Asianet Suvarna News Asianet Suvarna News

ಡಬಲ್ ಶೇಡ್‌ನಲ್ಲಿ ಗುರುಕಿರಣ್ ಕೊರೋನಾ ಹಾಡು, ಹೊಸ ಅವತಾರದಲ್ಲಿ ಮ್ಯೂಸಿಕ್ ಡೈರೆಕ್ಟರ್

ಸ್ವತಃ ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ, ನಟ ಎಲ್ಲವೂ ಆಗಿರುವ ಗುರುಕಿರಣ್  ನಿರೀಕ್ಷೆಯಂತೆ ತಮ್ಮ ಬಹುಮುಖ ಪ್ರತಿಭೆಯನ್ನು ಬಳಸಿಕೊಂಡು ಒಂದು ಹಾಡು ಮಾಡಿದ್ದಾರೆ. ಕೊರೋನ ಕೊಲ್ಲೋಣ ಎನ್ನುವ ಆ ಹಾಡಿನಲ್ಲಿ ಖುದ್ದು ಗುರುಕಿರಣ್ ಅವರೇ ನಟಿಸಿದ್ದಾರೆ. ಎರಡೆರಡು ವರ್ಶನ್ ಗಳಲ್ಲಿ ಬರಲಿರುವ ಕೊರೋನ ಗೀತೆಯ ಬಗ್ಗೆ ಸ್ವತಃ ಗುರುಕಿರಣ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

 

Gurukirans duoble shaded corona song!
Author
Bangalore, First Published Apr 12, 2020, 7:48 PM IST

ಶಶಿಕರ ಪಾತೂರು

ಒಂದು ಕಡೆಯಲ್ಲಿ ದೇಶದ ಲಾಕ್ಡೌನ್ ಸಮಸ್ಯೆಯಿಂದಾಗಿ ಚಿತ್ರೋದ್ಯಮಕ್ಕೂ ತೊಂದರೆಯಾಗಿದೆ. ಆದರೆ ಚಿತ್ರರಂಗದ ಹಲವಾರು ವಿಭಾಗಗಳ ಮಂದಿ ತಾವು ಕೂಡ ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತಿಗಳು ಸಂಗೀತ ನಿರ್ದೇಶಕರು ಸೇರಿ, ಕಿರುಚಿತ್ರ, ಹಾಡುಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಸ್ವತಃ ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಎಲ್ಲವೂ ಆಗಿರುವ ಗುರುಕಿರಣ್ ಏನು ಮಾಡಿರಬಹುದು ಎನ್ನುವ ಕುತೂಹಲ ಸಹಜ. ನಿರೀಕ್ಷೆಯಂತೆ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ಬಳಸಿಕೊಂಡು ಒಂದು ಹಾಡು ಮಾಡಿದ್ದಾರೆ. ಕೊರೋನಾ ಕೊಲ್ಲೋಣ ಎನ್ನುವ ಆ ಹಾಡಿನಲ್ಲಿ ಖುದ್ದು ಗುರುಕಿರಣ್ ಅವರೇ ನಟಿಸಿದ್ದಾರೆ. ಎರಡೆರಡು ವರ್ಶನ್ ಗಳಲ್ಲಿ ಬರಲಿರುವ ಕೊರೋನ ಗೀತೆಯ ಬಗ್ಗೆ ಸ್ವತಃ ಗುರುಕಿರಣ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

ಕೊರೋನಾ ಗೀತೆ ಮಾಡಬೇಕು ಅನಿಸಿದ್ದೇಕೆ?

ನನ್ನ ಮನೆಯಲ್ಲೇ ರೆಕಾರ್ಡಿಂಗ್ ಸ್ಟುಡಿಯೋ ಇದೆ. ಹಾಗಾಗಿ ನನಗೆ  ಹೆಚ್ಚು ಹೊರಗಡೆ ತಿರುಗಾಡಬೇಕಾದ ಆವಶ್ಯಕತೆ ಇರುವುದಿಲ್ಲ. ಆದರೆ ಲಾಕ್ಡೌನ್ ನಿಂದಾಗಿ ಇಡೀ ದೇಶವೇ ಬಂದ್ ಆಗಿದೆ. ಚಿತ್ರೋದ್ಯಮದಲ್ಲಿ ಕೂಡ ಕೆಲಸ ನಡೆಯುತ್ತಿಲ್ಲ. ಅದೇ ವೇಳೆ ಹೊಗಿನ ಸುದ್ದಿಯೆಲ್ಲ ಟಿವಿ, ಫೋನ್ ಗಳ ಮೂಲಕ ತಲುಪುತ್ತಿದೆ. ಬಂದ್ ಇದ್ದರೂ ಜನ ಹೊರಗಡೆ ತಿರುಗಾಡುತ್ತಿರುವುದೇ ಇದರ ಪ್ರಮುಖ ಸಮಸ್ಯೆ ಎನ್ನುವುದು ನನಗೆ ಅರಿವಾಯಿತು. ಅದಕ್ಕಾಗಿ ಜನರಲ್ಲಿ ಒಳಗಿರುವ ಹಾಗೆ ಮನವೊಲಿಸಬೇಕಿತ್ತು. ನಾವು ಚಿತ್ರೋದ್ಯಮದವರು ನಮಗೆ ಹೇಳುವ ಕಲೆ ಗೊತ್ತು. ಆದರೆ ಅದನ್ನು ಸ್ವೀಕರಿಸುವುದು ಬಿಡವುದು ಅವರಲ್ಲಿದೆ. ಆದರೆ ಹೇಳುವುದನ್ನು ಆಕರ್ಷಕವಾಗಿ ಹೇಳಿದರೆ ಖಂಡಿತವಾಗಿ ಒಳ್ಳೆಯ ಪ್ರತಿಕ್ರಿಯೆ ಸಿಗಬಹುದು ಎಂದು ಅನಿಸಿತು. ಹಾಗಾಗಿ ನಾನು ಮನೆಯಲ್ಲಿ ನನ್ನ ಕುಟುಂಬ ಸಮೇತ ಹೇಗೆ ಕಾಲಕಳೆಯುತ್ತಿದ್ದೇನೆಂದು ತೋರಿಸುವಂಥ ಆಲ್ಬಮ್ ಮಾಡಿದ್ದೇನೆ. ಆದರೆ ನಟಿ ತಾರಾ ಅವರೊಂದಿಗೆ ಮಾತನಾಡಬೇಕಾದರೆ ಇದೇ ಹಾಡಿಗೆ ಮತ್ತೊಂದು ಸ್ವರೂಪ ನೀಡುವ ಯೋಜನೆ ಕೂಡ ಮೂಡಿದೆ.

ನೂರರ ಸಂಭ್ರಮದಲ್ಲಿ ಗುರುಕಿರಣ್

ಹಾಗಾದರೆ ಒಂದೇ ಹಾಡು ಎರಡು ರೀತಿಯಲ್ಲಿ ಬರಲಿದೆಯೇ?
ಹೌದು. ಒಂದನ್ನು ನಾನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದೇನೆ. ಅದರಲ್ಲಿ ಆಗಲೇ ಹೇಳಿದಂತೆ ನನ್ನದೇ ಮನೆಯೊಳಗಿನ ದೃಶ್ಯಗಳಿವೆ. ಆದರೆ ಹಾಡಿನ ಮೂಲಕ ಜಾಗೃತಿಯ ಜತೆಗೆ ಸೇವಾ ನಿರತರಿಗೆ ಪ್ರೋತ್ಸಾಹವನ್ನು ಕೂಡ ನೀಡಿದರೆ ಚೆನ್ನಾಗಿರುತ್ತದೆ ಎನ್ನುವ ಸಲಹೆ ನೀಡಿದ್ದು ತಾರಾ ಅವರು.  ಆದರೆ ಅವರ ಸಲಹೆಯನ್ನು ನಾನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಗ ಅವರೇ ಪ್ರಸ್ತುತ ಕಾರ್ಯೋನ್ಮುಖರಾಗಿರುವ ಆಡಳಿತ ಪಕ್ಷದ ಪ್ರಮುಖರಲ್ಲಿ ಮಾತನಾಡಿ ಅವರು ಕೂಡ ವಿಡಿಯೋದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಪೊಲೀಸ್ ಇಲಾಖೆಗೂ ನಮ್ಮ ಹಾಡು ತಲುಪಲು ಅವರೇ ಕಾರಣರಾಗಿದ್ದಾರೆ. ಅವರು ಕೂಡ ಹಾಡಿಗೆ ಹೆಜ್ಜೆ ಹಾಕಿರುವುದು ವೈರಲ್ ಆಗಿದೆ. ಆದರೆ ಜನಪ್ರತಿನಿಧಿಗಳ ಸಂದೇಶವಿರುವ ವಿಡಿಯೋ ಹೊರಗೆ ತರಲು ಇನ್ನು ಕೂಡ ಎರಡು ದಿನಗಳ ಕಾಲಾವಧಿ ಬೇಕಾದೀತು.
 

ಕೊರೋನಾ ವಿರುದ್ಧದ ಹೋರಾಟ; ಡಾ. ಮಂಜುನಾಥ್ ಸಲಹೆ ಕೇಳಿ


ಲಾಕ್ಡೌನ್ ಬಳಿಕ ನಿಮ್ಮ ಸಂಗೀತ ಬದುಕು ಹೇಗಿರಬಹುದು?
ಈಗಾಗಲೇ ನಾನು ಒಪ್ಪಿಕೊಂಡಿದ್ದಂಥ ಮೂರು ಮ್ಯೂಸಿಕಲ್ ಶೋಗಳು ಪೋಸ್ಟ್ ಫೋನ್ ಆಗಿವೆ. ಸಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಒಂದು ವಿದೇಶದ ಕಾರ್ಯಕ್ರಮ ಕ್ಯಾನ್ಸಲ್‌ ಆಗಿದೆ. ಆದರೆ ಒಪ್ಪಿಕೊಂಡಿರುವ ಸಿನಿಮಾಗಳು ಸಾಕಷ್ಟು ಇವೆ. ಉಪೇಂದ್ರ ನಾಯಕರಾಗಿ ಜಯರಾಮ್ ಭದ್ರಾವತಿ ನಿರ್ದೇಶನದಲ್ಲಿರುವ `ಬುದ್ಧಿವಂತ-2' ಚಿತ್ರದ ಹಾಡುಗಳ ಕೆಲಸ ನಡೆದಿದೆ. ಒಟ್ಟು ನಾಲ್ಕು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳ ಟ್ಯೂನ್ ತಯಾರಾಗಿವೆ. ವಸಿಷ್ಠ ಸಿಂಹ ನಟಿಸಿರುವ `ಕಾಲಚಕ್ರ', ವಿನೋದ್ ಪ್ರಭಾಕರ್ ನಾಯಕರಾಗಿರುವ `ಫೈಟರ್' ಚಿತ್ರಗಳಿಗೆ ಕೂಡ ನನ್ನದೇ ಸಂಗೀತವಿದೆ. ಇವುಗಳಲ್ಲದೆ ಲಿಖಿತ್ ಶೆಟ್ಟಿ ನಟನೆಯ ಒಂದು ಚಿತ್ರ ಕೂಡ ಪಟ್ಟಿಯಲ್ಲಿದೆ.  ಧೂಮ್ ಎಗೈನ್ ಹೆಸರಿನ ಸಿನಿಮಾದ ಬಗ್ಗೆಯೂ ಮಾತುಕತೆ ನಡೆದಿದೆ. ಲಾಕ್ಡೌನ್‌ ಮುಗಿದ ಬಳಿಕ ಒಂದೊಂದೇ ವಿಭಾಗ ಚೇತರಿಸಿದ ಮೇಲೆ ನಾವು ಕೂಡ ನಿಧಾನಕ್ಕೆ ಎದ್ದುನಿಲ್ಲುವಂತಾಗಬಹುದು.


 

Follow Us:
Download App:
  • android
  • ios