ಯುಟ್ಯೂಬರ್‌ಗಳ ಪರ ನಿಂತ ಜಗ್ಗೇಶ್. ಪಾಸಿಟಿವ್ ಆಗಿ ಬಳಸಿಕೊಂಡರೆ ಬೆಳೆಸುವೆ ನೆಗೆಟಿವ್ ಆಗಿ ತೋರಿಸಿದರೆ ಬುದ್ಧಿ ಹೇಳುವೆ ಎಂದ ನಟ.....
ಹೊಂಬಾಳೆ ಫಿಲ್ಮ ನಿರ್ಮಾಣ ಮಾಡುತ್ತಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜಗ್ಗೇಶ್ ಯುಟ್ಯೂಬರ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಒಬ್ಬ ಒಳ್ಳೆಯ ಯುಟ್ಯೂಬರ್ ಇದ್ದಾನೆ ಆತನಿಗೆ ತುಂಬಾ ಫಾಲೋವರ್ಸ್ ಇದ್ದಾರೆ. ಯಾವುದೋ ಒಂದು ಕಂಪನಿಯನ್ನು ಮುಂದಿಟ್ಟು ಅವರನ್ನು ಲಾಕ್ ಮಾಡಿಬಿಟ್ಟರು ಅವರ ವೃತ್ತಿ ಜೀವನ ಸಂಕಷ್ಟಕ್ಕೆ ಬರುವಂತೆ ಮಾಡಿದರು. ಆ ವಿಚಾರ ನನ್ನ ತಲುಪಿತ್ತು ಆಗ ನಾನು ಒಂದೇ ಮಾತು ಹೇಳಿದ್ದು ಆ ಯುಟ್ಯೂಬರ್‌ನ ಬಿಟ್ಟು ಬಿಡಿ ಇಲ್ಲ ಅಂದ್ರೆ ನಾನು ಬರ್ತೀನಿ ಅಂದೆ. ಅದೆಷ್ಟೋ ತಿಂಗಳು ನಡೆದ ಗಲಾಟೆಯನ್ನು ಅಲ್ಲಿಗೆ ನಿಲ್ಲಿಸಿದರು. ಈಗ ಆತ ಖುಷಿಯಾಗಿದ್ದಾನೆ' ಎಂದು ಜಗ್ಗೇಶ್ ಕನ್ನಡ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರಾಘವೇಂದ್ರ ಸ್ಟೋರ್ಸ್‌ನಲ್ಲಿ ವ್ಯಾಪಾರಕ್ಕೆ ನಿಂತ ನಟಿ ಶ್ವೇತಾ ಶ್ರೀವಾಸ್ತವ್ ಫೋಟೋ ವೈರಲ್?
'ಯುಟ್ಯೂಬರ್ಸ್‌ಗಳು ವಿಚಾರಗಳನ್ನು ಜನರಿಗೆ ಬಹಳ ಬೇಗ ತಲುಪಿಸುತ್ತಾರೆ. ಇದರಲ್ಲಿ ಎರಡು ರೀತಿ ಇದೆ. ಒಂದು ಎಜುಕೇಟೆಡ್ ರೀತಿಯಲ್ಲಿ ಮುಂದೆವರೆಯುತ್ತಿರುವ ಯುಟ್ಯೂಬರ್‌ಗಳಿದ್ದಾರೆ ಅವರ ಅವಶ್ಯಕತೆ ತುಂಬಾ ಇದೆ ನಮ್ಮಲ್ಲಿ ಮತ್ತೊಂದಷ್ಟು ಜನರು ಇದ್ದಾರೆ ಅವರ ಬಗ್ಗೆ ಏನೂ ಗೊತ್ತಿರುವುದಿಲ್ಲ ಆದರೂ ಅವರ ಬಗ್ಗೆ ಸ್ಟೋರಿ ಮಾಡಿ ತಿರುಗಿ ನೋಡುವಂತೆ ಮಾಡುತ್ತಾರೆ. ನನಗೂ ಅನುಭವ ಆಗಿದೆ' ಎಂದು ಹೇಳುವ ಮೂಲಕ ಘಟನೆಯೊಂದನ್ನು ವಿವರಿಸಿದ್ದಾರೆ.
'ನಾನೊಂದು ದಿನ ಲಕ್ಷ್ಮಿ ಸಮೇತ ಭೂ ವರಹ ಸ್ವಾಮಿ ದೇಗುಲಕ್ಕೆ ಒಮ್ಮೆ ಭೇಟಿ ನೀಡಿದ್ದೆ. ಅಲ್ಲಿಂದ ನನ್ನನ್ನು ಒಬ್ಬರು ಫಾಲೋ ಮಾಡುತ್ತಿದ್ದರು ಹಾಗೇ hidden ಕ್ಯಾಮೆರಾ ಅವರ ಬಳಿ ಇತ್ತು. ನನ್ನನ್ನು ರ್ಯಾಗ್ ಮಾಡುವ ಪ್ಲ್ಯಾನ್ ಮಾಡುತ್ತಿದ್ದರು. ಆಗ ಅವನನ್ನು ಕರೆದು ಹೇಳಿದ ನಾನು ಆಧ್ಯಾತ್ಮಿಕ ಕೇಂದ್ರಕ್ಕೆ ಬಂದಿರುವುದು ನಿನ್ನಂತ ಪ್ರಶ್ನೆಗಳನ್ನು ಯುವಕರಿಗೆ ಕೇಳು ನನ್ನಂತವರಿಗೆ ಯಾಕೆ ಕೇಳುತ್ತೀಯಾ ನಾನು ಬದುಕಿನ ಎಲ್ಲಾ ಮಜಾಗಳನ್ನು ನೋಡಿ ಅಗಿದೆ. ಆದರೆ ಇಲ್ಲಿ ನೀನು ನನ್ನ ಮೇಲೆ ಕೋಪ ಮಾಡಿಕೊಂಡಿರುವೆ ಯಾಕೋ ನನ್ನನ್ನು ಇರಿಟೇಕ್ ಮಾಡುತ್ತಿರುವೆ ಹಾಗೆ ಮಾಡಬೇಡ. ಈ ಸಂದರ್ಶನದಲ್ಲಿ ಅವರಿಗೆ ಬೇಕಿರುವ ಹಾಗೂ ಜನರಲ್ಲಿ ಉರಿ ಕಿತ್ತಿಕೊಳ್ಳುವಂತ ಸಣ್ಣ ಸಣ್ಣ ವಿಡಿಯೋಗಳನ್ನು ಮಿಕ್ಸ್ ಮಾಡಿ ಥಂಬ್‌ನೇಲ್ ಹಾಕಿ ಜನರು ನನ್ನ ಬಗ್ಗೆ ಗಂಭೀರವಾಗಿ ಮಾತನಾಡುವಂತೆ ಮಾಡಿದ. ಕಾಂಟ್ರವರ್ಸಿ ಹುಟ್ಟಿಸಿದ..ಕಾರಣ ಏನೆಂದರೆ ಅವನು ಫೇಮಸ್ ಆಗಬೇಕು ಎಂದು. ಹೀಗೆ ಮಾಡಿದಕ್ಕೆ ಅವನನ್ನು 3 ದಿನದಲ್ಲಿ ಮುಚ್ಚು ಹಾಕಿಸಿದೆ. ಆಮೇಲೆ ಮನೆ ಬಳಿ ಬಂದು ಕ್ಷಮೆ ಕೇಳಿದ. ನಿಮಗೂ ನನಗೂ ಸಂಬಂಧವಿಲ್ಲ ಯಾಕೆ ಈ ರೀತಿ ಮಾಡುತ್ತಿರುವೆ? ನಿನಗೆ ವಿಚಾರ ಬೇಕು ಅಂದ್ರೆ ಬಾ ನನ್ನ ಜೊತೆ ಕುಳಿತುಕೊಂಡು ಚರ್ಚೆ ಮಾಡು ನಾನು ದೇವಸ್ಥಾನಕ್ಕೆ ಬಂದಿರುವ ಬಿಟ್ಟು ಬಿಡು ಅಂದ್ರೂನೂ ಸುಮ್ಮನಿರದೆ ನನ್ನ ಬಗ್ಗೆ ಮಾತನಾಡಿ ನಾನು ತಿರುಗಿ ಉತ್ತರ ಕೊಡುವಂತೆ ಮಾಡಿ ದ್ವೇಷ ಸಾಧಿಸುತ್ತಿರುವೆ. ಒಬ್ಬ ವ್ಯಕ್ತಿ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಕಷ್ಟ ಪಟ್ಟಿರುತ್ತಾನೆ ಅತ್ತಿರುತ್ತಾನೆ ನಕ್ಕಿರುತ್ತಾರೆ ಊಟ ಇಲ್ಲದೆ ಮಲಗಿರುತ್ತಾರೆ ಅದನ್ನು ನೋಡಿ ನೀವು ಆದರ್ಶವಾಗಿ ತೆಗೆದುಕೊಳ್ಳಬೇಕು ಅದನ್ನು ತೋರಿಸಿದರಿ ಜನರಿಗೆ ಖುಷಿ ಆಗುತ್ತೆ ಸ್ಫೂರ್ತಿ ಆಗುತ್ತೆ ಎಂದು ಹೇಳಿ ಬಿಟ್ಟೆ' ಎಂದಿದ್ದಾರೆ ಜಗ್ಗೇಶ್.
