Asianet Suvarna News Asianet Suvarna News

3 ಸಾವಿರ ಕೋಟಿ ಹೂಡಿಕೆ; ಮುಂದಿನ 5 ವರ್ಷದ ಹೊಂಬಾಳೆ ಫಿಲ್ಮ್ಸ್‌ ಪ್ಲಾನ್‌ಗೆ ಭಾರತೀಯ ಸಿನಿಮಾರಂಗ ಶಾಕ್

ಹೊಂಬಾಳೆಫಿಲ್ಮ್ಸ್ ಮುಂದಿನ 5 ವರ್ಷಗಳ ಪ್ಲಾನ್ ಬಹಿರಂಗ ಪಡಿಸಿದೆ. ಭಾರತೀಯ ಸಿನಿಮಾರಂಗದಲ್ಲಿ ಬರೋಬ್ಬರಿ 3 ಸಾವಿರ ಕೋಟಿ ಹೂಡಿಕೆ ಮಾಡಲು ಪ್ಲಾನ್ ಮಾಡಿದೆ. 

KGF and Kantara producer Hombale Films to invest Rs 3,000 crore in Indian film industry sgk
Author
First Published Dec 24, 2022, 12:57 PM IST

ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್  ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ಮೇಲೆ ಸಿನಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಅಂದರೆ ಅಭಿಮಾನಿಗಳು ನೋಡುವ ರೀತಿಯೇ ಬೇರೆಯಾಗಿದೆ. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾರಂಗವೇ ಹೊಂಬಾಳೆ ಫಿಲ್ಮ್ಸ್ ಸಿನಿಮಾಗೆ ಎದುರು ನೋಡುತ್ತಿದೆ. ಬಹು ದೊಡ್ಡ ಕನಸು ಕಂಡಿರುವ ಹೊಂಬಾಳೆ ಫಿಲ್ಮ್ಸ್ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಸಾಲು ಸಾಲು ಸಿನಿಮಾಗಳು ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿ ಬರುತ್ತಿವೆ. ಈ ನಡುವೆ ಮುಂದಿನ 5 ವರ್ಷದ ಪ್ಲಾನ್ ಬಹಿರಂಗ ಪಡಿಸಿದೆ. 3 ಸಾವಿರ ಕೋಟಿ ಹೂಡಿಕೆ ಮಾಡುತ್ತಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಬಹಿರಂಗ ಪಡಿಸಿದ್ದು, ಭಾರತೀಯ ಸಿನಿಮಾರಂಗವೇ ಅಚ್ಚರಿ ಪಡುವಂತೆ ಮಾಡಿದೆ. 

ಹೊಂಬಾಳೆ ಫಿಲಂಸ್‌ನ ಸಂಸ್ಥಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಮಾತನಾಡಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು,  'ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದೀವಿ. ಇದರಿಂದ ಮನರಂಜನಾ ಉದ್ಯಮವು ಹೆಚ್ಚು ಹೆಚ್ಚು ಬೆಳೆಯುತ್ತದೆ ಎಂದು ನಾವು ನಂಬುತ್ತೇವೆ' ಎಂದು ಹೇಳಿದರು. ಪ್ರತಿವರ್ಷ ಐದು-ಆರು ಸಿನಿಮಾಗಳು ಇರುತ್ತದೆ. ಇದು ಒಂದು ಕಥೆಗಳ ಬ್ಯಾಗ್. ನಾವು ಸಧ್ಯ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಸಿನಿಮಾಗಳನ್ನು ಮಾಡುವ ಯೋಜನೆ ಹೊಂದಿದ್ದೇವೆ' ಎಂದು ಹೇಳಿದರು. ಇನ್ನು ವಿಶೇಷ ಎಂದರೆ ನಮ್ಮ ಸಂಸ್ಕೃತಿಯ ಕಥೆಗಳ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

'ನಾವು ಜಾಗತಿಕ ಮಟ್ಟದ ಪ್ರೇಕ್ಷಕರು ಇಷ್ಟಪಡುವಂತೆ ಏನನ್ನಾದರೂ ಮಾಡಲು ಬಯಸುತ್ತೇವೆ. ಆದರೆ ಅದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಬೇರೂರಿದ ಕಥೆ ಆಗಬೇಕು ಎಂದು ನಾವು ಬಯಸುತ್ತೇವೆ. ನಾವು ಯುವ ಪೀಳಿಗೆಗೆ ಏನನ್ನಾದರೂ ಬಿಟ್ಟುಕೊಡಬೇಕು. ಭಾರತದ ಆರ್ಥಿಕತೆಗೂ ಕೊಡುಗೆ ನೀಡಲು ಬಯಸುತ್ತೇವೆ' ಎಂದು ಅವರು ಹೇಳಿದರು.

ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿರುವ ಹೊಂಬಾಳೆ ಫಿಲ್ಮ್ಸ್ ಹಿಂದಿ ಸಿನಿಮಾರಂಗದ ಬಹರಗಾಗರು ಹಾಗೂ ನಿರ್ದೇಶಕರ ಜೊತೆ ಕೈ ಜೋಡಿಸುವುದಾಗಿಯೂ ಹೇಳಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಇಬ್ಬರು ಖ್ಯಾತ ಹಿಂದಿ ಬರಹಗಾರರಿಗೆ ಅವಕಾಶ ನೀಡಿದೆ ಎನ್ನಲಾದಗಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. 

Yash; 4 ವರ್ಷದ ಸಂಭ್ರಮದಲ್ಲಿ KGF: Chapter 1; ವಿಶೇಷ ದಿನ ನೆನೆದು ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?

ಹೊಂಬಾಳೆ ಫಿಲ್ಮ್ಸ್ ಬಳಿ ಇರುವ ಸಿನಿಮಾಗಳು

ಹೊಂಬಾಳೆ ಫಿಲ್ಮ್ಸ್ ಸದ್ಯ ಸಾಲು ಸಾಲು ಸಿನಿಮಾಗಳಿಗೆ ಬಂಡವಾಳ ಹೂಡಿದೆ. ಸದ್ಯ ಬಹುನಿರೀಕ್ಷೆಯ ಸಲಾರ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಕೆಜಿಎಫ್ ಬಳಿಕ ಪ್ರಶಾಂತ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಮುಂದಿನ ವರ್ಷ ಸೆಪ್ಟಂಬರ್ 28ಕ್ಕೆ ರಿಲೀಸ್ ಆಗುತ್ತಿದೆ. ಇನ್ನು ಜಗ್ಗೇಶ್ ಹಾಗೂ ಸಂತೋಷ್ ಆನಂದ್ ರಾನ್ ಕಾಂಬಿನೇಷನ್ ನಲ್ಲಿ ರಾಘವೇಂದ್ರ ಸ್ಟೋರ್ ಸಿನಿಮಾ ಸಿದ್ಧವಾಗುತ್ತಿದೆ. ಪೃಥ್ವಿರಾಜ್ ಸುಕುಮಾರ್ ಜೊತೆ ಟೈಸನ್, ಶ್ರೀಮುರಳಿ ಜೊತೆ ಬಘೀರ, ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್ ಆಂಟೊನಿ, ಲೂಸಿಯಾ ಪವನ್ ಮತ್ತು ಫಹಾದ್ ಫಾಸಿಲ್ ಜೊತೆ ಧೂಮ್ ಹಾಗೂ ಕೀರ್ತಿ ಸುರೇಶ್ ಜೊತೆ ರಘುತಾತ ಸಿನಿಮಾ ಗಳಿವೆ. ಇನ್ನು ಯುವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷ್‌ ಸಿನಿಮಾಗೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಸೂರರೈ ಪೊಟ್ರು ಖ್ಯಾತಿಯ ನಿರ್ದೇಶಕ ಸುಧ ಕೊಂಗಾರ ಜೊತೆಯೂ ಹೊಂಬಾಳೆ ಫಿಲ್ಸ್ಮ್ ಸಿನಿಮಾ ಮಾಡುತ್ತಿದೆ.   

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸಿನಿಮಾ; ಟೈಟಲ್ ಪೋಸ್ಟರ್ ರಿಲೀಸ್

ಹೊಂಬಾಳೆ ಫಿಲ್ಮ್ಸ್ 2013ರಲ್ಲಿ ಸ್ಥಾಪನೆಯಾದ ಸಂಸ್ಥೆ. ಕಡಿಮೆ ಅವಧಿಯಲ್ಲಿ ರಾಷ್ಟ್ರ-ಅತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಿನ್ನಿಂದದಲೆ ಸಿನಿಮಾ ಮಾಡುವ ಮೂಲಕ ಹೊಂಬಾಳೆ ಫಿಲ್ಸ್ಮ್ ಪ್ರಾರಂಭವಾಯಿತು. ಬಳಿಕ ರಾಜಕುಮಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಕೆಜಿಎಫ್ ಸೀರಿಸ್ ಹೊಂಬಾಳೆ ಫಿಲ್ಮ್ಸ್‌ಗೆ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸಿತು. ಕಾಂತಾರ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. 

 

Follow Us:
Download App:
  • android
  • ios