ಶರ್ಮಿಳಾ ಮಾಂಡ್ರೆ ಕೈಯಲ್ಲಿ ಸಿಕ್ಕಾಪಟ್ಟೆ ಒದೆ ತಿಂದಿದ್ದೇವೆ: ನಟ ದಿಗಂತ್
‘ಗುಳ್ಟು ಚಿತ್ರಕ್ಕೆ ಅಭಿಮಾನಿ ನಾನು. ಹಾಗಾಗಿ ಆ ಸಿನಿಮಾ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತೋಷ ಆಗಿದೆ. ಒಳ್ಳೆಯ ಕಲಾವಿದರು ಇರುವ ಒಳ್ಳೆಯ ಸಿನಿಮಾ ಇದು. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆಗೆ ಆ್ಯಕ್ಷನ್ ಸೀನ್‌ಗಳಿವೆ. ಅವರ ಕೈಯಲ್ಲಿ ಸಿಕ್ಕಾಪಟ್ಟೆ ಒದೆ ತಿಂದಿದ್ದೇವೆ’ ಎಂದು ದಿಗಂತ್ ಹೇಳಿದರು.
‘ಗುಳ್ಟು ಚಿತ್ರಕ್ಕೆ ಅಭಿಮಾನಿ ನಾನು. ಹಾಗಾಗಿ ಆ ಸಿನಿಮಾ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತೋಷ ಆಗಿದೆ. ಒಳ್ಳೆಯ ಕಲಾವಿದರು ಇರುವ ಒಳ್ಳೆಯ ಸಿನಿಮಾ ಇದು. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆಗೆ ಆ್ಯಕ್ಷನ್ ಸೀನ್‌ಗಳಿವೆ. ಅವರ ಕೈಯಲ್ಲಿ ಸಿಕ್ಕಾಪಟ್ಟೆ ಒದೆ ತಿಂದಿದ್ದೇವೆ’ ಎಂದು ದಿಗಂತ್ ಹೇಳಿದರು. ‘ಪೌಡರ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಭಾಗವಾಗಿದ್ದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಶರ್ಮಿಳಾ ಮಾಂಡ್ರೆ, ರವಿಶಂಕರ್ ಗೌಡ, ಧನ್ಯಾ ರಾಮ್, ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ರಾಜ್ ಎಲ್ಲರೂ ಇದ್ದರು.
ಪ್ರತಿಯೊಬ್ಬರೂ ಥಿಯೇಟರಿಗೆ ಬಂದು ಸಿನಿಮಾ ನೋಡಿ ಎಂದು ವಿನಂತಿಸಿಕೊಂಡರು. ನಿರ್ದೇಶಕ ಜನಾರ್ದನ್ ಚಿಕ್ಕಣ್ಣ, ‘ಕಾಮಿಡಿ ಸಿನಿಮಾ ಮಾಡಿದ್ದೇವೆ. ದೀಪಕ್ ವೆಂಕಟೇಶನ್ ಬರೆದ ಸ್ಕ್ರಿಪ್ಟ್ ಅನ್ನು ನಾನು ಮತ್ತು ತ್ರಿಲೋಕ್ ತ್ರಿವಿಕ್ರಮ ಸೇರಿಕೊಂಡು ಕನ್ನಡಕ್ಕೆ ಸ್ವಂತ ಮಾಡಿಕೊಂಡಿದ್ದೇವೆ. ಬೇರೆ ಜಾನರ್‌ನ ಸಿನಿಮಾ ಮಾಡಿದ್ದು ಖುಷಿ ಕೊಟ್ಟಿದೆ’ ಎಂದರು. ಜಗ್ಗೇಶ್ ಪೌಡರ್ ಸಿನಿಮಾದ ನಿರೂಪಣೆ ಮಾಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಪ್ರಾಪ್ತವಾಗಿದ್ದು, ಯೂಟ್ಯೂಬ್‌ನಲ್ಲಿ ಲಭ್ಯವಿರುವ ಟ್ರೇಲರನ್ನು ಆಸಕ್ತರು ನೋಡಬಹುದು.
ಇಬ್ಬರು ಯುವಕರು ಒಂದು ನಿಗೂಢವಾದ 'ಪೌಡರ್' ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ 'ಪೌಡರ್'. 'ಪೌಡರ್' ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.
ಕೆಜಿಎಫ್ ನಟಿ ಈಗ ಮೂಗುತಿ ಸುಂದ್ರಿ, ಸೀರೆಯಲ್ಲಿ ಈ ನಾರಿ ಹೇಗೆ ಕಾಣ್ತಾರೆ ನೋಡ್ರೀ..!
ಕೆ.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಸಹಯೋಗವಾದ 'ಪೌಡರ್' ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರ್ನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. ಈ ಚಿತ್ರವು ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ. ದಿಗಂತ್ ಮೋಚಾಲೆ ಮುಖ್ಯ ಭೂಮಿಕೆಯ ಪೌಡರ್ ಚಿತ್ರವು ಈಗಾಗಲೇ ಸಾಕಷ್ಟು ಕ್ರೇಜ್ ಸೃಷ್ಟಿಸಿದ್ದು, ಸೋಲಿನ ಸರಪಳಿಯಲ್ಲಿ ಬಂಧಿಯಾಗಿರುವ ಕನ್ನಡ ಚಿತ್ರರಂಗಕ್ಕೆ ಗೆಲುವಿನ ಟಾನಿಕ್ ನೀಡಬಹುದು ಎಂದು ಆಶಿಸಲಾಗುತ್ತಿದೆ.