Asianet Suvarna News Asianet Suvarna News

ಜೇಮ್ಸ್ ಬಾಂಡ್ ಸರಣಿ ರೀತಿ ಕೆಜಿಎಫ್ ಸೀರಿಸ್‌ಗೆ ಹೊಂಬಾಳೆ ಪ್ಲಾನ್; ಆದರೆ ನಾಯಕ ಯಶ್ ಆಗಿರಲ್ವಂತೆ

ಕೆಜಿಎಫ್ ಸಿನಿಮಾವನ್ನು ಮುಂದಿನ ದಿನಗಳಲ್ಲಿ ಜೇಮ್ಸ್ ಬಾಂಡ್ ಸೀರಿಸ್ ನಂತೆ ಮಾಡಲು ನಿರ್ಧಾರ ಮಾಡಿರುವುದಾಗಿ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಹೇಳಿದ್ದಾರೆ.

Hombale Films Vijay Kiragandur reveals KGF series will continues like James Bond series sgk
Author
First Published Jan 9, 2023, 4:01 PM IST

ಭಾರತೀಯ ಸಿನಿಮಾರಂಗವೇ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿದಂತಹ ಸಿನಿಮಾ ಕೆಜಿಎಫ್.ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಕೆಜಿಎಫ್ ಸಂಚಲನವನ್ನು ಸೃಷ್ಟಿ  ಮಾಡಿತ್ತು. ಕೆಜಿಎಫ್ ಪಾರ್ಟ್ 1 ರೀತಿಯೇ  ಪಾರ್ಟ್ 2 ಕೂಡ  ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಕೋಟಿ ಕೋಟಿ ಕಮಾಯಿ ಮಾಡಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಕೂಡ ಯಶಸ್ಸು ಕಂಡಿತ್ತು. ಅಂದಹಾಗೆ ಕೆಜಿಎಫ್ ಪಾರ್ಟ್ 2 ಸಿನಿಮಾದಲ್ಲಿಯೇ ಕೆಜಿಎಫ್ ಪಾರ್ಟ್ 3 ಬಗ್ಗೆ ಹಿಂಟ್ ಕೂಡ ಕೊಡುವ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದರು.

ಅಭಿಮಾನಿಗಳು ಕೆಜಿಎಫ್ ಪಾರ್ಟ್ 3 ಯಾವಾಗ ಸೆಟ್ಟೇರಲಿದೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ನಂತರ ಯಾವುದೇ ಸಿನಿಮಾ ಅನೌನ್ಸ್ ಮಾಡದೇ ಇರುವ ಕಾರಣದಿಂದ ಕೆಜಿಎಫ್ 3 ಆದಷ್ಟು ಬೇಗ ಸೆಟ್ಟೇರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಯಶ್ ಅಭಿಮಾನಿಗಳು. ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಣೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಯಶ್ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ಶುರುವಾಗಿದೆ. ಅಧಿಕೃತವಾಗಿ ಯಶ್ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡದೇ ಇದ್ದರೂ ಕನ್ನಡ ಸಿನಿಮಾ ರಂಗದ ದೊಡ್ಡ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಕೆವಿಎನ್ ಸಂಸ್ಥೆ ಯಶ್ ಅವರ ಮುಂದಿನ ಸಿನಿಮಾ ನಿರ್ಮಾಣ ಮಾಡುವುದಾಗಿ ಅನೌನ್ಸ್ ಮಾಡಿದೆ. 

ಇದೇ ಸಂದರ್ಭದಲ್ಲಿ ಕೆಜಿಎಫ್ 3 ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಹಿಂದೆ ಕೆಜಿಎಫ್ ಸಿನಿಮಾದ ನಿರ್ಮಾಪಕ ವಿಜಯ ಕಿರಗಂದೂರು ಕೆಜಿಎಫ್ 3 ಸಿನಿಮಾ ಬಗ್ಗೆ ಕೊಟ್ಟಿರುವ ಹೇಳಿಕೆ ಸಖತ್ ವೈರಲ್ ಆಗಿದೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ವಿಜಯ್ ಕಿರಗಂದೂರು, 'ಕೆಜಿಎಫ್ ತಂಡ ಸದ್ಯ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯೂಸಿಯಾಗಿದೆ. ತನ್ನ ಅಂದಾಜಿನ ಪ್ರಕಾರ 2025ಕ್ಕೆ ಕೆಜಿಫ್ 3 ಸೆಟ್ಟಿರುವಂತಹ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. 2026 ಕ್ಕೆ kgf 3 ಸಿನಿಮಾನ ಬಿಡುಗಡೆ ಮಾಡುವಂತ ಪ್ಲಾನ್ ಅನ್ನು ಹೊಂದಿದ್ದೇವೆ' ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ. 

3 ಸಾವಿರ ಕೋಟಿ ಹೂಡಿಕೆ; ಮುಂದಿನ 5 ವರ್ಷದ ಹೊಂಬಾಳೆ ಫಿಲ್ಮ್ಸ್‌ ಪ್ಲಾನ್‌ಗೆ ಭಾರತೀಯ ಸಿನಿಮಾರಂಗ ಶಾಕ್

ಜೇಮ್ಸ್ ಬಾಂಡ್ ಸರಣಿ ಹಾಗೆ ಕೆಜಿಎಫ್ ಸೀರಿಸ್ 

ಕೆಜಿಎಫ್ ಸಿನಿಮಾವನ್ನು ಮುಂದಿನ ದಿನಗಳಲ್ಲಿ ಜೇಮ್ಸ್ ಬಾಂಡ್ ಸೀರಿಸ್ ನಂತೆ ಮಾಡಲು ನಿರ್ಧಾರ ಮಾಡಿರುವುದಾಗಿ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಹೇಳಿದ್ದಾರೆ. ಇನ್ನು ಕೆಜಿಎಫ್ 5ನೇ ಸೀರಿಸ್ ಹೊತ್ತಿಗೆ ನಾಯಕನನ್ನು ಬದಲಾಯಿಸಲಾಗುತ್ತದೆ. ಅಲ್ಲಿಯವರೆಗೂ ಯಶ್ ಅವರೇ ಕೆಜಿಎಫ್ ಪಾರ್ಟ್ 3 ಹಾಗೂ ಪಾರ್ಟ್ 4ಗೆ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆ ಮಾಡದೇ ಇರುವ ಕಾರಣದಿಂದಾಗಿ ಈ ಬಾರಿಯ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡಿಲ್ಲ. ಫ್ಯಾಮಿಲಿ ಜೊತೆ ದುಬೈ ಪ್ರವಾಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಅತ್ಯಪ್ತರ  ಜೊತೆ ದುಬೈನಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

Salaar; ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾದ ಸೀಕ್ವೆಲ್ ಬರ್ತಿದಿಯಾ? ನಿರ್ಮಾಪಕರು ಹೇಳಿದ್ದೇನು?

ಸದ್ಯ ಕೆವಿಎನ್ ಸಂಸ್ಥೆ ಯಶ್ ಅವರ 19ನೇ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಈಗಾಗಲೇ ನಿರ್ದೇಶಕ ನರ್ತನ್, ಯಶ್ ಅವರಿಗೆ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ನರ್ತನ್ ಅವರೇ ಯಶ್ ಮುಂದಿನ ಸಿನಿಮಾಗೆ ನಿರ್ದೇಶನ ಮಾಡುತ್ತಾರಾ? ರಾಕಿಭಾಯ್ ಮುಂದಿನ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.    

Follow Us:
Download App:
  • android
  • ios