ಶನಿ ಮಹದೇವಪ್ಪನವರ ಹೆಸರಿನ ಹಿಂದೆ ಶನಿ ಅಂಟಿಕೊಂಡದ್ದು ಹೇಗೆ ಎಂಬುದು ನಿಮಗೆ ಗೊತ್ತಿರಬಹುದು. ಆದರೆ ಅವರು ಡಾ.ರಾಜ್ ಫಿಲಂಗಳ ಸೆಕೆಂಡ್ ಹೀರೋ ಆಗಿದ್ದು ಹೇಗೆ, ತಿಳಿದಿದೆಯಾ?
ಕನ್ನಡ ಫಿಲಂಗಳಲ್ಲಿ ನಟಿಸಿ ಹೆಸರು ಮಾಡಿದ್ದ, ರಾಜ್‌ಕುಮಾರ್ ಮತ್ತು ನರಸಿಂಹರಾಜು ಜಮಾನಾದ ನಟ ಶನಿ ಮಹದೇವಪ್ಪ. ಇವರಿಗೆ 'ಶನಿ' ಎಂಬ ಬಿರುದು ಬಂದದ್ದು ಯಾಕೆ ಅಂತ ನಿಮಗೆ ಗೊತ್ತಿರಬಹುದು. ಇವರನ್ನು ರಾಜ್‌ಕುಮಾರ್ ಫಿಲಂಗಳ ಸೆಕೆಂಡ್ ಹೀರೋ ಅಂತ ಕರೆಯುತ್ತಿದ್ದದ್ದು ಯಾಕೆ ಅಂತ ನಿಮಗೆ ಗೊತ್ತಾ?
ಅದು ಸ್ವಾರಸ್ಯಕರವಾಗಿದೆ. ಇವರು ಐನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರಂತೆ. ನಟಿಸಿದ್ದಿರಬಹುದು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಮೊದಲಾದ ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿದ್ದು ಇವರಿಗೆ ಹೆಸರು ತಂದುಕೊಟ್ಟಿತು. ಸುಮಾರು ೧೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಡಾ.ರಾಜ್‌ಕುಮಾರ್ ಜೊತೆಗೇ ಇವರು ನಟಿಸಿದ್ದರು. ಕೊನೆಕೊನೆಗೆ ರಾಜ್‌ಕುಮಾರ್ ಫ್ಯಾಮಿಲಿ ತರುವ ಚಿತ್ರಗಳ ಅವಿಭಾಜ್ಯ ಅಂಗಗಳಲ್ಲಿ ಇವರು ಒಂದಾಗಿ ಹೋದರು. ಅದರಲ್ಲೂ ರಾಜ್‌ಕುಮಾರ್ ಕಾಳಿದಾಸನಾಗಿ ನಟಿಸಿದ, ಕವಿರತ್ನ ಕಾಳಿದಾಸ ಚಿತ್ರದ ಡಿಂಡಿಮ ಕವಿಯ ಪಾತ್ರ ತುಂಬಾ ಜನಪ್ರಿಯ. ಕವಿತ್ವಕ್ಕಿಂತ ಹೆಚ್ಚಾಗಿ ಸದ್ದುಗದ್ದಲ ಎಬ್ಬಿಸುತ್ತ ಓಡಾಡುವ ಕವಿಯಾಗಿ ಇವರು ರಂಜಿಸಿದರು.
'ಡಿಂಡಿಮ ಕವಿ' ಹಿರಿಯ ಕಲಾವಿದ ಶನಿ ಮಹದೇವಪ್ಪ ಇನ್ನಿಲ್ಲ ...
ಮುಂದೆ ರಾಜ್ ಅವರ ಬಹುತೇಕ ಎಲ್ಲ ಫಿಲಂಗಳಲ್ಲಿ ನಟಿಸಿದರು. ಅವರು ತಮ್ಮ ಚಿತ್ರಗಳಲ್ಲಿ ನಟಿಸಿದರೆ ಅದೃಷ್ಟ ಎಂಬ ಭಾವನೆಯೋ, ಅಥವಾ ಮಹದೇವಪ್ಪ ಅವರ ಜೊತೆಗಿನ ಭಾವನಾತ್ಮಕ ಸಖ್ಯದ ಫಲವೋ, ಅಂತೂ ಅವರು ತಮ್ಮ ಫಿಲಂನಲ್ಲಿ ಸಣ್ಣದೊಂದು ಪಾತ್ರದಲ್ಲಾದರೂ ಇರಲೇಬೇಕಿತ್ತು ರಾಜ್ ಅವರಿಗೆ. ಪಾತ್ರಗಳಿಲ್ಲದಿದ್ದರೆ ಸೂಕ್ತ ಪಾತ್ರವೊಂದನ್ನು ಸೃಷ್ಟಿಸಿ ಅವರಿಗಾಗಿ ಇಡುತ್ತಿದ್ದರು. ಕೆಲವೊಮ್ಮೆ, ಮಹದೇವಪ್ಪ ಅವರು ಅಸೌಖ್ಯದಿಂದ ನಟಿಸಲು ಸಾಧ್ಯವಾಗದೆ ಹೋದಾಗಲೂ, ಅವರನ್ನು ಒಂದು ದೃಶ್ಯದಲ್ಲಾದರೂ ತಮ್ಮ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುತ್ತಿದ್ದರು ರಾಜ್. ಹೀಗಾಗಿಯೇ ಅವರನ್ನು ರಾಜ್ ಚಿತ್ರದ ಸೆಟ್‌ನಲ್ಲಿ 'ಸೆಕೆಂಡ್ ಹೀರೋ' ಎಂದು ತಮಾಷೆಯಾಗಿ ಕರೆಯಲು ಆರಂಭಿಸಲಾಯಿತು. ಮುಂದೆ ಅದೇ ರೂಢಿಯಾಯಿತು. ಮನೆಯಲ್ಲಿ ಅಷ್ಟೊಂದು ಅನುಕೂಲದ ಸ್ಥಿತಿಯಲ್ಲಿ ಇಲ್ಲದ ಮಹದೇವಪ್ಪ ಅವರಿಗೆ ಹಣಕಾಸಿನ ನೆರವು ಮಾಡುವ ದೃಷ್ಟಿಯೂ ರಾಜ್ ಅವರಿಗೆ ಇತ್ತು ಅನಿಸುತ್ತದೆ.
ಶನಿ ಮಹಾದೇವಪ್ಪ ಬಗ್ಗೆ ಜಗ್ಗೇಶ್ ಟ್ಟೀಟ್; 'ಮೇಯರ್ ಫಂಡ್‌ನಿಂದ 5 ಲಕ್ಷ ಬರುವಂತೆ ಮಾಡಿದೆ'! ...
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಶನಿ ಮಹದೇವಪ್ಪ ಅವರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ರಾಜಾ ವಿಕ್ರಮ ನಾಟಕದೊಂದಿಗೆ ಬಣ್ಣ ಹಚ್ಚಿದರು. ಅವರಿಗೆ ಶನೀಶ್ವರ ಮಹಾತ್ಮೆಯ ಶನಿದೇವರ ಪಾತ್ರ ಅಪಾರ ಖ್ಯಾತಿ ತಂದುಕೊಟ್ಟಿತು. ಈ ಯಶಸ್ಸಿನಿಂದಾಗಿ ಅವರಿಗೆ ಮುಂದೆ ಶನಿ ಮಹದೇವಪ್ಪ ಎಂಬ ಹೆಸರೇ ಶಾಶ್ವತವಾಯಿತು. ರಂಗಭೂಮಿಯಲ್ಲಿ ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ಬಡವನ ಬಾಳು, ಅತ್ತೆ ಸೊಸೆ, ಬಿಡುಗಡೆ, ಸತ್ಯವಿಜಯ, ಚಂದ್ರಹಾಸ ಮುಂತಾದ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು. ಧರ್ಮಸ್ಥಳ ಮಹಾತ್ಮೆ ಸಿನಿಮಾದಲ್ಲಿ ಬ್ರಹ್ಮನಾಗಿ ಸಿನಿಮಾ ರಂಗ ಪ್ರವೇಶಿಸಿದರು. ಹಲವಾರು ಚಿತ್ರಗಳಲ್ಲಿ ಖಳನಟನಾಗಿ, ಮುಂದೆ ಪೋಷಕ ನಟನಾಗಿ ಅಭಿನಯಿಸಿದರು. ಭಕ್ರ ಕುಂಬಾರದ ಜ್ಞಾನೇಶ್ವರ, ಮೂರುವರೆ ವಜ್ರಗಳು ಚಿತ್ರದಲ್ಲಿ ಶಕುನಿಯಾಗಿ, ಕವಿರತ್ನ ಕಾಳಿದಾಸದಲ್ಲಿ ಡಿಂಡಿಮ ಕವಿಯಾಗಿ ಮಿಂಚಿದರು.
'ಸತ್ಯ' ಗೌತಮಿ ಮನೆಗೆ ಹೊಸ ವರ್ಷಕ್ಕೆ ಹೊಸ ಅತಿಥಿ..ಯಾವ ಕಾರು? ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2021, 6:18 PM IST