Asianet Suvarna News Asianet Suvarna News

ನನ್ನ ಸಿನಿಮಾ ಗುರಿ ತಲುಪಿದ್ದೇನೆ ಎಂದು ಯಾವತ್ತೂ ಅನಿಸಿಲ್ಲ, ನಾನಿನ್ನೂ ಇಲ್ಲೇ ಇದ್ದೀನಿ: ಪ್ರಣಯರಾಜ ಶ್ರೀನಾಥ್‌

‘ನಾನು ಸಿನಿಮಾರಂಗಕ್ಕೆ ಬಂದು 57 ವರ್ಷ ಆಯ್ತು. ಗುರಿ ತಲುಪಿದ್ದೇನೆ ಎಂದು ಯಾವತ್ತೂ ಅನಿಸಿಲ್ಲ. ನಾನಿನ್ನೂ ಇಲ್ಲೇ ಇದ್ದೀನಿ, ಗುರಿ ಬಹಳ ಮುಂದೆ ಇದೆ, ಅದನ್ನು ತಲುಪಲು ದೂರದ ಹಾದಿ ಕ್ರಮಿಸಬೇಕಿದೆ ಎಂದೇ ಅನಿಸುತ್ತದೆ. ’ಪ್ರಣಯ ರಾಜ ಶ್ರೀನಾಥ್‌ ‘ವಿಕಾಸಪರ್ವ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಆಡಿದ ಮಾತುಗಳಿವು. 
 

I have never felt that I have reached my film goal I am still here Sats Pranayaraja Srinath gvd
Author
First Published Aug 12, 2024, 7:22 PM IST | Last Updated Aug 12, 2024, 7:22 PM IST

‘ನಾನು ಸಿನಿಮಾರಂಗಕ್ಕೆ ಬಂದು 57 ವರ್ಷ ಆಯ್ತು. ಗುರಿ ತಲುಪಿದ್ದೇನೆ ಎಂದು ಯಾವತ್ತೂ ಅನಿಸಿಲ್ಲ. ನಾನಿನ್ನೂ ಇಲ್ಲೇ ಇದ್ದೀನಿ, ಗುರಿ ಬಹಳ ಮುಂದೆ ಇದೆ, ಅದನ್ನು ತಲುಪಲು ದೂರದ ಹಾದಿ ಕ್ರಮಿಸಬೇಕಿದೆ ಎಂದೇ ಅನಿಸುತ್ತದೆ. ’ಪ್ರಣಯ ರಾಜ ಶ್ರೀನಾಥ್‌ ‘ವಿಕಾಸಪರ್ವ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಆಡಿದ ಮಾತುಗಳಿವು. ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕಿರಿಯರ ಕಾಲೆಳೆಯುತ್ತಲೇ, ಬೆನ್ನು ತಟ್ಟಿ ಶುಭ ಹಾರೈಸಿದರು.

ಸಿನಿಮಾ ಬಗ್ಗೆ ಮಾತನಾಡಿದ ನಾಯಕ ರೋಹಿತ್‌ ನಾಗೇಶ್‌, ‘ಸದ್ಯ ಚಿತ್ರ ರಿಲೀಸ್‌ಗೆ ರೆಡಿ ಇದೆ. ದುಡ್ಡು ಮಾಡಬೇಕು ಅಂತ ಈ ಸಿನಿಮಾ ಮಾಡಿದ್ದಲ್ಲ. ಈ ಸಿನಿಮಾ ನಮ್ಮನ್ನು ಸ್ಟಾರ್‌ ಲೆವೆಲ್‌ಗೆ ಏರಿಸಲ್ಲ ಅನ್ನೋದು ತಿಳಿದಿದೆ. ಈ ವಯಸ್ಸಲ್ಲಿ ಹೀರೋ ಆಗಬೇಕು ಅನ್ನೋ ಕನಸೂ ಇರಲಿಲ್ಲ. ಆದರೆ ಕಥೆಗೆ ಪೂರಕವಾದ ಪಾತ್ರವಾದ ಕಾರಣ ನಟಿಸಲು ಮುಂದಾದೆ. ಈ ಸಿನಿಮಾ ಖಂಡಿತಾ ಬೇಜಾರು ತರಿಸಲ್ಲ. ಮನಸ್ಸಿಗೆ ಹೌದೆನಿಸೋ ವಿಚಾರವನ್ನು ತಿಳಿಸುವ ಜೊತೆಗೆ ಮನರಂಜನೆಯನ್ನೂ ನೀಡುತ್ತದೆ’ ಎಂದರು.

ಶರ್ಮಿಳಾ ಮಾಂಡ್ರೆ ಕೈಯಲ್ಲಿ ಸಿಕ್ಕಾಪಟ್ಟೆ ಒದೆ ತಿಂದಿದ್ದೇವೆ: ನಟ ದಿಗಂತ್‌

ನಿರ್ದೇಶಕ ಅನ್ಬರಸನ್‌ ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸಿದರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ಮಿಸಿರುವ ವಿಶ್ರುತ್‌ ನಾಯಕ್‌ ಸಿನಿಮಾ ಬಗ್ಗೆ ಮಾತನಾಡಿದರು. ಲಹರಿ ವೇಲು, ಗೀತರಚನಕಾರ ವಿ ನಾಗೇಂದ್ರ ಪ್ರಸಾದ್‌, ನಾಯಕಿ ಸ್ವಾತಿ, ನಟ ಅಶ್ವಿನ್‌ ಹಾಸನ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Latest Videos
Follow Us:
Download App:
  • android
  • ios