Asianet Suvarna News Asianet Suvarna News

‘ರವಿ ಬೋಪಣ್ಣ’ ಪ್ರೀ ರಿಲೀಸ್​​: ಸುದೀಪ್ ವಾಯ್ಸ್‌ನಲ್ಲಿ ಕರೆಂಟ್‌ ಇದೆ ಅಂದ್ರು ಕ್ರೇಜಿ ಸ್ಟಾರ್

‘ರವಿ ಬೋಪಣ್ಣ’ ಆ, 12 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮುನ್ನ ಭರ್ಜರಿಯಾಗಿ ಪ್ರಚಾರ ಮಾಡುವಲ್ಲಿ ಚಿತ್ರತಂಡ ನಿರತವಾಗಿದೆ. ಅದರ ಸಲುವಾಗಿ ಪ್ರೀ-ರಿಲೀಸ್​ ಇವೆಂಟ್​ ಮಾಡಿದೆ. ಈ ಕಾರ್ಯಕ್ರಮದಲ್ಲಿ ಹಲವರು ಸಿನಿಮಾ ಬಗ್ಗೆ ಹಲವು ರೀತಿಯಾಗಿ ಹೇಳಿದ್ದಾರೆ. ಅದರಲ್ಲೂ ಕ್ರೇಜಿ ಸ್ಟಾರ್ ಭಾವನಾತ್ಮಕವಾಗಿ ಮಾತನಾಡಿದ್ರು.

ravichandran and sudeep starrer ravi bopanna Movie pre release event rbj
Author
Bengaluru, First Published Aug 8, 2022, 9:07 PM IST

ವಿ.ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ‘ರವಿ ಬೋಪಣ್ಣ’ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಇದೇ ಆಗಸ್ಟ್ 12ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು  ಇಂದು(ಸೋಮವಾರ)  ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನಟ‌ ರವಿಚಂದ್ರನ್, ಕಿಚ್ಚ ಸುದೀಪ್, ಕಾವ್ಯ ಶೆಟ್ಟಿ, ನಟ ಡಾಲಿ ಧನಂಜಯ್, ನಟ ಶರಣ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ ಭಾಗಿಯಾಗಿದ್ರು.

ಇನ್ನು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್,  ಸಿನಿಮಾದಲ್ಲಿನ ಹಾಡುಗಳು, ಕ್ಯಾರೆಕ್ಟರ್ಸ್, ಸಿ‌ನಿಮಾ ಎಡಿಟಿಂಗ್ ಹಾಗೂ ಕಿಚ್ಚ ಸುದೀಪ್ ಪಾತ್ರದ ಬಗ್ಗೆ ಬಿಚ್ಚಿಟ್ಟರು.  ಅಷ್ಟೇ ಅಲ್ಲ ಈ ಹಿಂದೆ ತಮ್ಮ ಮಗಳ ಮದ್ವೆ ಮಾಡೋಕೆ ಏನೆಲ್ಲಾ ಕಷ್ಟಪಟ್ರು ಎನ್ನುವುದನ್ನು ಓಪನ್ ಆಗಿ ಹೇಳಿಕೊಂಡ್ರು.

'ಹಿರೋನೂ ಇವನೇ ವಿಲನ್ನು ಇವನೇ' ರವಿ ಬೋಪಣ್ಣ ಬಂದರೆ ಪೀಸ್ ಪೀಸ್

ಎಲ್ಲೆ ಹೋದ್ರು ಪಟ ಪಟ ಅಂತ ಮಾತಾಡ್ತೀನಿ. ಆದ್ರೆ ಇವತ್ತು ಮಾತಾಡೋಕೆ ಆಗ್ತಿಲ್ಲ. 60 ವರ್ಷ ಮುಗಿದು ಹೊಯ್ತು. ನನ್ನ ಅಪ್ಪ ತುಂಬಾ ನೆನಪಾಗುತ್ತಿದ್ದಾರೆ. ನಾನು ದುಡ್ಡು ಸಂಪಾದಿಸಿದ್ದೀನೋ ಇಲ್ವೋ ಹೃದಯ ಸಂಪಾಧನೆ ಮಾಡಿದ್ದೇನೆ ಎಂದು ಕ್ರೇಜಿ ಸ್ಟಾರ್ ಹೆಮ್ಮೆಯಿಂದ ಹೇಳಿಕೊಂಡರು.

ಯಾವ ರವಿಚಂದ್ರನ್ ನ ಪ್ರೇಮಲೋಕದಿಂದ ನೋಡಿದ್ದೀರೋ ಅಲ್ಲಿಂದ ಇಲ್ಲೀ ತನಕ ಏನೆಲ್ಲಾ ಇದೆಯೋ ಅದೆಲ್ಲಾ ಈ ಸಿನಿಮಾದಲ್ಲಿದೆ. ನಾನು ಆವತ್ತಿಂದ ಕಾಲರ್ ಅನ್ನ ಇಳಿಸೇ ಇಲ್ಲ. ಈ‌ ಸಿನಿಮಾದಲ್ಲಿ ಗ್ರಾಮರ್ ಇಲ್ಲ ಗ್ಲಾಮರ್‌ ಒದೆ. ಫ್ಯಾಮಿಲಿ ಸಿನಿಮಾ ಇದು. ಈ ಸಿನಿಮಾ‌ ಬೇರೆ ಲೋಕಕ್ಕೆ‌ ಕರೆದುಕೊಂಡು ಹೋಗುತ್ತೆ ಎಂದರು.

ನಮ್ಮೊಳಗೆ ಒಬ್ಬ ಕರ್ಮ ಇದ್ದಾನೆ. ಅದು ಯಾವಾಗ್ಲು ನಮ್ಮನ್ನ ನೋಡಿ ನಗುತ್ತಾ ಇರ್ತಾನೆ. ಸುದೀಪ್ ಎಲ್ಲೇ ಹೋಗುತ್ತಿದ್ರು ನಾನ್ ಕಾಲ್ ಮಾಡಿದ್ರೆ ಕಾರ್ ನಿಲ್ಲಿಸಿಯೇ ಮಾತಾಡೋದು. ನನ್ನ ಸುದೀಪ್ ಮಧ್ಯೆ ಜನ್ಮ ಜನ್ಮದ ಸಂಬಂಧ ಇದೆ. ಕರ್ನಾಟಕದಲ್ಲಿ ಯಾರದ್ದಾದ್ರು ಕರೆಂಟ್ ವಾಯ್ಸ್ ಇದೆ ಅಂದ್ರೆ ಅದು ಸುದೀಪ್ ವಾಯ್ಸ್ ಮಾತ್ರ. ಸುದೀಪ್ ವಾಯ್ಸ್ ನಲ್ಲಿ ಕರೆಂಟ್‌ ಇದೆ ಅಂದ್ರು.

ಈ‌ ಸಿ‌ನಿಮಾನ ಮೂರು ಭಾರಿ ಎಡಿಟ್ ಮಾಡಿದ್ದೇನೆ. ನನ್ನ ಜೊತೆಯಲ್ಲಿದ್ದವೇ ನನಗೆ ಹುಚ್ಚ ಅಂದ್ರು, ಆ ಹುಚ್ಚುತನವೇ ಈ ಸಿನಿಮಾ ಚೆನ್ನಾಗಿ ಬರೋದಕ್ಕೆ ಕಾರಣ. ಇಡೀ ಸಿನಿಮಾದಲ್ಲಿ 8 ಹಾಡುಗಳಿವೆ. ಕಾವ್ಯ ಶೆಟ್ಟಿ ಅದ್ಭುತ ನಟಿ.. 24-30 -50 ವರ್ಷದ ಕ್ಯಾರೆಕ್ಟರ್ ಮಾಡಿದ್ದಾರೆ ಎಂದು ತಿಳಿಸಿದರು. 

ಸುಮಾರು‌ ವರ್ಷ ನಾನು ಕಳೆದು ಹೋಗಿದ್ದೆ. ಆದ್ರೆ ಈ ಸಿನಿಮಾದಿಂದ ಮತ್ತೆ ಕಲಿತುಕೊಂಡೆ. ಜೀವನ ತುಂಬಾ ಕಷ್ಟದ ಉದಾಹರಣೆ ಹೇಳ್ತೀನಿ. ನನ್ನ ಮಗಳ ಮದುವೆಯಲ್ಲಿ ಹಣದ ಮುಗ್ಗಟ್ಟಿತ್ತು. ಮನೆಗೆ ಇಬ್ರು ಸ್ನೇಹಿತರು ಬಂದಿದ್ರು.. ಗಿಫ್ಟ್ ಕೊಟ್ಟು ಹೋದ್ರು. ಆ ಗಿಫ್ಟ್ ಓಪನ್ ಮಾಡಿದ್ರೆ ಅದರಲ್ಲಿ ಸಾಕಷ್ಟು ದುಡ್ಡು ಇತ್ತು ಎಂದು ಎಂದು ಅಂದಿನ ನೆನಪುಗಳನ್ನ ಮೆಲುಕು ಹಾಕಿದ ಕ್ರೇಜಿ ಸ್ಟಾರ್ ಸುದೀಪ್ ಹೆಸರು ತೆಗೆದ್ರೆ ನನಗೆ ಮೈಯಲ್ಲಿ ರೋಮಾಂಚನ ಆಗುತ್ತೆ ಹೇಳಿದ್ರು.

ಕಿಚ್ಚ ಸುದೀಪ್ ಹೇಳಿದ್ದಿಷ್ಟು..
ಇನ್ನು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಾತನಾಡಿ,  ಕನ್ನಡ ಚಿತ್ರರಂಗದ ಆಸ್ತಿ ಗತ್ತು, ವೈಭವ ರವಿ ಸರ್. ಇದು ಯಾರು ಬೇಕಾದ್ರು ಹೇಳಬಹುದು. ಇವತ್ತು ಪ್ಯಾನ್‌ ಇಂಡಿಯಾ ಅಂತೀರಲ್ಲಾ ಅದನ್ನ ಅಂದೇ ಮಾಡಿದ ನಿರ್ದೇಶಕ, ಕಲಾವಿದ. ಈಶ್ವರಿ ಸಂಸ್ಥೆ 50 ವರ್ಷ ಮುಗಿಸಿದೆ. ಇದನ್ನ ಮುಂದುವರೆಸೋದು ನಮ್ಮೆಲ್ಲರ ಜವಾಬ್ಧಾರಿ. ಈಶ್ವರಿ‌ ಸಂಸ್ಥೆಯಲ್ಲಿ ಎರಡು ಸಿನಿಮಾ ಮಾಡೋಕೆ ಚಾನ್ಸ್ ಕೊಟ್ಟಿದ್ದಾರೆ ಎಂದು  ರವಿಚಂದ್ರ ಅವರಿಗೆ ಧನ್ಯವಾದ ತಿಳಿಸಿದ್ರು.

ಪ್ರೀ ರಿಲೀಸ್‌ನಲ್ಲಿ ಜಗ್ಗೇಶ್ ಮಾತು
ನಟ, ಕಮ್ ರಾಜಕಾರಣಿ ಜಗ್ಗೇಶ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದು, ಒಬ್ರ ಬಗ್ಗೆ ಮಾತಾಡುವಾಗ ಸಮಾಧಾನ ಇದ್ರೆ ಅವರ ಸಾಧನೆ ಬಗ್ಗೆ ತಿಳಿದುಕೊಳ್ಳಬಹುದು. ರವಿಚಂದ್ರನ್ ಎಷ್ಟು ಪರ್ಫೆಕ್ಟ ಅಂತ ರವಿಚಂದ್ರನ್ ನೋಡಿದ್ರೆ ಗೊತ್ತಾಗುತ್ತೆ. ಯಾವ ಮನುಷ್ಯ ಒಳಗೆ ಹೊರಗೆ ಸರಿಯಾಗಿ‌ ಇರ್ತಾನೆ ಆಗ ಮಾತ್ರ ತುಂಬಾ ಸಂತೋಷವಾಗಿರ್ತಾನೆ. ಈಶ್ವರಿ ಸಂಸ್ಥೆ ಬಗ್ಗೆ ರವಿ ಸರ್ ಹೇಳುತ್ತಿದ್ರೆ ಕಣ್ಣು ವದ್ದೆ ಆಯ್ತು. ರವಿ ಸರ್ ತಂದೆಯನ್ನ ತುಂಬಾ ಪ್ರೀತಿಸ್ತಾರೆ. ವೀರಸ್ವಾಮಿ ಅವರು ಈಶ್ವರಿ ಸಂಸ್ಥೆಯಿಂದ ನನ್ನನ್ನ ಕರೆಯಿಸಿದ್ದು, ಸಂಸ್ಥೆಗೆ ಹೋದಾಗ ವೀರಸ್ವಾಮಿ ಅವರು ಮಹಾರಾಜರ ತರ ಕೂತಿದ್ರು. ನಾನು ಕಷ್ಟದಲ್ಲಿದ್ದಾಗ ರಣಧೀರ ಸಿನಿಮಾ ಕೊಟ್ರು ಎಂದು ನೆನಪಿಸಿಕೊಂಡರು.

ರವಿಚಂದ್ರನ್ ಕುದುರೆಯನ್ನ ಸಖತ್ ಆಗಿ ಓಡಿಸುತ್ತಿದ್ರು. ನಾನು ಜಟಕ ಗಾಡಿ ಕುದುರೆ ಓಡಿಸಿ ಕಲಿತೆ. ರಣದೀರ ಸಿನಿಮಾದಲ್ಲಿ ಎಲ್ಲಾರಿಗೂ ಬಟ್ಟೆ ಕೊಡಿಸು ಅಂತ ನನಗೆ ಜವಾಬ್ದಾರಿ ಕೊಟ್ಟಿದ್ರು. ಆ ಸಿ‌ನಿಮಾಗೆ ಆ ಕಾಲದಲ್ಲಿ 15 ಸಾವಿರ ಸಂಭಾವನೆ ಕೊಟ್ಟಿದ್ರು. ಸಿನಿಮಾ‌ ಸೆಟ್ ನಲ್ಲಿ 50 ಬಗೆಯ ಊಟ ಹಾಕುತ್ತಿದ್ರು. ಮದುವೆ ಆಗಿದ್ದಾರೆ ಆದ್ರೆ ಅವರು ಹೆಂಡತಿ‌ಯನ್ನ ಕೂಡ ನೋಡಿರಲಿಲ್ಲ.  ಅಷ್ಟು ಕೆಲಸ ಮಾಡುತ್ತಿದ್ರು..  ಅಣ್ಣಾವ್ರು ಶೂಟಿಂಗ್ ನೋಡೋದಕ್ಕೆ ಬರುತ್ತಿದ್ರು  ಈಶ್ವರಿ ಪ್ರೊಡಕ್ಷನ್ ಹಾಗೆ ನಾವು ಯಾವಾಗ ಶೂಟಿಂಗ್ ಮಾಡೋದು ಅನ್ನುತ್ತಿದ್ರು. ರವಿ ಬೋಪಣ್ಣ ಸಿನಿಮಾದಲ್ಲಿ ಆ ಟೈಪ್ ಈ ಟೈಪ್ ಎಲ್ಲಾ‌ ಇದೆ.. ರವಿ ಸರ್ ಯಾವ್ ಟೈಪ್ ಈ‌ ಸಿನಿಮಾದಲ್ಲಿದ್ದಾರೋ ಅನ್ನೋ ಕುತೂಹಲ ಇದೆ. ರವಿ ಸರ್ ಕಷ್ಟ ಸುಖ ಎಲ್ಲಾವನ್ನು ನೋಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

Follow Us:
Download App:
  • android
  • ios