ಬೆಂಗಳೂರು(ಜ. 03)  ಕನ್ನಡದ ಹಿರಿಯ ನಟ  ಶನಿ ಮಹಾದೇವಪ್ಪ ಕೊನೆ ಉಸಿರು ಎಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟನಿಗೆ 90 ವರ್ಷ ವಯಸ್ಸಾಗಿತ್ತು.

ರಂಗಭೂಮಿ ಹಿನ್ನೆಲೆಯಿಂದ ಬಂದ ನಟ ಡಾ. ರಾಜ್ ಕುಮಾರ್  ಅವರ ಜತೆಗೂ ನಟಿಸುತ್ತ ಬಂದಿದ್ದರು.  ಶನಿ ಪ್ರಭಾವ ನಾಟಕದಲ್ಲಿ ಶನಿ ಪಾತ್ರದ ಮೂಲಕವೇ ಪ್ರಖ್ಯಾತಿ ಪಡೆದ ಕಲಾವಿದ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದರು.

ಗಾನ ಗಂಧರ್ವ ಎಸ್‌ಪಿಬಿ ಬದುಕಿನ ಹಾದಿ

200 ಕ್ಕೂ ಹೆಚ್ಚು ಸಿನಿಮಾ‌ಗಳಲ್ಲಿ ಅಭಿನಯ ಮಾಡಿದ್ದ ಶನಿ ಮಹದೇವಪ್ಪ ಡಾ.  ರಾಜ್ ಕುಮಾರ್ ಜೊತೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕವಿರತ್ನ ಕಾಳಿದಾಸ ಚಿತ್ರದ ಡಿಂಡಿಮ ಪಾತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಪೋಷಕ ನಟರಾಗಿ, ಖಳನಟರಾಗಿ ಗುರುತಿಸಿಕೊಂಡಿದ್ದರು. ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣದಲ್ಲಿಯೂ ಅಭಿನಯಿಸಿದ್ದರು.