ಟ್ರಾಂಗ್ ಪರ್ಸನಾಲಿಟಿ ವ್ಯಕ್ತಿ ಆಗಿರುವ ಕಾರಣ ಇಂಡಸ್ಟ್ರಿಗೆ ಬರುವಾಗ ನನ್ನ ತಲೆಯಲ್ಲಿ ಕೆಲವೊಂದು ವಿಚಾರಗಳನ್ನು ಇಟ್ಟುಕೊಂಡು ಬಂದಿದ್ದೆ. ಈ ರೀತಿ ಇದ್ದೀನಿ ಈ ರೀತಿ ಪಾತ್ರ ಮಾಡ್ತೀನಿ.1997ರಲ್ಲಿ ಜರ್ನಿ ಆರಂಭಿಸಿದ್ದು ಈ 25 ವರ್ಷದಲ್ಲಿ ನಾನು ಒಂದು ಚೂರು ಬದಲಾಗಿಲ್ಲ' ಎಂದಿದ್ದಾರೆ ಸಂಗೀತಾ.

Double XLನಲ್ಲಿ ಸೋನಾಕ್ಷಿ ಸಿನ್ಹಾ; 'ದಪ್ಪಗಿದ್ದರೆ ದಪ್ಪ ಅಂತಾರೆ ತೆಳ್ಳಗಿದ್ದರೆ ಕಡ್ಡಿ ಅಂತಾರೆ'

ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲ್ಲೂ ಪ್ರತಿಯೊಬ್ಬರು ನಾನು ಸಣ್ಣಗಾಗಬೇಕು ಎನ್ನುತ್ತಿದ್ದರು. ಲೈಫ್‌ ಲಾಂಗ್‌ ಕೇಳಿಸಿಕೊಳ್ಳುತ್ತಿರುವ ಆದರೆ ಆಗಿಲ್ಲ. ಯಾರಾದರೂ ಕೇಳಿದ್ದರೆ ಎರಡು ತಿಂಗಳು ಕಾದು ನೋಡು ಸಣ್ಣಗಾಗುವೆ ಎನ್ನುತ್ತಿದ್ದೆ. ನನ್ನ ಅಣ್ಣ ತುಂಬಾನೇ ಫಿಟ್ ಆಗಿದ್ದಾರೆ. ಈಗಲೂ ಕಾಲೇಜ್‌ ಹುಡುಗ ರೀತಿ ಕಾಣಿಸುತ್ತಾರೆ. ನನಗೆ ತುಂಬಾ ಕೋಪ ಬರುವುದು ಏಕೆಂದರೆ ನಾನು ಆತನಿಂದ ಆಹಾರ ಕಿತ್ತುಕೊಂಡು ತಿನ್ನುತ್ತೀನಿ ಎಂದುಕೊಂಡಿದ್ದಾರೆ ಕುಟುಂಬಸ್ಥರು. ಜನರಿಗೋಸ್ಕರ ನಾನು ಸಣ್ಣಗಾಗುವುದಿಲ್ಲ ನನ್ನ ಆರೋಗ್ಯಕ್ಕೆ ನನ್ನ ಪತಿಗೆ ನಾನು ಕರೆಕ್ಟ್‌ ಆಗಿರುವೆ. ಪ್ರಪಂದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

Follow Us:
Download App:
  • android
  • ios