ಶಿವರಾಜ್‌ ಕುಮಾರ್‌ ಅಶ್ವತ್ಥಾಮನ ಹೊಸ ಅವತಾರ ಎತ್ತಿದ್ದಾರೆ. ಹೊಸ ಚಿತ್ರದಲ್ಲಿ ಶಿವಣ್ಣ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ಚಿತ್ರವನ್ನು ಸಚಿನ್‌ ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್‌ ಶೆಟ್ಟಿಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ನಿರ್ದೇಶನದ ಬಳಿಕ ಸಚಿನ್‌ ಕೈಗೆತ್ತಿಕೊಂಡಿರುವ ಚಿತ್ರವಿದು. ಪುಷ್ಕರ ಮಲ್ಲಿಕಾರ್ಜುನಯ್ಯತಮ್ಮ ಪುಷ್ಕರ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಕನ್ನಡಕ್ಕೆ ಬರ್ತಿದ್ದಾನೆ ರಾಬಿನ್ ಹುಡ್;ಪುಷ್ಕರ್-ಸುನಿ ಹೊಸ ಸಿನಿಮಾ!

ಕನ್ನಡ ರಾಜ್ಯೋತ್ಸವದಂದೇ ತಮ್ಮ ಹೊಸ ಚಿತ್ರವನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಘೋಷಿಸಿಕೊಂಡಿದ್ದಾರೆ. ಇದೊಂದು ಸೂಪರ್‌ ಹೀರೋ ಕೇಂದ್ರಿತ ಮೈಥಲಾಜಿಕಲ್‌ ಸಿನಿಮಾ. ಅಂದರೆ ಹಿಂದಿಯಲ್ಲಿ ಹೃತಿಕ್‌ ರೋಷನ್‌ ನಟಿಸಿದ್ದ ಕ್ರಿಷ್‌ ಚಿತ್ರದ ಹೀರೋ ಮೈಥಲಾಜಿಕಲ್‌ ಆಗಿ ಕಾಣಿಸಿಕೊಂಡರೆ ಹೇಗಿರುತ್ತದೆ ಎನ್ನುವ ಕಲ್ಪನೆಯೇ ಈ ಚಿತ್ರದ ಕತೆ ಎನ್ನಬಹುದು.

View post on Instagram

ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಶೂಟಿಂಗ್‌ ನಡೆಯಲಿದೆ. ‘ಇದು ನನ್ನ ಸೋಲೋ ನಿರ್ಮಾಣದ ಸಿನಿಮಾ. ನಾವೆಲ್ಲ ಶಿವಣ್ಣ ಅವರ ನಟನೆಯ ಸಿನಿಮಾಗಳನ್ನು ನೋಡುತ್ತ ಸಿನಿಮಾ ಕನಸು ಕಾಣುತ್ತಿದ್ದವರು. ಈಗ ಅವರ ಜತೆಗೇ ಸಿನಿಮಾ ನಿರ್ಮಿಸುವ ಅವಕಾಶ ಬಂದಿದೆ. ಚಿತ್ರಕ್ಕೆ ಅಶ್ವತ್ಥಾಮ ಎನ್ನುವ ಹೆಸರು ಸಿಕ್ಕಿಲ್ಲ. ಹೀಗಾಗಿ ಬೇರೆ ಹೆಸರಿಗಾಗಿ ಹುಡುಕಾಟ ಮಾಡುತ್ತಿದ್ದೇವೆ. ಸದ್ಯದಲ್ಲೇ ಟೈಟಲ್‌ ರಿವೀಲ್‌ ಮಾಡಲಿದ್ದೇವೆ. ಭಾರತೀಯ ಪುರಾಣಗಳ ಆಧಾರದ ಮೇಲೆ ಕನ್ನಡದಲ್ಲಿ ಮೊದಲ ಬಾರಿಗೆ ಸೂಪರ್‌ ಹೀರೋ ಸ್ಪೈ ಥ್ರಿಲ್ಲರ್‌ ಸಿನಿಮಾ ಮಾಡುತ್ತಿದ್ದೇವೆ. ಚಿತ್ರದ ನಾಯಕ ಮಹಾಭಾರತದ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ.