Asianet Suvarna News

ಹೆದರದಿರು ಓ ಮನಸೇ ಆಲ್ಬಂ ಬಿಡುಗಡೆ!

ಕೊರೋನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ‘ಹೆದರದಿರು ಓ ಮನಸೇ’ ಆಲ್ಬಂ ಬಿಡುಗಡೆ ಆಗಿದೆ. 

Hedaradiru O manase kannada corona song release vcs
Author
Bangalore, First Published Jul 8, 2021, 5:22 PM IST
  • Facebook
  • Twitter
  • Whatsapp

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಅಧ್ಯಕ್ಷ ಜೈರಾಜ್‌, ಪ್ರಮುಖರಾದ ಭಾ ಮಾ ಹರೀಶ್‌ ಕೂಡ ಹಾಗೂ ನಟ, ನಿರ್ಮಾಪಕ, ಉದ್ಯಮಿ ಮಹೇಂದ್ರ ಮುನ್ನೋತ್‌ ಈ ಆಲ್ಬಂ ಬಿಡುಗಡೆ ಮಾಡಿದರು.

ಹರಿಹರನ್‌ ನಿರ್ದೇಶನದ, ಎ.ಟಿ. ರವೀಶ್‌ ಸಂಗೀತ ಸಂಯೋಜನೆ ಮಾಡಿರುವ, ರೇವಣ್ಣ ನಾಯಕ್‌ ಸಾಹಿತ್ಯ ಬರೆದಿರುವ ಆಲ್ಬಂ ಇದಾಗಿದೆ. ವಿನಾಯಕ ಛಾಯಾಗ್ರಹಣ ಮಾಡಿದ್ದಾರೆ. ಸಚಿನ್‌ ಎಸ್‌ ನಗರ್ತ ಹಾಡಿಗೆ ಧ್ವನಿಯಾಗಿದ್ದಾರೆ.ಇದೇ ಸಂದರ್ಭದಲ್ಲಿ ಕಳೆದ ವರ್ಷ ನಿರ್ಮಿಸಿದ ‘ಆತ್ಮನಿರ್ಭರ ಭಾರತ’ ಎನ್ನುವ ಗೀತೆಯನ್ನು ಸಿದ್ಧಪಡಿಸಿದ್ದು ಅದನ್ನೂ ಕೂಡ ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಿದರು.

ಡಬಲ್ ಶೇಡ್‌ನಲ್ಲಿ ಗುರುಕಿರಣ್ ಕೊರೋನಾ ಹಾಡು, ಹೊಸ ಅವತಾರದಲ್ಲಿ ಮ್ಯೂಸಿಕ್ ಡೈರೆಕ್ಟರ್ 

ಗಜೇಂದ್ರ ನಿರ್ದೇಶನ, ವಿಜಯಕೃಷ್ಣ ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದೆ. ಕೊರೋನಾ ಸಮಯದಲ್ಲಿ ಜನರಿಗಾಗಿ ಜೀವ ಪಣವಿಟ್ಟು ದುಡಿದವರ ಬಗ್ಗೆ ಹಾಗೂ ಅವರಿಗೆ ಗೌರವ ಸಲ್ಲಿಸುವ ಈ ಗೀತೆಯನ್ನು ಕೊರೋನ ವಾರಿಯರ್ಸ್‌ಗಳಿಗೆ ಅರ್ಪಣೆ ಮಾಡಲಾಗಿದೆ. ಈ ಹಾಡಿನಲ್ಲಿ ಮಹೇಂದ್ರ ಮುನ್ನೋತ್‌ ಹಲವಾರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

 

Follow Us:
Download App:
  • android
  • ios