ಕನ್ನಡದ ಪ್ರತಿಭಾವಂತರ ತಂಡ ಸೇರಿ ಮಾಡಿರುವ ‘ಹೆಲ್ಪ್‌’ ಕಿರುಚಿತ್ರ ಇದೇ ತಿಂಗಳು 27ರಂದು ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಕಿರು ಚಿತ್ರ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ತಂಡ ಮಾಧ್ಯಮಗಳ ಮುಂದೆ ಬಂತು. 

ಕನ್ನಡದ (Sandalwood) ಪ್ರತಿಭಾವಂತರ ತಂಡ ಸೇರಿ ಮಾಡಿರುವ ‘ಹೆಲ್ಪ್‌’ ಕಿರುಚಿತ್ರ (Help Short Movie) ಇದೇ ತಿಂಗಳು 27ರಂದು ಓಟಿಟಿಯಲ್ಲಿ (OTT) ಬಿಡುಗಡೆ ಆಗುತ್ತಿದೆ. ಕಿರು ಚಿತ್ರ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ತಂಡ ಮಾಧ್ಯಮಗಳ ಮುಂದೆ ಬಂತು. ನಿರ್ದೇಶಕ ಸಿಂಪಲ್‌ ಸುನಿ (Sipmle Suni) ಚಿತ್ರತಂಡಕ್ಕೆ ಶುಭ ಕೋರಲು ಬಂದಿದ್ದರು. ಜನ ಸಾಮಾನ್ಯರ ಜೀವನದ ಸುತ್ತ ಮಾಡಿರುವ ಕಿರು ಚಿತ್ರವಿದು. ಜೆರಿನ್‌ ಚಂದನ್‌ (Jerrin Chandan) ಇದರ ನಿರ್ದೇಶಕ. ಇದೇ ಪ್ರಥಮ ಬಾರಿಗೆ ಕನ್ನಡ ಕಿರುಚಿತ್ರವೊಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. 

‘ನಾವು ಹೇಳಬಯಸುವ ಕತೆಯ ಸಂದೇಶಗಳನ್ನು ತಲುಪಿಸಲು ಇದು ಸೂಕ್ತ ವೇದಿಕೆ ಎನಿಸಿತು. ಹೀಗಾಗಿ, ಈ ಮಾಧ್ಯಮವನ್ನು ಬಳಸಿಕೊಂಡು ಸಾಮಾನ್ಯ ಜನರ ಜೀವನದ ಏರಿಳಿತಗಳನ್ನು ತೋರಿಸಲು ಈ ಕಿರುಚಿತ್ರದ ಮೂಲಕ ಪ್ರಯತ್ನಿಸಿದ್ದೇನೆ. ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುವ ಯೋಚನೆ ಇದೆ’ ಎಂದು ಜೆರಿನ್‌ ಚಂದನ್‌ ಹೇಳಿದರು. ಈ ಕಿರು ಚಿತ್ರವನ್ನು ನಿರ್ಮಿಸಿರುವ ಆದಿತ್ಯ (Aditya) ಅವರು. ‘30 ನಿಮಿಷದ ಕಿರು ಚಿತ್ರ ನೋಡಿದಾಗ, ಇದು ಕಿರು ಚಿತ್ರ ಅನಿಸುವುದೇ ಇಲ್ಲ. ಯಾಕೆಂದರೆ ಇಲ್ಲಿ ಹೇಳಿರುವ ಕತೆ ಆ ರೀತಿ ಇದೆ. ಉತ್ತಮ ಸಂದೇಶ ಇರುವ ಒಳ್ಳೆಯ ಚಿತ್ರ ನಿಮಿಸಿದ ಖುಷಿ ಇದೆ’ ಎಂದು ಆದಿತ್ಯ ತಿಳಿಸಿದರು. 

Notary Movie: ಪವನ್‌ ಒಡೆಯರ್‌ ನಿರ್ದೇಶನದ ಹಿಂದಿ ಚಿತ್ರ 'ನೋಟರಿ'

‘ನನ್ನ ಮೊದಲ ಚಿತ್ರ 'ಸಿಂಪಲಾಗ್‌ ಒಂದ್‌ ಲವ್‌ ಸ್ಟೋರಿ' (Simple Aag Ond Love Story) ಚಿತ್ರದಲ್ಲಿ ಜೆರಿನ್‌ ಎಂಬ ಪಾತ್ರ ಬರುತ್ತದೆ. ಆ ಹೆಸರಿಡಲು ನನ್ನ ಈ ಗೆಳೆಯನೆ ಸ್ಫೂರ್ತಿ. ಈಗ ಹೆಲ್ಪ್‌ ಎಂಬ ಕಿರುಚಿತ್ರ ಮಾಡಿದ್ದಾನೆ. ಹೆಲ್ಪ್‌ ಎಂದರೆ ಈ ಕ್ಷಣಕ್ಕೆ ನೆನಪಾಗುವುದು ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರು. ಅವರು ಮಾಡಿರುವ ಸಹಾಯ ಎಲ್ಲರಿಗೂ ಸ್ಫೂರ್ತಿ. ಜೆರಿನ್‌ ಅವರಿಂದ ಇನ್ನೂ ಉತ್ತಮ ಚಿತ್ರಗಳು ಮೂಡಿಬರಲಿ’ ಎಂದು ಸಿಂಪಲ್ ಸುನಿ ಹಾರೈಸಿದರು. ಕಿರುಚಿತ್ರದಲ್ಲಿ ನಟಿಸಿರುವ ವಿನಯ್ ನಾಗೇಶ್ ರಾವ್ ಹಾಗೂ ಛಾಯಾಗ್ರಾಹಕ ರಾಜಕುಮಾರ್ 'ಹೆಲ್ಪ್' ಬಗ್ಗೆ ಮಾತನಾಡಿದರು. ಅಭಿಜಿತ್, ಬಿ.ಸುರೇಶ್, ವೀಣಾ ಸುಂದರ್ , ಡಿ.ಎನ್. ಆದಿತ್ಯ, ನಿಶಾ ಸೇರಿದಂತೆ ಅನೇಕರು 'ಹೆಲ್ಪ್'ನಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.

ಸ್ಕೂಲ್‌ ಲವ್‌ ಸ್ಟೋರಿ ಆಡಿಯೋ ಬಿಡುಗಡೆ: ‘ಸ್ಕೂಲ್‌ ಲವ್‌ ಸ್ಟೋರಿ’ ಸಿನಿಮಾದ ಆಡಿಯೋ ಬಿಡುಗಡೆ ಆಗಿದೆ. ಹಿರಿಯ ನಟ ಉಮೇಶ್‌ ಈ ಮಕ್ಕಳ ಚಿತ್ರದ ಪ್ರಮುಖ ಹಾಗೂ ಹಿರಿಯ ಪಾತ್ರಧಾರಿ. ತುಮಕೂರಿನ ಚಿರಂಜೀವಿ ನಾಯ್‌್ಕ ಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆ, ಸಂಕಲನ, ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡುವ ಮೂಲಕ ತಾವು ವನ್‌ ಮ್ಯಾನ್‌ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆಡಿಯೋ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಚಿರಂಜೀವಿ ನಾಯ್‌್ಕ, ‘ಸ್ಕೂಲ್‌ ಲವ್‌ ಸ್ಟೋರಿ ಎಂದ ಕೂಡಲೇ ಇದು ಹದಿಹರೆಯದ ಮನಸುಗಳ ಪ್ರೇಮ ಕತೆ ಎಂದುಕೊಳ್ಳುತ್ತಾರೆ. ಆದರೆ, ಇದು ಆ ಪ್ರೇಮ ಕತೆಯಲ್ಲ.

Rishab Shetty: ತುಳುನಾಡ ಸಂಸ್ಕೃತಿಯ 'ಕಾಂತಾರ' ಟೀಸರ್‌ 15 ಲಕ್ಷ ವೀಕ್ಷಣೆ

ಮಕ್ಕಳು ಮತ್ತು ಹೆತ್ತವರ ನಡುವಿನ ಪ್ರೇಮ ಕತೆಯನ್ನು ತೋರಿಸಲಾಗಿದೆ. ಶ್ರೀಮಂತರ ಮಕ್ಕಳು ಮತ್ತು ಬಡವರ ಮಕ್ಕಳ ನಡುವಿನ ಅಂತರ ಚಿತ್ರದ ಪ್ರಮುಖ ಅಂಶ. ಹೆತ್ತವರ ನೆರವಿನಿಂದ ಮಕ್ಕಳು ಯಾವ ರೀತಿ ಸಾಧನೆ ಮಾಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ’ ಎನ್ನುತ್ತಾರೆ. ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಸೃಷ್ಟಿ, ಸಿದ್ದಾಥ್‌ರ್‍, ಪ್ರತೀಕ್‌, ಮಕ್ಕಳಿಗೆ ಹಿತವಚನ ಹೇಳುವ ಪಾತ್ರದಲ್ಲಿ ಹಿರಿಯ ನಟ ಎಂ ಎಸ್‌ ಉಮೇಶ್‌, ಶಿಕ್ಷಕಿಯಾಗಿ ಅನುಷಾ, ರವಿಶಂಕರ್‌, ಶಿವಕುಮಾರ್‌ ಕಾಣಿಸಿಕೊಂಡಿದ್ದಾರೆ. ಎ ಟಿ ರವೀಶ್‌ ಸಂಗೀತ ಸಂಯೋಜನೆಯಲ್ಲಿ ರಾಜೇಶ್‌ಕೃಷ್ಣನ್‌, ವಿಜಯಪ್ರಕಾಶ್‌, ಇಂದುನಾಗರಾಜ್‌, ಮೆಹಬೂಬ್‌ ಸಾಬ್‌ ಕಂಠದಲ್ಲಿ ಹಾಡುಗಳು ಮೂಡಿ ಬಂದಿವೆ. ರವಿ- ಪ್ರಮೋದ್‌ ಕ್ಯಾಮೆರಾ ಚಿತ್ರಕ್ಕಿದೆ.