ಬಾಡಿ ಶೇಮಿಂಗ್‌ ಬಗ್ಗೆ ತುಂಬಾ ಸ್ಟ್ರಾಂಗ್ ಆಗಿ ಧ್ವನಿ ಎತ್ತಿದ ನಟಿ ಸೋನಾಕ್ಷಿ, ಡಬಲ್ ಎಕ್ಸ್‌ಎಲ್‌ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. 

ಬಾಲಿವುಡ್ (Bollywood) ಸುಂದರಿ ಸೋನಾಕ್ಷಿ ಸಿನ್ಹಾ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಸಿನಿಮಾಗಳು ತುಂಬಾನೇ ವಿಭಿನ್ನವಾಗಿರುತ್ತದೆ. ಒಳ್ಳೆಯ ಸಂದೇಶ ಸಾರುವುದಲ್ಲದೆ ಮನೋರಂಜನೆ ನೀಡುವುದರಲ್ಲಿ ನಂಬರ್ 1 ಆಗಿರುತ್ತಾರೆ. ಸೋನಾಕ್ಷಿ (Sonakshi Sinha) ಚಿತ್ರಕತೆ ಮತ್ತು ಪಾತ್ರಕ್ಕೆ ತಕ್ಕಂತೆ ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡಿಕೊಳ್ಳುತ್ತಾರೆ. ಸಣ್ಣಗಾಗಬೇಕು ಎಂದರೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡುತ್ತಾರೆ ದಪ್ಪ ಕಾಣಿಸಬೇಕು ಅಂದ್ರೆ ಅದಕ್ಕೊಂದು ರೀತಿ ವರ್ಕೌಟ್ ಮಾಡುತ್ತಾರೆ. ಮಹಿಳೆಯ ಮೇಲೆ ಇರುವ ಈ ಮೆಂಟಲ್ ಪ್ರೆಷರ್‌ನ ಜನರಿಗೆ ತೋರಿಸಬೇಕು ಎಂದು 'ಡಬಲ್ ಎಕ್ಸ್‌ಎಲ್‌' (Double XL) ಶೀರ್ಷಿಕೆಯಲ್ಲಿ ಸಿನಿಮಾ ಮಾಡುತ್ತಾರೆ.

ಹೌದು! ದೇಹದ ತೂಕ, ಗಾತ್ರದ ಮಾನದಂಡೆಗಳಿಗೆ ಸಿಗದ ಸೌಂದರ್ಯ ಮಹಿಳೆಯರಲ್ಲಿದೆ ಎಂದು ಡಬಲ್ ಎಕ್ಸೆಎಲ್‌ ಸಿನಿಮಾದಲ್ಲಿ ತೋರಿಸಲು ನಟಿ ಸೋನಾಕ್ಷ್ಮಿ ಸಿನ್ಹಾ ಮತ್ತು ಹುಮಾ ಖುರೇಶಿ ಮುಂದಾಗಿದ್ದಾರೆ. ಇವರಿಬ್ಬರು ಚಿತ್ರದಲ್ಲಿ ಪ್ಲಸ್‌ ಸೈಜ್‌ ಮಹಿಳೆಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗೆ ಸಿನಿಮಾದ ಬಗ್ಗೆ ಮಾತನಾಡುವಾಗ ಸೋನಾಕ್ಷ್ಮಿ ಬಾಡಿ ಶೇಮಿಂಗ್ (Body Shamming) ಬಗ್ಗೆ ಮಾತನಾಡಿದ್ದಾರೆ. ಈ ವಿಚಾರವಾಗಿ ಸೋನಾಕ್ಷಿ ಮಾತನಾಡುತ್ತಿರುವುದು ಮೊದಲಲ್ಲ ಆದರೆ ಪ್ರತಿ ಸಲ ಮನ ಮುಟ್ಟುವಂತ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

'ಈ ಸಿನಿಮಾ ಕಥೆಯನ್ನು ನಾವಿಬ್ಬರು ಕೇಳಿದಾಗ ತುಂಬಾನೇ ಶಾಕ್ ಆದೆವು. ಹುಮಾ ಹೊರತು ಪಡಿಸಿ ಯಾರೇ ಬಂದಿದ್ದರೂ ನಾನು ಈ ಸಿನಿಮಾ ಮಾಡುತ್ತಿರಲಿಲ್ಲ. ನಮ್ಮಿಬ್ಬರಿಗೂ ಈ ಸಿನಿಮಾ ಕಥೆ ನಿಜ ಜೀವನಕ್ಕೆ ತುಂಬಾನೇ ಮುಖ್ಯ. ಜೀವದಲ್ಲಿ ಅದೆಷ್ಟೋ ವರ್ಷಗಳ ಕಾಲ ನಾವು ಬಾಡಿ ಶೇಮಿಂಗ್ ಎದುರಿಸಿದ್ದೀವಿ. ನಾವಿಬ್ಬರೂ ಬಣ್ಣದ ಜರ್ನಿ ಆರಂಭಿಸುವ ಮೊದಲೇ ಇದನ್ನು ಎದುರಿಸಿದೆವು, ಈಗಲ್ಲೂ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ನಮಗೆ ಗೊತ್ತಿದೆ. ನೀವು ಯಾವ ಸೈಜ್‌ ಇದ್ದರೂ ಜನರು ಅದರ ಬಗ್ಗೆ ಮಾತನಾಡುತ್ತಾರೆ. ಲಿಂಗ ಭೇದಭಾವ ಮಾಡಬೇಡಿ ಎಂದು ನಾವು ಧ್ವನಿ ಎತ್ತಿದ್ದೀವಿ ಆದರೆ ಈ ವಿಚಾರದ ಬಗ್ಗೆ ಅಸಾಧ್ಯ. ತಾರತಮ್ಯ ವಿಚಾರದಲ್ಲಿ ಮೊದಲು ನಮ್ಮ ದೇಹ ತೂಕ ಇರಬೇಕು. ಇಬ್ಬರು ಪ್ರತಿಭಾನ್ವಿತ ಮಹಿಳೆಯರ ಕಥೆಯನ್ನು ನಾವು ಈ ಚಿತ್ರದಲ್ಲಿ ಹೇಳಲು ಮುಂದಾಗಿರುವೆವು. ನನಗೆ ಕಾಡುವುದು ಒಂದೇ ಪ್ರಶ್ನೆ..ಯಾಕೆ ರಿಯಲ್ ಲೈಫ್‌ನಲ್ಲಿ ಈ ಸತ್ಯವನ್ನು ಜನರು ಒಪ್ಪಿಕೊಳ್ಳುವುದಿಲ್ಲ' ಎಂದು ಸೋನಾಕ್ಷಿ ಮಾತನಾಡಿದ್ದಾರೆ.

ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ: Avika Gor

ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಲಾಕ್‌ಡೌನ್‌ ಸಮಯದಲ್ಲಿ ಒಟ್ಟಿಗೆ ಸೇರಿಕೊಂಡು ನಾನ್ ಸ್ಟಾಪ್ ತಿನ್ನುವಾಗ ಮುದಸ್ಸರ್ ಅಜೀಜ್ ಎಂಟ್ರಿ ಕೊಟ್ಟಿದ್ದಾರೆ. ಆ ಸಮಯದಲ್ಲಿ ಮುದಸ್ಸರ್ ಅಜೀಜ್ ರಿಯಲ್ ಘಟನೆಗಳಿಂದ ಸಿನಿಮಾ ಮಾಡಬೇಕು, ಟ್ರೋಲ್‌ಗಳಿಂದ ಅವರಿಗೆ ಆಗಿರುವ ಮೆಂಟಲ್‌ ಪ್ರೆಷರ್‌, ಜನರಿಗೆ ಎಷ್ಟು ತೊಂದರೆ ಆಗುತ್ತದೆ ಎಂದು ಪ್ಲ್ಯಾನ್ ಮಾಡಿದ್ದಾರೆ. ನಿರ್ದೇಶಕರ ಮಾತುಗಳನ್ನು ನೆನಪಿಸಿಕೊಂಡ ಸೋನಾಕ್ಷಿ 'ಹುಮಾ ಮತ್ತು ನಾನು ತುಂಬಾನೇ ಕ್ಲೋಸ್‌ ನಾವಿಬ್ಬರೂ ಒಟ್ಟಿಗೆ ಕೂತುಕೊಂಡು ಎಂಜಾಯ್ ಮಾಡುತ್ತಿದ್ದೆವು. ನಮ್ಮಿಬ್ಬರನ್ನು ಮುದಸ್ಸರ್ ಅಜೀಜ್ ನೋಡಿದ ಕ್ಷಣ ಸಿನಿಮಾ ಮಾಡುತ್ತೀರಾ ಎಂದು ಕೇಳಿದ್ದರು. ಈ ಸಿನಿಮಾ ಪ್ಲ್ಯಾನ್ ಶುರು ಮಾಡಿದಾಗ ಹುಮಾ ಮತ್ತು ನಾನು ಸಣ್ಣಗಿದ್ದೆವು. ಕಥೆ ಕೇಳುವ ಸಮಯದಿಂದ ಚಿತ್ರೀಕರಣ ಮಾಡುವ ಸಮಯದವರೆಗೂ ನಾನು ತುಂಬಾನೇ ಎಂಜಾಯ್ ಮಾಡಿದ್ದೀವಿ' ಎಂದು ಸೋನಾಕ್ಷಿ ಹೇಳಿದ್ದಾರೆ. 

Samyuktha Hegde on Body Shaming: ಸಣ್ಣಗಿರುವುದು ನನ್ನ ಅದೃಷ್ಟ, 40 ರಿಂದ 50 ಕೆಜಿ ಆಗಿರುವೆ!

'ಕಥೆ ಕೇಳುವ ಸಮಯದಲ್ಲಿ ನಾವು ತೂಕ ಹೆಚ್ಚಿಸಿಕೊಂಡ, ಕಾರಣ ನಮ್ಮ ಪಾತ್ರ ಡಿಮ್ಯಾಂಡ್ ಮಾಡಿತ್ತು. ಬೇಕಾಬಿಟ್ಟಿಯಾಗಿ ಏನೂ ಮಾಡಿಲ್ಲ. ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವುದಲ್ಲದೆ ನಮ್ಮತನವನ್ನು ಮರೆಯಬಾರದು. ಸಿನಿಮಾ ಮುಗಿದ ನಂತರ ನಮ್ಮ ರೆಗ್ಯೂಲರ್ ದಿನಚರಿ ಶುರು ಮಾಡಬೇಕು. ನಾವು ವರ್ಕೌಟ್ ಮಾಡುತ್ತೀವಿ ಫಿಟ್ ಆಗಿದ್ದು ಆರೋಗ್ಯವಾದ ಆಹಾರಗಳನ್ನು ಪ್ರಚಾರ ಮಾಡುತ್ತೀವಿ. ಎಲ್ಲಾ ಪಾತ್ರಗಳು ಡಬಲ್‌ ಎಕ್ಸೆಎಲ್‌ನಲ್ಲಿ ನಮ್ಮ ರೀತಿ ಇರಬೇಕು ಅಂತೇನು ಇಲ್ಲ. ನಮ್ಮ ಮನಸ್ಸಿಗೆ ಮೊದಲು ಟ್ರೈನ್ ಮಾಡಬೇಕಿತ್ತು, ಈಗ ನಮ್ಮ ತೂಕ ಹೆಚ್ಚಾಗಿರುವುದು ಕೇವಲ ಸಿನಿಮಾ ಮಾಡುವುದಕ್ಕೆ ಎಂದು. ನಮ್ಮ ಜರ್ನಿ ಅರಂಭದಲ್ಲಿ ನಾವು ದಪ್ಪ ಇದ್ದಾಗ ನಮ್ಮನ್ನು ನಾವು ಸರಿಯಾಗಿ ನೋಡಿಕೊಂಡಿಲ್ಲ' ಎಂದಿದ್ದಾರೆ ಸೋನಾಕ್ಷಿ.

'ಈ ಸಲ ನಾವು ತುಂಬಾನೇ ಎಂಜಾಯ್ ಮಾಡಿಕೊಂಡು ದಪ್ಪ ಆಗಿರುವುದು ಹಾಗೆ ಎಂಜಾಯ್ ಮಾಡಿಕೊಂಡು ಸಣ್ಣ ಆಗುತ್ತೀವಿ. ಸಣ್ಣ ಆಗುವುದಕ್ಕಿಂತ ಮುಖ್ಯವಾಗಿ ನಾವು ಫಿಟ್ ಆಗಿರಬೇಕು' ಎಂದು ಸೋನಾಕ್ಷಿ ಚಿತ್ರದ ಬಗ್ಗೆ ಸಿನಿ ರಸಿಕರಿಗೆ ಸಣ್ಣ ಐಡಿಯಾ ಕೊಟ್ಟಿದ್ದಾರೆ.