Asianet Suvarna News Asianet Suvarna News

ಸುದೀಪ್‌ ಜೊತೆ ಜನ್ಮಾಂತರದ ಸಂಬಂಧ ಇದೆ: ರವಿಚಂದ್ರನ್‌

ಅದ್ಧೂರಿಯಾಗಿ ನಡೆಯಿತ್ತು ರವಿ ಬೋಪಣ್ಣ ಸಿನಿಮಾ ಕಾರ್ಯಕ್ರಮ. ಆಗಮಿಸಿದ ಪ್ರತಿಯೊಬ್ಬರಿಗೂ ಭಗವದ್ಗೀತೆ ಕೊಟ್ಟ ಕ್ರೇಜಿ ಸ್ಟಾರ್.......

I have a special bond with kiccha sudeep says Ravi chandran
Author
Bengaluru, First Published Aug 10, 2022, 9:51 AM IST

‘ರವಿ ಬೋಪಣ್ಣ ಚಿತ್ರದಲ್ಲಿ ಗ್ಲಾಮರ್‌ ಇದೆ. ಅಚ್ಚರಿ, ಆ್ಯಕ್ಷನ್‌, ಸ್ಕಾ್ಯಮ್‌ ಎಲ್ಲವೂ ಇದೆ. ಇದೊಂದು ಮಜಾ ಕೊಡುವ ಸಿನಿಮಾ. ಈ ಚಿತ್ರಕ್ಕೊಂದು ಗಟ್ಟಿಯಾದ ದನಿ ಬೇಕಿತ್ತು. ಕರೆಂಟ್‌ ಬೇಕಿತ್ತು. ಅದನ್ನು ಸುದೀಪ್‌ ಅಲ್ಲದೆ ಬೇರೆ ಯಾರೂ ಕೊಡೋಕೆ ಆಗುತ್ತಿರಲಿಲ್ಲ. ಒಂದು ದಿನ ಫೋನ್‌ ಮಾಡಿದೆ. ಅವನು ಬೇರೇನೂ ಕೇಳಲಿಲ್ಲ, ಎಲ್ಲಿ ಬರಬೇಕು, ಯಾವಾಗ ಬರಬೇಕು ಎಂದಷ್ಟೇ ಹೇಳಿದ. ನನಗೂ ಸುದೀಪ್‌ಗೂ ಜನ್ಮ ಜನ್ಮದ ಸಂಬಂಧ ಇದೆ ಅನ್ನಿಸುತ್ತದೆ’.

- ಹೀಗೆ ಹೇಳಿದ್ದು ರವಿಚಂದ್ರನ್‌. ಸಂದರ್ಭ- ರವಿ ಬೋಪಣ್ಣ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ರವಿಚಂದ್ರನ್‌ ಸ್ವಲ್ಪ ಭಾವುಕರಾಗಿದ್ದರು. ‘ಈಶ್ವರಿ ಸಂಸ್ಥೆಗೆ 50 ವರ್ಷ ದಾಟಿತು. ಯಾಕೋ ಈಗ ಅಪ್ಪ ತುಂಬಾ ನೆನಪಾಗುತ್ತಿದ್ದಾರೆ. ಇಷ್ಟುವರ್ಷಗಳಲ್ಲಿ ನನ್ನ ಜೇಬು ತುಂಬಿದೆಯೋ ಗೊತ್ತಿಲ್ಲ, ಹೃದಯ ಮಾತ್ರ ಯಾವತ್ತೂ ಪ್ರೀತಿಯಿಂದ ತುಂಬಿದೆ’ ಎಂದು ಅವರು ಹೇಳಿದರು.

ಪ್ಯಾನ್‌ ಇಂಡಿಯಾ ಕಾನ್ಸೆಪ್‌್ಟಬರುವ ಮೊದಲೇ ಇಡೀ ದೇಶದ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರವಿ ಸರ್‌. ಈಶ್ವರಿ ಸಂಸ್ಥೆಗೆ ಇಷ್ಟುವರ್ಷ ನಮಗೆ ಎಂಟರ್‌ಟೇನ್‌ ಮಾಡಿದೆ. ಆ ಸಂಸ್ಥೆ ಮುಂದೆ ಬೆಳೆಯುವಂತೆ ನೋಡಬೇಕಾದದ್ದು ನಮ್ಮ ಜವಾಬ್ದಾರಿ ಕೂಡ. ಹಾಗಾಗಿ ರವಿ ಬೋಪಣ್ಣ ಸಿನಿಮಾಗೆ ಒಳ್ಳೆಯದಾಗಲೇಬೇಕು.

- ಕಿಚ್ಚ ಸುದೀಪ್‌

ಆ.12ರಂದು ಈಶ್ವರಿ ಸಂಸ್ಥೆ ನಿರ್ಮಾಣದ ರವಿ ಬೋಪಣ್ಣ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ವಿಚಾರ ತಿಳಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ ಜಗ್ಗೇಶ್‌, ‘ಯಾರು ಒಳಗೆ ಹೊರಗೆ ಸರಿಯಾಗಿ ಇರುತ್ತನೋ ಅವನು ರವಿಚಂದ್ರನ್‌ ಆಗಿರುತ್ತಾನೆ. ಅವರದು ನಿಷ್ಕಲ್ಮಶ, ಪರಿಪಕ್ವ ವ್ಯಕ್ತಿತ್ವ. ನಮಗೆ ಕೆಲಸ ಕೊಟ್ಟ, ಅನ್ನ ಕೊಟ್ಟಮನುಷ್ಯ ರವಿಚಂದ್ರನ್‌ ಸಿನಿಮಾ ಗೆಲ್ಲಬೇಕು’ ಎಂದರು.

‘ರವಿ ಬೋಪಣ್ಣ’ ಪ್ರೀ ರಿಲೀಸ್​​: ಸುದೀಪ್ ವಾಯ್ಸ್‌ನಲ್ಲಿ ಕರೆಂಟ್‌ ಇದೆ ಅಂದ್ರು ಕ್ರೇಜಿ ಸ್ಟಾರ್

ಶರಣ್‌, ‘ಸಿನೆಮಾ ಪ್ರೀತಿಸುವುದನ್ನು, ಗೌರವಿಸುವುದನ್ನು ಕಲಿಯಬೇಕು ಅನ್ನೋದಾದರೆ ರವಿಚಂದ್ರನ್‌ ಅವರನ್ನು ನೋಡಿ ಕಲಿಯಬೇಕು’ ಎಂದರು. ಡಾಲಿ ಧನಂಜಯ್‌, ‘ರವಿ ಸರ್‌ ಬದುಕೇ ಒಂದು ಹೋರಾಟ. ಸೋತಾಗ ಮತ್ತೆ ಕೆಲಸ ಮಾಡಬೇಕು ಎಂಬ ಸ್ಫೂರ್ತಿ ತುಂಬುವ ವ್ಯಕ್ತಿ ಅವರು. ರವಿ ಬೋಪಣ್ಣ ಸಿನಿಮಾ ಥಿಯೇಟರಲ್ಲೇ ನೋಡುತ್ತೇನೆ’ ಎಂದರು.

ನಟಿ ಕಾವ್ಯ ಶೆಟ್ಟಿ, ಛಾಯಾಗ್ರಾಹಕ ಸೀತಾರಾಮ್‌, ಸಂಗೀತಕಾರರಾದ ಗೌತಮ್‌-ಗೌರವ್‌, ಸಂಭಾಷಣಾಕಾರ ಮೋಹನ್‌, ರವಿಚಂದ್ರನ್‌ ಸ್ನೇಹಿತರಾದ ರಮೇಶ್‌, ವೆಂಕಟೇಶ್‌, ಸಜ್ಜನ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಇದ್ದರು.

Follow Us:
Download App:
  • android
  • ios